(೨೬, ಆಗಸ್ಟ್ ೨೦೦೨ ರಲ್ಲಿ ಪ್ರಕಟವಾದ ದೇವುದಾಸ ಶೆಟ್ಟಿಯವರ ಕೃತಿ)
ಅರ್ಪಣೆ
ನನ್ನ ಅಪ್ಪಾಜಿ, ಅಮ್ಮನವರಿಗೆ
ಸಮರ್ಪಣೆ
ನನ್ನ ಪತ್ನಿ ಸುಮಿತ್ರಾ
ಮಕ್ಕಳು.... ಸುಷ್ಮಾ - ರೇಶ್ಮಾ (ಕಾಂಚು) - ಮಿಥುನ್
ಮುನ್ನುಡಿ
ಹಲವರು ತಮ್ಮ. ಕಢಾಸಂಗ್ರಹದಲ್ಲಿ ಮುನ್ನುಡಿ ಬರೆಯುವರು - ಯಾ - ಹಲವರು ಖ್ಯಾತ ಸಾಹಿತಿಗಳಿಂದ ಮುನ್ನುಡಿ ಬರೆಯಿಸುವರು. ನಾನು ಕಥೆಗಳನ್ನು ಬರೆದಿಲ್ಲ. ನಾನು ನನ್ನ ಮನದ ತುಮುಲವನ್ನು ಬರೆದಿರುವೆನು. ನನ್ನ ಅಂತರಾತ್ಮದಲ್ಲಿ ಹುದುಗಿದ್ದ ಜ್ವಾಲೆ, ಬೇನೆ, ಆತುರದ ಬಗ್ಗೆ ಬರೆದಿರುವೆನು. ಇಲ್ಲಿ ಕಥೆಯಂತಹ ಸೊಗಸು ಇರಲಿಕ್ಕಿಲ್ಲ, ಇಲ್ಲಿರುವುದು ಕಲಾವಿದನ
ದುಗುಡ, ತವಕ, ಕತೆಯನ್ನು ಕಲೆಯಾಗಿಸುವ ಸ್ಪಂದನ, ತನ್ನ ಕಲೆಯಲ್ಲಿರುವ ಅಸ್ಮಿತೆ ಮತ್ತು ಧೃಡತೆ! ಎನ್ನ ಆತ್ಮೀಯತೆ!
ನಾನು ನನ್ನವರೊಡನೆ ಹೂರಾಡಿದೆ, ಆಯುಧಗಳಿಲ್ಲದ ಹೋರಾಟ, ನನ್ನವರು ನನ್ನನ್ನು ಅರಿಯಲಿಲ್ಲ - ಬೇನೆಕೊಟ್ಟರು. ಕಲೆಯಿಂದ ನಾನು ಬದುಕಿ ಉಳಿದೆ, ಪುನಃ ನಾನು ಹಲವಾರು ಚಿತ್ರಗಳನ್ನು ಬಿಡಿಸಿದೆ - ಎಲ್ಲವೂ ನನ್ನ ಮನದ, ಮೂಲೆಯಲ್ಲಿದ್ದ ಅಂತರಾತ್ಮದ ಬಣ್ಣಗಳ ಪ್ರಪಂಚದಿಂದ - ನಾನು.... ಹೋರಾಡಿದೆ.... ಈಗ ಇಷ್ಟು ಸಾಕು!
ನಾನು ಡಾ| "ಜೀವಿ' ಕುಲಕರ್ಣಿಯವರಿಗೆ ಆಭಾರಿಯಾಗಿದ್ದೇನೆ.
ಯಾವುದೇ ಕಥೆಯನ್ನು ಬರೆಯುವಾಗ, ಓದುವಾಗ, ಓದುಗರ ಕಲ್ಪನೆ ಹೇಗಿರಬೇಕು. ಅವರ ಭಾವನೆ ಹೇಗಿರಬೇಕು, ಅವರು ಕಥೆಯನ್ನು ಅರ್ಥಮಾಡಿಕೊಳ್ಳಲು ಸಮರ್ಥರೇ ಅಂತ ನನಗೆ ಸದಾಕಾಲ ಕೊರೆಯುವುದು. ಅಂದರೆ ಕಥೆಯಲ್ಲಿ ಒಳಕದ'ಯ ಬಾವನೆಯ ಪರಿಪೂರ್ಣ ಅರ್ಥವಿರಬೇಕು. ನರ್ತಕಿಯರ ನಾದಮಯ ಹೆಜ್ಜೆಗಳ ರಂಕಾರವಿರಬೇಕು. ಸ್ತ್ರೀ ಪುರುಷರ ಆವೇಶದ ಆಲಿಂಗನಗಳಿರಬೇಕು. ಕ್ಷಣ ಭಂಗುರವಾದ ಜೀವನದಲ್ಲಿಯ ಪ್ರಜ್ಞೆಯನ್ನು ಎಲ್ಲಿಯಾದರೂ ಮರೆಯಲು ಹಚ್ಚುವಂತಹ ತನ್ಮಯತೆ ಅದರಲ್ಲಿ ಇರಬೇಕು. ನಾನು ಹೇಳ ಹೊರಟಿರುವ ನನ್ನ ಜೀವನದ ಕಥೆಯಲ್ಲಿ ಮದಿರಾ ಪಾತ್ರೆಗಳಿಲ್ಲ, ಮನಕ್ಕೆ ಕಚಕುಳಿಯನ್ನು
ಉಂಟು ಮಾಡುವ ನರ್ತಕಿಯರ ಕುಣಿತವಿಲ್ಲ! ಪಕ್ಷಿಗಳ ಇಂಚರ ನಿನಾದವಲ್ಲ (ಇಲ್ಲಿ ಇರುವುದು ಈ ಕಲಾವಿದನ ಬಾಳಹೋರಾಟ - ಮೈ ಮನ ನಡುಗಿಸುವ ಬೇನೆ, ಭಾವನೆಗಳ ತಾಕಲಾಟ ಮಾತ್ರ! ನಾನೊಬ್ಬ ಜೀವನದ ಹಂಗು ತೊರೆದು
ಕಾದಾಡಬಲ್ಲ ಒರಟು ಸೈನಿಕ, ಈ ಕಥೆಯನ್ನು ನನ್ನ ಮನದ: ನೆಮ್ಮದಿಗೊಸ್ಕರ ಹೇಳ ಹೊರಟಿರುವನು ವಿನಃ ಬೇರೇನೂ ಸ್ವಾರ್ಥವಿಲ್ಲ. ಮನುಷ್ಯನಿಗೆ ಎಲ್ಲಿಯಾದರೂ ತನ್ನ ಮನದಲ್ಲಿರುವುದನ್ನು ಬಿಚ್ಚಿ ಹೇಳದಿದ್ದರೆ ತಾವು ಮುಕ್ತರಾದಂತೆ ಕಾಣುವುದೇ ಇಲ್ಲ. ಆದ್ದರಿಂದ ನಾನುನನ್ನ ಕಥೆಯನ್ನು ಭಾವನೆಯನ್ನು ತೆರೆದಿಟ್ಟ ಮನದಿಂದ ಹೇಳುವೆನು. ಜೀವನದ ಈ ನನ್ನ ಕಥೆಯನ್ನು, ನನ್ನ ಭಾವನೆಯನ್ನು ಹೇಗೆ ಹೇಳಬೇಕೆಂಬುದೇ ಈಗ ನನ್ನ ಮುಂದಿರುವ ಸಮಸ್ಯೆ!
ಖಡ್, ಖಡಲ್ ಎಂದು ಸಿಡಿಲಿನ ಮರ್ಮಭೇಧಕ ಸಪ್ಪಳವನ್ನು ಕೇಳಿದ ನಂತರ ಕಾಡ ಕುದುರೆಗಳ ಹಿಂಡಿನಿಂದ ಹಲವಾರು ಕುದುರೆಗಳು ದಿಕ್ಕು ಪಾಲಾಗಿ ಓಡುವಂತೆ, ಜೀವನದ ಎಷ್ಟೊ ಘಟನೆಗಳು ನನ್ನ ಕಣ್ಣ ಮುಂದೆ ಹಾಯ್ದು ಹೋಗಿ ಮಾಯವಾಗುವುದು. ಅದನ್ನು ಕ್ರಮವಾಗಿ ಜೋಡಿಸಲು ನಾನು ಅಸಮರ್ಥ. ಸೀಳಿನಿಂತ ಕೋಡುಗಲ್ಲಿನಲ್ಲಿ ನನ್ನಂತಹ
ಕಾಡಹೂವೊಂದು ಅರಳುವುದಾ ಅಂತ ಮನ ಎಣಿಸುವುದು. ಹಲವು ಸಲ. ಹೌದು! ವಿಧಿಯ ಈ ವಿಕಸಿತ ರಂಗಮಂಚದಲ್ಲಿ ನನ್ನಂತಹ ಕಾಡಹೂ ಅರಳಿ ಸಮಯದಮುಂಚೆಯೇ ಅದು ಮುದುಡಿತೆಂದು ಹೇಳಬಹುದು. ಈ ಸಮಯದಲ್ಲಿ ನನಗೆ ಮತ್ತೆ ಬರಡು ಭೂಮಿಯಲ್ಲಿ ಒಂದೇ ಒಂದು ಮರ, ಏಕೆ ನನ್ನ ಕಣ್ಣ ಮುಂದೆ ನಿಲ್ಲುವುದೆಂದು ಅರ್ಥವಾಗುತ್ತಿಲ್ಲ. ದೂರ ಹೊರಟ ನನಗೆ ಅಂಕು ಡೊಂಕು, ಹಾದಿಯಲ್ಲಿ ನಾನೋರ್ವನೇನಿಂತತೆ ಭಾಸವಾಗುವುದು. ಇಲ್ಲಿ ನನಗೆ ಪುನಃ ಬರೆಯಬೇಕು ಪುನಃ ಬರೆಯಬೇಕು ಅಂತ - ಎನಿಸುವುದು. ನಾನು ಹುಟ್ಟಿದ್ದು ಅತ್ಯಂತ ಹೆಸರುಳ್ಳ ದಕ್ಷಿಣ ಕನ್ನಡದ ಬಂಟ ಸಮಾಜದಲ್ಲಿ. ನನಗೆ ಹುಟ್ಟಿನಲ್ಲಿ ದಾರಿದ್ರ್ಯದ ಅಭಿಶಾಪವಿತ್ತಂತೆ. ನಮ್ಮ ಅಮ್ಮ ಹೆಳುತಿದ್ದರು. ಅದ್ಕಾರೋ ಜೋಯಿಸರು ಹೇಳಿದ್ದರಂತೆ, ಯಾ - ಈ ಬಾಲಕ ನಿಮ್ಮನ್ನು (ಶ್ರೀಮಂತರ ತುತ್ತ ತುದಿಗೇರಿಸ ಬಹುದು, ಯಾ ದರಿದ್ರದ ಬಂಡ ಸಾಲೆಯಲ್ಲಿ ಕುಳ್ಳಿರಿಸಬಹುದು. ಜೋಯಿಸರ ಎರಡೆನೆಯ ಮಾತು ಸತ್ಕವಾಯಿತು. ನನ್ನ ಅಪ್ಪಾಜ್ನಿಯವರ ವ್ಯಾಪಾರವೆಲ್ಲಾ ಮುಗುರಿಬಿದ್ದು ನಾವು ದಿಕ್ಕು
ಪಾಲಾದೆವು. ಉಣಲು, ಉಡಲು, ತೊಂದರೆಯಾಗಿ ಅಪ್ಪಾಜಿಯು ಸಂಸಾರದಿಂದ ಸನ್ಮಾಸಿಯಾದರೂ, ಅವರೆಂದೂ ತನ್ನವರಿಂದ ಯಾವುದೇ ಸಹಾಯವನ್ನು ಕೇಳಲಿಲ್ಲ. ಕೊಡಲು ಸಮರ್ಥವಿದ್ದ ಅವರು, ತನ್ನವರು ಅವರವರ ಒಳಜಗಳದಲ್ಲೇ ತಮ್ಮ ಆಯುಷ್ಯದ ಸುದಿನವನ್ನು ದುರ್ದಿನವಾಗಿಸಿದರು. ವಿಧಿಯ ಈ ವಿಕಸಿತಘಟನೆಯುನನ್ನ ಬಾಲಹೃದಯದಲ್ಲಿ ನನ್ನವರಿಗಾಗಿ, ಮುರುಕ ,ತೋರಿಸಿದರೆ, ಪರಕೀಯರು ನನ್ನ ಆತ್ಮೀಯ ಮಿತ್ರರಾದರು ನನ್ನ ಸಂಗತಿಗಳಾದರು. ನನ್ನವರಲ್ಲಿ ನಾವು ಪರಕೀಯರಾದೆವು.
ಈ ಮುಂಬಾಯಿ ನಗರವುನನ್ನ ಜೀವನಕ್ಕೆ ತಿರುವನ್ನು ಕೊಟ್ಟ ನಗರ. ನನಗೆ ಅಮೃತ ಬಳ್ಳಿಯ ಕಷಾಯವನ್ನು ಕುಡಿಸಿದ ನಗರ. ಈ ನಗರದ ನೆನಪು ನನ್ನನ್ನು ಅನಂತದೆಡೆಗೆ ಸಾಗಿಸುವುದು. ಮಲಾಡಿನಂತಹ ಕೊಂಪೆಯಲ್ಲಿ ಜನನ, ದಾದರಿನಲ್ಲಿ ವಿಧ್ಯಾಭ್ಶಾಸ, ಮುಲುಂಡಿನಲ್ಲಿ ಜೀವನದ ಮಹತ್ತರ ದಿನಗಳು. ನೆನಸಿದರೆ ನಗುಬರುವುದು. ಬಾಲ್ಕದಲ್ಲಿ ಹೊಯಿಗೆ ರಾಶಿಯಲ್ಲಿ ಆಡಿದ ದಿನಗಳು, ಹೊಯಿಗೆ ಗುಡ್ಡೆ, ಮಿತ್ರರೊಡನಾಡಿದ, ಪಕಡಾಪಕಡಿ, ಕಣ್ಣುಮುಚ್ಚಾಲೆ, ಬುಗರಿ ಆಟ, ಗೋಲಿ ಆಟ,
ನನಗೆ ಪುನಃ ಪುನಃ ನೆನಪಿಗೆ ಬರುವುದು. ಈ ಎಲ್ಲಾ ಆಟವೂ ನನಗೆ ಅಪ್ಪಾಜಿಯಿಂದ ಪೆಟ್ಟು ತಿನ್ನಿಸಿದ್ದೂ ಉಂಟು. ಬಾಲ್ಕಾವಸ್ಥೆಯೆಂದರೆ ಅದು ಮೋಹಕವಾದ ತಿರುಗಣಿ. ಬಾಲ್ಕಾವಸ್ಥೆಯೆಂದರೆ, ಎತ್ತರಕ್ಕೆ ಇನ್ನೂ ಎತ್ತರಕ್ಕೆ ಹಾರುವ ಆಶೆಯ ತೆರೆಯಂತೆ, ಅಂತರಾತ್ಮದಲ್ಲಿ ಹುದುಗಿರುವ ಬೆಳ್ಳನೆಯ ಸ್ಪಟಿಕದಂತಿರುವ ಶುಭ್ರ ಬಿಳಿಬಣ್ಣ! ಇಲ್ಲಿ ಸುಳ್ಳು ಪ್ರತಿಷ್ಠೆಯ
ಮುಖವಾಡವಿಲ್ಲ. ಆಡಂಬರದ ಆಕ್ರೋಶವಿಲ್ಲ. ಮೇಲುಕೀಳೆಂಬ ಭಾವನೆಯಿಲ್ಲ. ಜೀವನದ ಬಾಕಿ ಇರುವ ಆಯುಷ್ಯದ ಮರುಭೂಮಿಯನ್ನು ತುಳಿಯುವಾಗ ಗಾಯಗೊಳ್ಳುವ ಶರೀರಕ್ಕೆ, ಭಗವಂತನು ನಿರ್ಮಿಸಿರುವ ನಿಸರ್ಗದ ಶೀತಲವಾಗಿರುವ ತಂಪು ನೀರಿನ, ತಂಪನ್ನು ಕೊಡುವಂತ ಅದಾಗಿರುತ್ತದೆ. ಮುಂಬಾಯಿಯ ಬಾಲ್ಕಾವಸ್ಥೆಯನ್ನು ನೆನೆಯುವಾಗ ನಾನೇಕೆ
ದೊಡ್ಡವನಾದೆ ಅಂತ ಮನವು ಎಣಿಸುವುದು. ಭಗವಂತನು ಬಾಲ್ಕಾವಸ್ಥೆಯನ್ನು ಏತಕ್ಕೆ ಬೇಗನೆ ಮುಗಿಸಿದ, ಏತಕ್ಕೆ ನೂರು ವರುಷ ಇಡಲಿಲ್ಲ ಅಂತಮನ ಎಣಿಸುವುದು.
ನನಗೆ ನನ್ನ ಬಾಲ್ಯಾವಸ್ಥೆ ಸುಗಂಧಭರಿತವಾಗಿರಲಿಲ್ಲ.' ನಾನು ನನ್ನ ಬಾಲ್ಕಾವಸ್ತೆಯನ್ನು ಈಗ, ಜೀವನದ ಐವತ್ತು ವರುಷದ ನಂತರ, ಸುಗಂಧ ಭರಿತವಾಗಿತ್ತು ಅಂತ ಹೇಗೆ ಬರೆಯಲಿ ಇದಕ್ಕೆ ನಾನು ಅಸಮರ್ಥ. ಆಗಿನ ಕನಸು, ಜೀವನದ ಗಾಳಿಯಲ್ಲಿ ಓಡುವ ರಥದಂತೆ ನನಗನಿಸುತ್ತಿತ್ತು. ಬಂಧನವಿಲ್ಲದ ಕಲ್ಪನೆಯ ಬಿಳಿಯ ಕುದುರೆಯನ್ನು ಕಟ್ಟಿದ ಒಂದು ಸ್ವೇಚ್ಛಾ ರಥ! ದೂರದಲ್ಲಿ ಕಾಣುವ ಕಡಲ ನೀರು ಎಲ್ಲಿ ನೀಲಾಕಾಶಕ್ಕೆ . ಮುಟ್ಟಿರ ಬಹುದೇನೊ- ಎಂದು. ನೋಡಲು ರಥವು, ಅವಳ ಅಗಣಿತ ತೆರೆಗಳ ಮೇಲೆ ನಲಿದಾಡಿ ಕ್ಷಣದಲ್ಲೇ! ಕ್ಲಿತಿಜದ ಕಡೆಗೆ ಹಿಂತಿರುಗುವ ಆಭಾಸ! ಹಲವುಸಲಆರಥವುನೀಲಾಕಾಶದಲ್ಲಿ ಲಕಲಕನೆ ಹೊಳೆವ ಅಸಂಖ್ಯ ನಕ್ಷತ್ರಗಳ ಚಂದವನ್ನು ನೋಡಿ ಅದನ್ನು ಅಪ್ಪಿ ಹಿಡಿಯಲು ಸಾಗಿದಂತೆ, ಆ ನೀಲಾಕಾಶದ ಚಪ್ಪರವೂ ಭೂಮಿಯಮೇಲೆ ಯಾಕೆ ಬೀಳುವುದಿಲ್ಲ ಅಂತ ತಿಳಿಯಲು ಎತ್ತರಕ್ಕೆ ಇನ್ನೂ ಎತ್ತರಕ್ಕೆ ಹಾರಿ ಬರುತ್ತಿತ್ತು. ಹಲವು ಸಲ ನನ್ನ ಮನದಾಳದಲ್ಲಿ ಹಲವಾರು ಭಯಂಕರ ಸಪೃ್ಪಳವು ನನಗ ಕೇಳುತ್ತಲೇ ಇರುವುದು. ನಾನು ಮನದಾಳದ ಆ ಸಪ್ಪಳವನ್ನು ದೂರಸರಿಸಲು ಪ್ರಯತ್ನಿಸುವೆ. ಅವರದು ಚಂಡಮಾರುತದಂತೆ ಹೆಚ್ಚು, ಹೆಚ್ಚು ಪ್ರಳಯಾಗ್ದಿಯಾಗಿ, ಪ್ರಜ್ವಲಿಸುತ್ತಾ ನನ್ನ ಹತ್ತಿರ, ಹತ್ತಿರ ಬರುವುದು. ನಾನು ಹೆದರುವುದಿಲ್ಲ, ಬೆದರುವುದಿಲ್ಲ. ಶಾಂತವಾಗಿ ನಾನದನ್ನು ನೋಡಿ ನಗುವ ಇದು ನನ್ನ ಬಾಲ್ಯಾವಸ್ಥೆಯ ಮುಗ್ಧ ನಗು ವಿನಃ ಬೇರೇನೂ ಅಲ್ಲ. ಬಾಲ್ಯಾವಸ್ಥೆಯಲ್ಲಿಯ ಕನಸು ನನ್ನನ್ನು ಎಡಬಿಡದೆ ಬೆಂಬಲಿಸುತಿತ್ತು. ದೂರ ಆಕಾಶದಲ್ಲಿ ಹಾರುವ ವಿಮಾನ ನೋಡಿ, ನಾನಿದರ ` ಚಾಲಕನಾಗಿದ್ದರೆ, ಸಮುದ್ರದ ಅಂಚಿನಲ್ಲಿ ನಿಂತು ನೋಡಿದ ಹಡಗು ಹಗುರ, ಹಗುರ ಮಾಯವಾದಾಗನಾನು ಇದ್ದರಲ್ಲಿದ್ದರೆ, ಪಕ್ಕನೆ ಹಾರುವ ಹಕ್ಕಿಯನ್ನು ನೋಡಿದಾಗ, ಅದರ ಸಂತಸ ನನಗಿಲ್ಲವಲ್ಲಾ ಅಂತಮನ ನೋಯುತ್ತಿತ್ತು. ಬಾಲ್ಕಾವಸ್ಥೆಯ ಬಗ್ಗೆ ಬರೆಯಲು ನಾನು ಇನ್ನು ಅಸಮರ್ಥನೆಂದು ಕಾಣುವುದು. ನನ್ನ ಜನನ (ಶ್ರೀಮಂತ ಬಂಟ ಮನೆತನದಲ್ಲಿ ಆಗಿತ್ತು. ಅಂತನಿಮಗೆ ತಿಳಿಸಿದ್ದ. ಉಣಲುಉಡಲುತೊಂದರೆಯಿಲ್ಲದ ಮನೆತನ!
ನನ್ನ ಪ್ರಕಾರ ನನ್ನ ಹಟ್ಟನಿಂದಲೇ ನನ್ನಅಪ್ಪಾಜಿಯವರು ಬಡವರಾದರಂದು ನನ್ನ ತಾಯಿ ಅನ್ನುತ್ತಿದ್ದರು. ನಾನು ಬಹುಶಃ
ದಾರಿದ್ರ್ಯವನ್ನು ಹೊತ್ತು ತಂದೆನೆಂದು ಇಲ್ಲಿ ನನಗೆ ಕಾಣುವುದು.
ನನ್ನ ಜೀವನದ ವಿಶ್ವಕ್ಕೆ ಇಬ್ಬರು ದ್ವಾರಪಾಲಕರಿದ್ದರು. ನನ್ನ ತಂದೆ, ನನ್ನ ತಾಯಿ. ಈವತ್ತು ಸಹ ಅವರ ನೆನಪು, ನನ್ನ ಅಂತಃಕರಣದಲ್ಲಿಯ ಒಂದು ಕೋಮಲವಾದ ತಂತಿಯನ್ನು ಮೂಟಿದಂತಾಗುವುದು. ನಾನವರಿಗೇನು ಕೊಟ್ಟೆ? ನನಗೆ ಗೂತ್ತಾದಂತೆ ಕೃತಜ್ಞತೆಯ ಮತ್ತು ವಾತ್ಸಲ್ಯದಿಂದ ತುಂಬಿರುವ ಅಶ್ರುಬಿಂದುಗಳು ತಟ್ಟನೆ ನನ್ನ ಕಣ್ಣಂಚಿನಲ್ಲಿ ನಿಲ್ಲುವುದು! ಆದರೆ ಕ್ಷಣ ಮಾತ್ರ! ತಕ್ಷಣ ನಾನದನ್ನು ಮರೆಯುವನು. ಏಕೆಂದಲ್ಲಿ ಕಣ್ಣೀರು ದುರ್ಬಲ ಜನರ ಪ್ರತೀಕ! ಅಂತ: ನನಗೆ ತಿಳಿದಿರುವುದು. ಜಗತ್ತಿನ ಯಾವುದೇ ಬೇಗೆಯನ್ನು ಕಣ್ಣೀರಿನಿಂದ ನಂದಿಸಲು ಸಾಧ್ಯವಿಲ್ಲ. ಆದರೆ ಕಣ್ಣೀರಿನ ಎರಡು ಹನಿಗಳು ನನ್ನ ಆತ್ಮವನ್ನು ಶಾಂತಗೊಳಿಸಿತ್ತು. ಯಾ ನನ್ನ ಮನಸ್ಸನ್ನು ಹಗುರಗೊಳಿಸಿತ್ತು. ಅಂತ ನನಗನಿಸುವುದಿಲ್ಲ. ಕಾರಣ ಆ ಎರಡು. ಹನಿ ಕಣ್ಣೀರನ್ನು ಬಿಟ್ಟರೆ, ನಾನವರಿಗೆ ಏನನ್ನೂ, ಬಹುಮೂಲ್ಯವಾದಂದನನ್ನು ಎಂದೂ ಕೊಡಲಾಗಲಿಲ್ಲ. ಅಲ್ಲದೆ ಇದಕ್ಕಿಂತ ಬೆಲೆಯುಳ್ಳ ಯಾವುದೇ ವಸ್ತುವು, ಅಣ್ಣ, ತಮ್ಮ, ತಂಗಿ, ತಂದೆ ತಾಯಿಯವರಿಗೆ, ಕೊಡುವಂತಹದು ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವುದೆಂದಾ ನನಗನಿಸುವುದಿಲ್ಲ! ನಾನು ನನ್ನ ತಾಯಿ ತಂದೆ ಸಹೋದರ, ಸಹೋದರಿಯರಿಂದ ಯಾವುದೇ
ಅಪೇಕ್ಸೆಯನ್ನು ಮಾಡಿದ್ದಿಲ್ಲ. ಅವರು ನನಗೆ ನಿರ್ಮಲ ಪ್ರೀತಿ ಕೊಟ್ಟರೆ ಸಾಕು! ಆದ್ದರಿಂದಲೇ ಅದರ ನೆನಪಿಗಾಗಿ ನನ್ನ ಕಣ್ಣಂಚಿನಿಂದ ಕೃತಜ್ಞತೆಯ ಹಾಗೂ ವಾತ್ಸಲ್ಯದ ಅರಿವಿನಿಂದ ತುಂಬಿದ ಎರಡೇ ಎರಡು ಅಶ್ರುಬಿಂದುಗಳು ಬಂದು ನಿಲ್ಲುವುದು...
ನನ್ನ ಅಪ್ಪಾಜಿಯು ತೀರಿದಾಗ ನಾನು ತುಂಬಾ ಅತ್ತಿದ್ದೆ. ಯಾರಿಗೂ ಕಾಣದಂತೆ ಅವರಿಗಾಗಿ ಕಂಬನಿ ಹಾಕಿದ್ದೆ. ಆ ಬಡಪಾಯಿ
ಜೀವವುನನಗೇನು ಕೊಡದಿದ್ದರೂ ನಾನು ಕಂಬನಿ ಹಾಕಿದ್ದೆ! ಕಾರಣ ಅವರು ನನ್ನ 'ಜೀವನದ ದ್ವಾರಪಾಲಕರಾಗಿದ್ದರು. ಪಾಷ ಅವರಲ್ಲಿ ಏನಿತ್ತು ನಮಗೆಲ್ಲ. ಕೊಡಲು! "ಮೃತ್ಯು'' ಜೀವನದ ಹಾದಿಯಲ್ಲಿಯವಿಲಕ್ಷಣವಾದನದಿ! ಆದ್ದರಿಂದ ಅದನ್ನು ದಾಟುವಸಾಮರ್ಥ್ಯವಿಲ್ಲ! ಭಗವಂತನು ಓಡಿಸುವ ಕುದರೆಯಲ್ಲಿ ಇದೊಂದು ಮೊಂಡು ಕುದುರೆ. ಆತನು ಈ ಸಲ ಅಸಂಖ್ಯಾತ
ಜೀವವನ್ನು ತನ್ನ ಪಾಡದಿಂದ ತುಳಿದಿರಬಹುದಲ್ಲವೇ? ಅಹುದು ಆವತ್ತು ಆತನು ನನ್ನ ಅಪ್ಪಾಜಿಯನ್ನು ನನ್ನ ಕಿರುತಂಗಿ
ಕಾಂಚನಾಳನ್ನು ತುಳಿದನು. ವಿಧಿಯ ವಿಕಸಿತ ಈ ಆಟಕ್ಕೆ ನಾವೇನು ಮಾಡಬಹುದು. ಇಲ್ಲಿ ನಾವು ಮೂಕ ಪ್ರಾಣಿ! ಮಾತ್ರ! ನನಗೆ ಬೇಸರವಿಲ್ಲ. ಬಂದವನು ಹೋಗುವುದುಸಹಜ ! ನಾವೆಲ್ಲಾ ರಂಗಮಂಚದ ಕಲಾವಿದರಂತೆ. ಜೀವನದ ನಾಟಕದ ನಂತರ ಹೋಗಲೇಬೇಕು!
ನನಗೆ ಜೀವನದ ಹಲವಾರು ಘಟನೆಗಳು ನೆನಪಿಗೆ ಬರುವವು, ನೆನಪನ್ನು ಹಲವರು ನವಿಲಗರಿಯೆಂದರೆ, ನಾನನ್ನುವೆ-ಅಲ್ಲ ಅದು ಬಕುಲ ಹೂ, ಮಲ್ಲಿಗೆ ಜಾಜಿಯಂತಹ ಸುಗಂಧಭರಿತ ಹೂ! ಸುಗಂಧವನ್ನು ಬಿಚ್ಚಿ ಹರಡುತ್ತದೆ. ಅದು. ನನಗೆ ಸಂತಸವನ್ನು ಕೊಡುವುದಿಲ್ಲ. ನನಗದು ಶ್ರೀ ಗಂಧದ ಮಠದ ಕೊರಡಿನಂತಿದೆ. ತನ್ನ ಸುಗಂಧವನ್ನು ಬೀರುವ
ಅತೀ ಸುಂಡರ ಪರಿಮಳದ ಅಳವಾದ ಮುದ್ರೆಯನ್ನು ಮನಕ್ಕೆ ಕೊಟ್ಟು ಮುಂದಕ್ಕೆ ಸಾಗಿ ದೇವರ ಪದಕಮಲದಲ್ಲಿ ಸೇರುವುದು. ನಾನು ನನ್ನ ಜೀವನದಲ್ಲಿ ಇದಕ್ಕೆ ಅತ್ಯಂತ ಶಾಂತವಾದ ಮತ್ತು ಬೇಕು ಬೇಕೆನ್ನಿಸುವ ಆಶ್ರಯ ಸ್ಥಾನವನ್ನು ಕೊಟ್ಟಿರುವೆನು. ಎಷ್ಟೋ ಜನರು ಜೀವನವೊಂದು ಮಂದಿರವೆನ್ನುವರು. ನಾನು ಜೀವನವುಮಂದಿರ ಅಲ್ಲವೇ ಅಲ್ಲವೆಂದು ತರ್ಕಿಸುವೆ. ಕಾರಣ
ಮಂದಿರವು ಯಾವಾಗಲೂ ಸಂತಸ ಕೊಟ್ಟರೆ, ಜೀವನದ ಹಾದಿಯು ಕಷ್ಟ, ಬೇನೆ, ಕಾರ್ಪಣ್ಯ, ಪರಕೀಯತೆ, ಆತ್ಮೀಯತೆಗಳಿಂದ ತುಂಬಿ ಹೋಗಿದೆ. ಆದರದರಲ್ಲಿ ಮೂಯ್ದವನೇ ಶೂರ ಸಿಪಾಯಿ. ನಿಜವಾಗಿಯು ವಿಸ್ಮೃತಿ, ಮರೆವು ಮಾನವನ ಜೀವನದಲ್ಲಿ ಎಷ್ಟೊಂದು ಪ್ರಭಾವಶಾಲಿಯಾದ ಶಕ್ತಿಯಾಗಿದೆ. ದೈನಂದಿನ ಜೀವನದಲ್ಲಿ ಎಷ್ಟೋ ಘಟನೆಗಳು ಸಂಭವಿಸವವು. ಆದರೆ ಅವೆಲ್ಲಾ ಮನಸ್ಸಿನಲ್ಲಿ ಉಳಿದರೆ, ಮಾನವನು ನಿಜವಾಗಿಯೂ ಹುಚ್ಚನಾಗಬಹುದು. ಅದಕ್ಕಾಗಿ ಭಗವಂತನು
“ವಿಸ್ಮೃತಿ ''ಯ ಅಮೂಲ್ಯ ಕೊಡುಗೆಯನ್ನು ಮಾನವನಿಗೆ ಕೊಟ್ಟನೆಂದು ಕಾಣುವುದು. ನನ್ನ ಬಾಲ್ಕದ ನೆನೆಪುಗಳು ಕ್ರಮೇಣವಾಗಿ, ಹಗುರ-ಹಗುರವಾಗಿ ಮಾಯವಾಗತೊಡಗಿದವು. ಕನ್ನಡಿಯ ಮುಂದೆ ನಿಂತು, ನಾನು ನನ್ನನೇ ನೋಡಿದಾಗಿ ನನಗನಿಸಿತು. ಇನ್ನು ನೀನು ಮರೆಯುವುದನ್ನೂ ಕಲಿ! ಜೀವನವೆಂದರೆ ಕೊನೆಗೆ ಎಲ್ಲಿಯಾದರೂ ಮಾಡಿಕೊಂಡಿರುವ ಒಡಂಬಡಿಕೆಯಲ್ಲವೇ? ಹಲವು ಸಲ ನಾವು: ಮರೆಯಲು ಪ್ರಯತ್ನಿಸಿದರೂ ಕೆಲವೊಂದು ಘಟನೆಗಳು ಸ್ಮೃತಿ ಪಟಲದಲ್ಲಿ
ಪುನಃ ಪನಃ ಬಂದು ಮರೆಯಲಾಗದಂತೆ ಮಾಡುವವು. ' ನನಗೆ: ನನ್ನ : ತಾಯಿಯು ಜೀವನದಲ್ಲಿ ಪಟ್ಟ ಬವಣೆ, ಮದುವೆಯ
ಶುರು ಸಮಯದಲ್ಲಿ ನನ್ನ ಪತ್ನಿಯು ತಿಂದ ಬೇನೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ನನಗಿಸುವುದು ಪುರುಷನಾಗಿ ನಾನಿವರಿಗೇನು ಕೊಟ್ಟೆ. ಈಗ ತಾನೇ ಮೊಳಕೆಯಿಂದ ಹೊರಬಿದ್ದ ಸಸಿಯೊಂದು ಹೇಳುತ್ತದೆ. ನನಗೆ ಜೀವಿಸಬೇಕು. ನಾನು
ವಾಯುವಿನ ತರಂಗದೊಡನೆ ಹೋರಾಡ ಬೇಕಾಗುತ್ತದೆ. ಮಳೆಯ ಆರ್ಭಟದೊಡನೆ ಹೋರಾಡಬೇಕಾಗುತ್ತದೆ. ನಾನು: ಸಹ
ಜೀವನದಲ್ಲಿ ಆ ಸಸಿಯಂತೆ ಆದರ್ಶವನ್ನು ಇಟ್ಟುಕೊಳ್ಳಬೇಕೆಂದು. ನಿಶ್ಚಯಿಸಿದೆ.ಜೀವನವೆಂದರೆ ಕೇವಲ ಕಪ್ಪುಬೆಳಪು ಮಿಶ್ರಣದಿಂದ ಬಿಡಿಸಿದ ಚಿತ್ರವಲ್ಲ. ಹಲವು ಸಲ ಅದರ ಮೇಲೆ ಉರುಟು ಛಾಯೆಯೂ ಇರಬಹುದು. ಆದರೆ ಅದರ ತುದಿಮಾತ್ರ ಬಂಗಾರ ವರ್ಣದ್ದು ಇರಬೇಕು. ಏಕೆಂದರೆ ಬೆಳದಿಂಗಳ ರಾತ್ರಿಯಲ್ಲಿ ಚಂದ್ರನು ತನ್ನೆಲ್ಲ ಕಾಂತಿಯನ್ನು ಜೀವನಕ್ಕೆ ಕೊಡುವನೆಂದು ನನಗೆ ಭಾಸವಾಗಿತ್ತು! ಈ ಮಾತನ್ನು ನನ್ನ ಅಪ್ಪಾಜಿಯವರು ಹಲವಾರು ಸಲ ನನಗೆ ಹೇಳಿದ್ದರು. ಅಂತ ಕಾಣುವುದು!
ಅಗೋ ಅಲ್ಲಿ ನೋಡಿ ಸಮುದ್ರ ಶೀರದಲ್ಲಿ ನಿಂತು ನಾನದರ ತೆರೆಯ ಮೆಲುಗಾಟವನ್ನು ನೋಡುತ್ತಲಿದ್ದೆ. ಅದು ಎಲ್ಲಿಂದ ಬರುವುದು. ಎಲ್ಲಿಗೆ ಹೋಗುವುದು ನನಗೆ ತಿಳಿಯದು. ಅಂತೆಯೇ ಜೀವನದ ಯಾತ್ರೆಯನ್ನು ಯಾರೂ ತಿಳಿಯಲಿಲ್ಲ ಯಾರೂ ಅರಿಯಲಿಲ್ಲ... ಕಾಲವು ಅಖಂಡವಾಗಿರುವುದನ್ನು ತಿಳಿದವರು ಮಾತ್ರ ಬಲ್ಲರು. ಕಾಲಕ್ಕೆ ಬೆಲೆಯನ್ನು ಕೊಟ್ಟವನು ನಿಜವಾಗಿಯೂ ಶ್ರೇಷ್ಠ ಮಾನವನಾಗಿರುವನು. ಕಾಲಕ್ಕೆ ಬೆಲೆಯನ್ನು ಕೊಡದವನು ಮಾನವನಲ್ಲ. ಈ ಪ್ರಥ್ವಿಯ ಎಲ್ಲಾ ಚರಾಚರ ವಸ್ತುವಿನಲ್ಲಿ ಜೀವನವು ಅಮರವಾಗಿರುವುದನ್ನು ಹಲವರೇ ಗಣ್ಯ ವ್ಯಕ್ತಿಗಳು ಮಾತ್ರ ಬಲ್ಲರೆಂದು ನನಗೆ ತಿಳಿಯಿತು. ಮಾನವನು ತನ್ನ ಜೀವನದಲ್ಲಿ ಒಂದು ಸ್ಥಿರತೆಯನ್ನು ಮಾಡದೇ: ತನ್ನ ಜೀವನವನ್ನು ಸಾಗಿಸುವಂತಿಲ್ಲ. ಜೀವನದೊಡನೆ ಸೆಣಸಿದವನೇ
ನಿಜವಾದ... ಮಾನವ!... ಪೃಕೃತಿಯ ತೊಳಲಾಟದೊಡನೆಯೇ ನಾವು ಜೀವನವನ್ನು ಹೋಗಲಾಡಿಸಬೇಕು. ಜೀವನದಲ್ಲಿ ಎಷ್ಟೋ ಘಟನೆಗಳು ಆಗಿ ಹೋಗುವವು. ಮಾನವನು ಎಷ್ಟು ಮನ ಗಟ್ಟಿಮಾಡಿದರೂ, ಅದನ್ನು ಪುನಃ ನೆನಸಲು ಸಾಧ್ಯವಿಲ್ಲ. ಆದರೆ ಹಲವು ಘಟನೆಗಳನ್ನು ಮರೆಯಲು ಪ್ರಯತ್ನಸಿದರೂ ಆತನಿಂದ ಮರೆಯಲು ಅಸಾಧ್ಯ. ನೀರಿನಲ್ಲಿರುವ ಮೊಸಳೆಯು ತನ್ನ ಹಿಡಿತದಲ್ಲಿದ್ದ ಭಕ್ಷ್ಯವನ್ನು ಬಿಡಲು ಸಿದ್ಧವಿರದಂತೆ, ಮನಸ್ಸು ಕೂಡ ಘಟನೆಯನ್ನು ಮರೆಯಲುಸಿದ್ದವಾಗಿರುವುದಿಲ್ಲ. ಮನದ ಆಳದಲ್ಲಿ ಇಂತಹ ಘಟನೆಗಳ ಸೂಕ್ಶ್ಮ ರೇಖೆಯು, ಅದೇರೀತಿ ಚಿಂದಿಯಾದ ವಸ್ತ್ರದಂತೆ ಬಿದ್ದಿರುವುದು. ನಾನು ನನ್ನ ಮನಸ್ಸಿನಲ್ಲಿ ಬಣ್ಣಗಳ ಹಲವಾರು ಸ್ಪಂದನವನ್ನು ಮಾಡಿದ್ದೆ. ಬಿಳಿ, ಹಳದಿ, ಕೆಂಪು, ಹಸಿರು ವರ್ಣಗಳ ಮಿಶ್ರಣವನ್ನು ನಾನು ಚಿಂತಿಸುತ್ತಾ. ನಡೆಯುವೆ. ದೂರ, ಬಹುದೂರ, ವ್ಯಕ್ತಿಯ ಜೀವನದ ಘಟನೆಯು ಮೇಲೇರುವ ಮೆಟ್ಟಲುಗಳಂತಿರುವುದು. ಮೆಟ್ಟಲುಮಾತ್ರ ಘಟನೆಯಿಂಡ ತುಂಬಿರುವುದು. ಮನಸ್ಸನ್ನು ದೃಢೀಕರಿಸಿದರೆ ಮೇಲೆ ಏರಿ, ಪುನಃ ಮೇಲೆ ಏರಿ ಶಿಖರದ ಆ ಮೆಟ್ಟಲುಗಳನ್ನು ಧ್ಯೇಯವಾದ, ಎತ್ತರವಾದ, ಸ್ಥಿರವಾದ ಸ್ಥಾನಕ್ಕೆ ಕರಕೊಂಡು ಹೋಗಿ ಸ್ಥಿರವಾಗಿ ನಿಲ್ಲಿಸುವುದು.
ಮಾನವನು ಹಲವು ಸಲ ಸುಖದ, ಆನಂದದ ಕ್ಬಣವನ್ನು ಮರೆಯುತ್ತಾನೆ. ಆದರೆ ದುಃಖದ, ವಿಶೇಷವಾಗಿ ಅಪಮಾನದ ಕ್ಷಣವನೆಂದು ಆತ ಮರೆಯಲಾರ! ಅದನ್ನು ಮರೆಯಲು ಪ್ರಯತ್ನಿಸಿದರೂ, ಆತ ಮರೆಯಲಾರ, ಜೀವನವು ಅತಿ ಚಂಚಲವಾದ
ಮನಸ್ಸಿನ ಬಾಲಕವಲ್ಲವೇ? ಜಾಲಕನು ಮನಕ್ಕೆ ಬಂದಂತೆ ಆಟವಾಡುತ್ತಾನೆ. ಮನಕ್ಕೆ ಬೇಜಾರಾದಾಗ ಅದನ್ನು ಬಿಸಾಡುತ್ತಾನೆ. ಇದೇ ತರಹ ಜೀವನವು ಮಾನವನನ್ನು ಎಲ್ಲಾ ಕಡೆ ತಿರುಗಿಸುತ್ತಾ ಒಂದು ಕಡೆ, ಬಿಸಾಡುತ್ತದೆ. ಪುನಃ ಏಳಲಾರದ ಜಾಗಕ್ಕೆ. ಜೀವನವು ಪೂರ್ಣವಾಗಿ ನಮ್ಮ ಸ್ಟಾಧೀನದಲ್ಲಿ, ಇರುವುದೂ ಇಲ್ಲ. ಮನುಷ್ಯ ಯಾವಾಗಲೂ ಪರಾಧೀನವೇ ಆಗಿರುವನಲ್ಲಾ!
ನನಗೆ ಜನರ ಸಾನಿಧ್ಯ ಬೇಕಿತ್ತು. ನನಗೆ ಸ್ನೇಹ, ಮಿತ್ರತ್ವ ಬೇಕಿತ್ತು. ನಾನು ನನ್ನ ಚಿತ್ರದೊಡನೆ, ನನ್ನ ರೇಖೆಯೊಡನೆ ಜನರಲ್ಲಿ
ಬೆರೆಯಬೇಕು, ಅವರು ನನ್ನ ಕಲೆಯ ಬಗ್ಗ ಅರಿಯ ಬೇಕೆಂಬ ಹಂಬಲವಿತ್ತು. ನನ್ನ ಕೃತಿಯನ್ನು ನಾನೇ ಪಾಲಿಸಿ ಪೋಷಿಸಿ, ಹಿಗ್ಗಿಸಿ, ನೋಡತೊಡಗಿದೆ. ನನ್ನನ್ನು ನಾನು ಅರಿತಂತೆ ನನ್ನಲ್ಲಿ ನಾನು ಮಾತಾಡಿದಂತೆ! ಆದರಿಲ್ಲ, ನನ್ನ :ನಾನು ಅರಿತೆನೋ-ಯಾ-ನನ್ನ ನಾನು ಓಗ್ಗಳಿಸಿದೆನೋ ನನಗರ್ಥವಾಗಲಿಲ್ಲ.
ಜನರ ಪ್ರೀತಿಯು ಸಿಗದಿದ್ದಲ್ಲಿ, ಅದು ಕಲಾವಿದನ ಕಣ್ಣಲ್ಲಿ ಬೆಂಕಿಯಿದ್ದಂತೆ, ದನಿಯ ಖಚಿತತೆಯಲ್ಲಿ ಸುಳ್ಳಿರಲಿಲ್ಲ. ನನಗೆ ಜನರಲ್ಲಿ
ಒಮ್ಮುಖವಾಗಿ ಪ್ರೀತಿ ಹರಿದಿತ್ತು. ಪ್ರೀತಿಯ ನಿರಾಕರಣೆಯಲ್ಲಿಯ ನೋವು ನಿಮಗೆ ಅರ್ಥವಾದಿತೆ? ಇದು ನೋವಿನೊಡನೆ ಮೊದಲ ಬೇಟಿ. ನನ್ನದು. ಬದುಕಿನುದ್ದಕ್ಕೂ ಪುನರಾವರ್ತಿಸಿಯೂ, ಅಬ್ಯಾಸವಾಗದೆ, ಪ್ರತಿಬಾರಿಯೂ ತೀವ್ರವಾಗಿ ಕಾಡಿದ ನೋವು. ಬದುಕಿನ ನೋವು! ಅರ್ಥವಿಲ್ಲದ ನೋವು, ನನ್ನ ಅಂತರಾತ್ಮವನ್ನು ಜಂಜಾಡಿಸಿದ ನೋವು ಈವತ್ತು ನನಗೆ ಬರೆಯಬೇಕು. ಜೀವನದ ಐವತ್ತು ವರುಷದಲ್ಲಿ ಏನೇನು ಘಟಿಸಿದವು ಅದನ್ನು ಬರೆಯಬೇಕು. ಅದರಲ್ಲಿ ಹೇಳುವಂತಹದು ಏನಿದೆ? ನನ್ನಂತಹ ಕಾಯಕ ಪುರುಷನಿಗೆ ಅದನ್ನು ಹೇಳಬೇಕೆಂದು ಮನಸ್ಸಿಗೆ ಆಗುವುದಿಲ್ಲ. ಆದರೆ ನನ್ನ ತುಮುಲತೆಯನ್ನು,
ಆತುರತೆಯನ್ನು` ನಾನು ಬರೆಯಬೇಕು. ಪುನಃ ಮನಸ್ಸೂ ವಿಚಿತ್ರವಾಗಿದೆ. ಅದನ್ನು ಚೆಂದ ಮಾಡಲು ಹೋದರೆ ಅದು ಚಂದ ವಾಗುವುದೇ ಇಲ್ಲ. ನಾನು ಸತ್ಯ ಹೇಳಿದಲ್ಲಿ ಹಲವರು ಇಲ್ಲಿ ಹೆದರುವುದು ತಮ್ಮ ಕಳ್ಳತನವಲ್ಲ ಹೊರಬೀಳುವುದೆಂದು. ಆದರೆ ನೀನು ಮಾತಾಡಬೇಕು. ಮೂಳೆ ಮಾಂಸವನ್ನು ಹೊತ್ತ ಜೀವಂತ ಮಾನವನು ಸತ್ತವರಂತೆ ವರ್ಶಿಸಲು ಶುರುಮಾಡಿದರೆ ನಮ್ಮಂತಹ ಕಲಾವಿದನು ಕೂಡಾ ಬರೆಯಬೇಕು. ಹೌದು! ನಾನಿಂದು ಬೇರೆಯವರ ಬಗ್ಗೆ ಬರೆಯುವುದಿಲ್ಲ. ನನ್ನ ಬಗ್ಗೆ ಬರೆಯುವ. ನನ್ನ ಅಂತರಾತ್ಮದಲ್ಲಿ ಹುದುಗಿರುವ ಚೇನೆ, ಸಂತಸ, ನಿರ್ಲಿಪ್ತತೆಯ ಬಗ್ಗೆ ಬರೆಯುವೆ! ನನಗೆ ನನ್ನವರು. ಕೊಟ್ಟ
ಬೇನೆ ಬವಣೆಗಳ ಬಗ್ಗೆ ಬರೆಯುವೆ. ಇದರಿಂದ ನನಗೆ ಸಾಯುವ ಮುಂಚೆ ನನ್ನ ಹೃದಯ ಹಗುರವಾಗುವಂತೆ ಭಾಸವಾಗುವುದು. ನಾನು ನಿರ್ಮಲ ಆಕಾಶದಲ್ಲಿ ಗಕ್ಕನೆ ಹಾರುವ ಪಕ್ಕಿಯ ಪುಳಕಿತ ಆನಂದವನ್ನು ಪಡೆಯಲು ತೊಡಗುವೆ!
ಆದರೆ ನಾನು ಓರ್ವ ತತೃಜ್ಞಾನಿಯಲ್ಲ. ನನ್ನ ಎದುರಿಗೆ ಜಗತ್ತೊಂದು ರಂಗಮಂಚ !ನಾವೆಲ್ಲ ಕಲಾವಿದರಿಲ್ಲಿ. ಬರುವೆವು....ನಮ್ಮ ಪಾಲಿನ ನಾಟಕ ಆಡುವೆಪು. ನಮ್ಮ. ನಾಟಕ ಮುಗಿದ ಕ್ಷಣ ಇಲ್ಲಿಂದ ಸಾಗುವೆವು. ಜೀವನವು ಅನೇಕ
ಆಕಾರಗಳಿಂದ, ವಿವಿಧ ಬಣ್ಣಗಳಿಂದ, ಘಟನೆಗಸಿಂದ, ತುಂಬಿರುವ ಒಂದು ವಿಲಕ್ಷಣ ಬಣ್ಣ ಸಮೂಹದ ಕ್ಯಾನುವಾಸು ಆಗಿರಬಹುದು. ಅಹುದು ಕ್ಯಾನುವಾಸು! ಕ್ಲಿತಿಜವಿಲ್ಲದ ಕ್ಯಾನುವಾಸು! ಅಂತ್ಯವಿಲ್ಲದ ಕ್ಕಾನುವಾಸು. ಚಿತ್ರಿಸಲು ಸಾಧ್ಯವಿದ್ದರೂ 'ಅಸಾಧ್ಯವಾದ ಕ್ಯಾನುವಾಸು ಆಗಬಹುದು. ಮಾನವನು ಪಕ್ಷಿಯಂತೆ ಎತ್ತರದಿಂದ, ಎತ್ತರಕ್ಕೆ ಹಾರುವ
ಪ್ರಯತ್ನ ಮಾಡುವ. ಆದರದು ಪ್ರಯತ್ನವಾಗಿ ಉಳುಯುವುದಾ! ಇಲ್ಲ-ಶತ ಪ್ರಯತ್ನ ಪಟ್ಟಲ್ಲಿ ಮಾನವನು ಕೋಟಿ ಯೋಜನ
ಹಾರಬಹುದು!
ಅದೋ ನೋಡಲ್ಲಿ ದೇವದಾಸ! ಆ ಇಬ್ಬನಿಯ ಬಿಂದುಗಳು ಗಾಳಿಯಲ್ಲಿ ತೇಲುತ್ತಿದ್ದರೂ ಅದು ಮಾನವನ ಜೀವನದ ಒಂದು ಉತ್ಕಟವಾದ ಪ್ರತೀಕ! ಕೇವಲ ಇಬ್ಬನಿಯ ಬಿಂದುಗಳೇಕೆ? ನಿಸರ್ಗದಲ್ಲಿಯ ಪ್ರತಿಯೊಂದು ವಸ್ತುವನ್ನು ಮಾನವನಿಗೆ ಪಾಠ ಕಲಿಯಲಿಕ್ಕಾಗಿಯೇ ಜಗವಂತನು ನಿರ್ಮಿಸಿರಬಹುದು. ಕಣ್ಣುಗಳು: ತೆರೆದಿದ್ದರೆ, ಮನಸ್ಸು ನಿರ್ಮಲವಾಗಿದ್ದರೆ ಮಾತ್ರ ಈ ಜಗತ್ತು ಭಗವಂತನ ಭವ್ಮ ಮತ್ತು ಅಖಂಡವಾದ ಪಾಠಶಾಲೆಯೆಂದು ಅವನಿಗರ್ಥವಾಗುವುದು. ಜೀವನವೆಂದಲ್ಲಿ.ಅನಂತದಿಂದ ಅನಂತದವರೆಗೆ ನಡವ ಪ್ರವಾಸ ಮಾತ್ರ! ಹಲವು ಸಲ ನೋಡಿದಲ್ಲಿ ಮಾನವನು ಸ್ವಾರ್ಥಿಸಹ. ಅದೇ ತಾನೆ ಮರಿಯನ್ನು ಹಾಕಿರುವ ಹೆಣ್ಣು ಸಿಂಹದಂತಿರುವರು ಮಾನವರು. ಆ ಸಿಂಹವು ತಾನು:ಹಡೆದಿರುವ ಮರಿಯನ್ನು ಸ್ವತಃ ತಿನ್ನುವುದು. ತನ್ನ ಹೊಟ್ಟೆಯ ಹಸಿವಿಗಾಗಿ. ತಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರನ್ನು ಬಲಿಕೊಡುವಾಗ, ತನ್ನವರು, ಪರಠು ಎಂಬ ಭೇದಭಾವವನ್ನು
ಎಂದೂ ಮಾಡುವುದಿಲ್ಲ ಮಾನವರು. ಜಗದಲ್ಲಿ ಮುಖದ ಮೇಲೆ ಸುತ್ತಿ ಮಾಡುವವರು ಬಹಳ ಜನ ಇರಬಹುದು. ಆದರೆ ದೋಷವನ್ನು ಎತ್ತಿ ತೋರಿಸುವವರು. ಹಲವರೇ ಇರುವರು ಬೇರೆಯವರನ್ನು ನಿಂದಿಸುವುದು, ಅವರ ಬಡತನ, ಅವರ ಜೀವನದ ಆಗುಹೋಗುಗಳನ್ನು ನೋಡಿ ನಗುವುದು ಈಗಿನ ಜನರ ಪರಂಪರೆಯಾಗಿರುವುದು. ಸತ್ಯ, ಸ್ವಚ್ಛತೆ, ಸಭೃತೆಯನ್ನು ಮಾರ್ಗದರ್ಶನ ಮಾಡುವ ಹಿರಿಯರು, ಗುರುಗಳು, ಆಪ್ತರು ಖಚಿತವಾಗಿ ದೊರೆಯುವರು. ಆದರೆ ಕಬೀರದಾಸರಂದಂತೆ
ದಾನವನ್ನು ಮಾಡುವಾಗ ಪಾತ್ರಿಯನ್ನು ನೋಡು. ನಾವು ಮಾರ್ಗದರ್ಶನ ಮಾಡುವ ಗುರುವನ್ನು ಅರಿತುಕೊಂಡು ಆರಿಸಿದಲ್ಲಿ ತುಂಬು ಒಳ್ಳೆಯದು... ನೀನು ಕೊಟ್ಟಿರುವ ದಾನವು ಸತ್ಯವಾದ ಕೈಯನ್ನ ಸೇರಿಕೊಂಡಲ್ಲಿ ನಿನ್ನ ದಾನವು ಮಹತ್ತರವಾದ ಫಲದ ನಾಂದಿಯನ್ನು ಹಾಕುವುದು. ವರ್ತಮಾನವನ್ನು ನೆನಪಿಟ್ಟುಕೊಂಡಲ್ಲಿ ಭವಿಷ್ಯಕ್ಕಾಗಿ ಚಿಂತಿಸುವ ಅಗತ್ಯವಿಲ್ಲವಲ್ಲ. ನೇರ ಹಾದಿ ಇದ್ದಾಗಲೂ ಏರುತಗ್ಗಿನ ಹಾದಿ ಹಿಡಿದು ಎಡವಿ ಮುಗ್ಗರಿಸುವ ಸ್ವಭಾವ ನನ್ನದು. ಕಾರಣ ನಾನು ಕಷ್ಟಕರ. ಹಾದಿಯ ಬದಿಯ ನೆರಳನ್ನು ಬಿಟ್ಟು ಬೇಕೆಂದೇ ನಡು ನೆತ್ತಿಯ ಬಿಸಿಲಲ್ಲಿ ನಡೆಯುತ್ತಿದ್ದೆ. ಕಲೆಗಾಗಿ ಬವಣೆಪಡ ಬೇಕು, ಕಷ್ಟಪಡಬೇಕೆಂದು ನನ್ನೊಳಗಿದ್ದ ವಿಕೃತ ವ್ಯಕ್ತಿಯು ನನ್ನನ್ನ ಪದೇ ಪದೇ ಪೀಡಿಸುತ್ತಿದ್ದ. ಬರಿಯ ನಾಲ್ಕು ಪುಸ್ತಕ ಓದಿ, ಯಾ ನಾಲ್ಕು ಪುಸ್ತಕ ಅನುವಾದಿಸಿ, ನಾಲ್ಕಾರು ಗೆರೆಗಳನ್ನು ಹಾಕಿ ಪೊಳ್ಳು ಗಡ್ಡವ ಬಿಟ್ಟು ನಾನೋರ್ವ ಜಗತ್ತಿನ ಶ್ರೇಷ್ಠ ಕಲಾವಿದನೆಂದಣಿಸಿ ಕೊಳ್ಳುವುದಕ್ಕಿಂತ ಕಷ್ಟಪಟ್ಟು ದುಡಿದ ಯಾರಲ್ಲೂ ಏನನ್ನು ತೆಗೆದುಕೊಳ್ಳದೆ ಕಲಾವಿದನಾಗಬೇಕು, ಶ್ರೀಮಂತರ ಈ ಸಮಾಜದಲ್ಲಿ ಹಣವಿಲ್ಲದೆಯೇ ಶ್ರೀಮಂತ ಕಲಾವಿದನಾಗಬೇಕೆಂದು ಮುಂಚಿತವಾಗಿಯೇ ನಾನು ದೃಢನಿರ್ಧಾರ ಮಾಡಿದ್ದೆ. ನಾನು ನಿಜವಾಗಿಯೂ ಕಲೆಯ ಜ್ಞಾನವನ್ನು ಅರಿತುಕೊಂಡಲ್ಲಿ, ನನ್ನ ಕಲೆಯ ಚಾಕಚಕ್ಕತೆಯು ತನ್ನಿಂದ ತಾನೇ ನಿರ್ಮಾಣ
ವಾಗುವುದು. ಇಲ್ಲಿ ನನಗೆ ಕಲೆಯ ಹಸಿವು ಮಿತಿ ಮೀರಿತು ಅಂತ ಅನಿಸುವುದು.
ಅಂಕೆ ಇಲ್ಲದೆ ಮಿತಿ ಮೀರಿರುವ ಈ ನನ್ನ ಕಲೆಯು ನನ್ನನ್ನು ಚಿತ್ರಬಿಡಿಸಲೂ, ಬದುಕುಳಿಯಲೂ ಬಿಡುತ್ತಿರಲಿಲ್ಲ. ಅದು ಈಗ ನನ್ನಿಂದ ಅಸಾಧ್ಯವಿತ್ತು. ಈಗೈೆ ಹಸಿವುಉಪವಾಸ ನಿತ್ಯ ಸತ್ಯವಾಗಿ "ಒಂದು ಬಗೆಯಾಗಿ ನನ್ನಲ್ಲಿ ಹುದುಗಿಕೊಂಡಿತ್ತು. ನಾ ಚಿತ್ರಿಸಲು ಈ ದಾರಿದ್ರ್ಯ, ಈ ಆತುರತೆ, ಈ ತುಡಿತ, ಈ ಉನ್ಮಾದ ಅನಿವಾರ್ಯವೇನೋ? ನೋವಿನ ಹಿಂಡುವಿಕೆಯಲ್ಲಿ 'ಬಡತನದ' ಸುಡುವ ಕಾಡಿನಲ್ಲಿ ನಲಿನಲಿದು ಅರಳುತ್ತಿತ್ತು ನನ್ನ ಕಲೆ. ಭೂಮಿಯ ಅಂತಃಸತ್ವವನ್ನೆಲ್ಲಾ ಹೀರಿ ಮುಗಿಲೆದ್ದು ನಿಂತಿರುವ ನನ್ನ ತಾಳೆ ಮರದಂತೆ! ಈ ಚಿತ್ರಗಳು ನನ್ನೆಲ್ಲವನ್ನು ಹೀರಿ ನನ್ನನ್ನು ಬರಿದಾಗಿಸಿ ಕೃಶವಾಗಿರಿಸಿದೆ. ಎಲ್ಲರಂತೆ
ಬದಕುವುದು, ಚಿತ್ರಿಸುವುದು ಸಾಧ್ಯವಿಲ್ಲದಾಗ ನಾನುರಾತ್ರಿಪಾಳಿಯಲ್ಲಿ ಕಾರ್ಮಿಕನಾಗಿ ದುಡಿದೆ, `ನನ್ನವರ ಹಸಿವಿಗಾಗಿ, ನನ್ನ ಜೀವನಕ್ಕಾಗಿ ! ಇದು 'ನನ್ನ ಹುಚ್ಚು ಹಟವೊ, ಮೂರ್ಹತನವೋ, ತಂತ್ರವರಿಯದ ಮೌಢ್ಯ್ಕವೋ ನನಗೇ ಗೊತ್ತಿರಲಿಲ್ಲ. ಗೊತ್ತಿದ್ದರೂ ಆ ಸಮಯದಲ್ಲಿ ನಾನು ಏನೂ ಮಾಡಲೂ ಅಸಮರ್ಥ. ನಾ ಬಯಸಿದ್ದೆಲ್ಲಾ ನನ್ನ ಬಣ್ಣಗಳು ಹೇಳಬೇಕು. ಹೇಳಲಾರದೆ ಚಡಪಡಿಸುವ ತುಡಿತಗಳಲ್ಲಿ ನನ್ನ ಚಿತ್ರಗಳು. ಸ್ಪಷ್ಟವಾಗಬೇಕ್ಕು. ಬಡತನದ ಕೆಳಮಟ್ಟ ದಲ್ಲಿರುವ ಜನರಿಗೆ ಅವುಗಳನ್ನು ಅರಿಯುವ, ಪಡಕೊಳ್ಳುವ ಸಾಮರ್ಥ್ಯ ವಿರಬೇಕು. ಈ ತುಡಿತದಲ್ಲಿ ನಾ ಬದುಕಿರಬೇಕು ಎಂದು ನನ್ನ ಆಶಯವಾಗಿತ್ತು.
ಇದ್ದಕ್ಕಿದಂತೆ ನನ್ನನ್ನು ಕೊರೆವ ಬಯಕೆಗಳು, ಉಂಡ ನೋವುಗಳು, ನಮ್ಮ ನಾಡಿನ, ನಮ್ಮ ಜನರುಗಳ ಜೀವನ ನನ್ನ
ಚಿತ್ರದಲ್ಲಿ ರೂಪಪಡೆಯತೊಡಗಿತು. ಒರಟು ಗೆರೆಯಲ್ಲಿ ತುಡಿವ ತೀವ್ರತೆಯಲ್ಲಿ ನಾನವರ ಚಿತ್ರ ಬಿಡಿಸಿದೆ. ಭರಭರ ಎಳೆದ ಗೆರೆಯಲ್ಲಿ ಮುಖವಿದ್ದರೂ, ಕಣ್ಣು, ತಿವಿ, ನೂಗುಗಳಿರಲಿಲ್ಲ. ಆದರೆ ಅಲ್ಲೆನೋ ಇತ್ತು. ಬದುಕನ್ನು ಸ್ವೀಕರಿಸದ ನಿರ್ಲಿಪ್ತತೆ ಬದುಕುಳಿವ ಜೀವಂತಿಕೆ! ನಮ್ಮವರ ಜೀವನದ ಕತೆಯನ್ನು, ಹಲವೇ ಗೆರೆಯಲ್ಲಿ ಚಿತ್ರಿಸ ಹೊರಟೆ. ನನ್ನ ಚಿತ್ರದಲ್ಲಿ ನಾನು ಸಿಂಗಾರ ಬಯಸಲಿಲ್ಲ. ಈ ಬಡತನ ಈ ಅಸಹಾಯ ಕತೆಯನ್ನು ರಮೃವಾಗಿರಿಸಲು ಎಂತು ಸಾಧ್ಯ. ನನ್ನ ಅಭಿವ್ಯಕ್ತಿಯ ಮಾಧ್ಯಮ ನನಗೆ ಸ್ಪಷ್ಟವಾಯಿತು. ಬಣ್ಣಗಳು ನನ್ನ ಭಾಷೆಯಾಯಿತು. ಕ್ಯಾನುವಾಸು ನನ್ನ ಜೀವನವಾಯಿತು. ನನ್ನ ಮನ
ಹೇಳಲಾರದಷ್ಟು. ನನ್ನ ಚಿತ್ರದಲ್ಲಿ ನಾ ಹೇಳ ಬಯಸಿದ. ನನಗೆ ನನ್ನ ಗುರಿ ಸ್ಪಷ್ಟವಾಯಿತು. ನಾನು ಕಲಾವಿದನಾಗಬೇಕು. ಜಗದ ಹಲವಾರು ಕಲಾವಿದರ ಸಾಲಿನಲ್ಲಿ ನನ್ನ ಹೆಸರೂ ಬರಬೇಕು. ಕಂಡ ಭಾವನೆಯ... ಬಂಡವಾಳವನ್ನೆಲ್ಲಾ ಬಿಡಿಸ
ಹೊರಟೆ. ನನ್ನ ಕೋಣೆಯೇ ನನ್ನ ಸ್ಟೂಡಿಯೋ ಆಯಿತು. ಸ್ಕತಃ ಕಲಿಕೆ ಈ ಕುಂಚದ್ದು. ಬಣ್ಣಗಳಿಗಿದ್ದುದಲ್ಲ. ಬದುಕಿಗದ್ದಿದ ಕುಂಚ.
ಈವತ್ತು ಬದುಕಿದ್ದು ನಾಳೆ ಮೈಲುಗಲಾಚೆ ಸಾಗುವ ಅವರ ಬದುಕನ್ನು ನಾನು ಯಾವ ಬಣ್ಣದಲ್ಲಿ ಬಿಡಿಸಬೇಕು. ಯಾವ ಕುಂಚದಲ್ಲಿ ತೀಡಬೇಕು.
ಭಗವಂತನು ಮಾನವನ ಜೀವನದಲ್ಲಿ ಕನಸನ್ನು ಪ್ರಮೇಯವಾಗಿರಿಸಿದ್ದಾನೆ !ಕನಸಿನಲ್ಲೇ ಜೀವಿಸುವ ಹಲವಾರು ವ್ಯಕ್ತಿಗಳನ್ನು ನಾನು ಬಲ್ಲೆನು. ಆದರೆ ಅವರಲ್ಲಿ ಕನಸೆಂದರೇನು? ಅಂತ ಯಾರಾದರೂ ಹೇಳಬಹುದೇ? ಇಲ್ಲ. ಸಾಧ್ಯವಿಲ್ಲ... ನನಗೆ ಮಾತ್ರವದು, ದಿನಾರಾತ್ರಿಯಲ್ಲಿ ಎಷ್ಟೋ ಬಣ್ಣಗಳೊಡನೆ ನರ್ತಿಸುವವು. ಹೂವಿನಂತೆ ಅಲಂಕಾರವಾದ ದುಂಡು ದುಂಡಾದ ಬಣ್ಣರಾಶಿಗಳು ಮಿಂಚಿ ಮಾಯವಾಗುವುದು. ನಾನು ಅವುಗಳೊಡನೆ ನರ್ತಿಸಿದಂತೆ ಆಟವಾಡಿದಂತೆ ನನಗೆ ಭಾಸವಾಗುವುದು. ಕಂಡ ಕಂಡವಸ್ತುವನ್ನು ಕ್ಯಾನುವಾಸಿನಲ್ಲಿ ಚಿತ್ರಿಸಿದಂತೆ ಸ್ವಂತದ ಚಿತ್ರದ ಬಗ್ಗೆ ಸಂತೋಷಪಡುತ್ತ ಚಪ್ಪಾಳೆತಟ್ಟಿ ಎಚ್ಚರವಾದಂತೆ ನನಗೆ ಭಾಸವಾಗುತ್ತಿತ್ತು. ಆದರದು ಈಗಿಲ್ಲ ಈಗ್ಕೆ ನಾನು ವಾಸ್ತವ ಲೋಕದಲ್ಲಿ ಜೀವಿಸುವೆ. ಜನರ ಬೇನೆ, ಅವರ ಆಗುಹೋಗುಗಳು, ಬ'ಗವಂತನಿಂದ ನಿರ್ಮಾಣವಾಗಿರುವ ಈ ಸುಂದರ ಪ್ರಪಂಚ, ಇದರಲ್ಲಿ ಹುದುಗಿರುವ ಅಸಂಖ್ಯ ಸುಂದರತಾಣಗಳು, ಅತೀ ಸುಂದರ ಜೀವಿಗಳು, ಜೀವನದ ಸ್ಪಂದನೆಯಲ್ಲಿ ಉಂಟಾಗಿರುವ ಸಿಹಿಕಹಿನೋವುಗಳು. ಇವೆಲ್ಲವನ್ನೂ ನಾನು ನನ್ನ ಕ್ಯಾನುವಾಸಿನಲ್ಲಿ ಹಾಕುವ! ಹೌದು! ಈಗ ನಾನು ಚಿತ್ರಕಾರನೆಂದು ಹೇಳಲು ಹೆದರುವುದಿಲ್ಲ. ಕಲೆಯ ಹಾದಿಯಲ್ಲಿ ನಾನು ನನ್ನದೇ' ಆಗಿರುವ ಕಾಲುದಾರಿಯನ್ನು ಆರಿಸಿಕೊಂಡು ಹೋಗಿದ್ದೆ. ಅದ್ಕಾರೋ ನನ್ನನ್ನು... "ಏಕಲವ್ಯ''ನಂತೆ ಸಿದ್ಧ ಪುರುಷನೆಂದರು. ಅವರಂದ ಮಾತು ಅತಿಶಯೋಕ್ತಿಯಾದರೂ,ಅವರ ಭಾವನೆಯು ನನಗೆ ಹಿಡಿಸಿತು. ನಾನು ನಿರಂತರ ಕೆಲಸಮಾಡುವ ದೃಢಜೀವಿ, ಹೋರಾಟಗಾರ, ಕಾರ್ಮಿಕ ಕಲಾವಿದ!
ಹಲವು ಸಲ ನನ್ನ ಚಿತ್ರಗಳಿಗೆ ಬೆಲೆ ಬಾರದಿದ್ದಾಗ ನಾನು ಗಾಬರಿಯಾಗುತ್ತಲಿದ್ದೆ. ಈ ಚಿತ್ರವನ್ನೆಲ್ಲಾ ಬಿಡಿಸಲು ನನ್ನ ಪತ್ನಿಯ
ಬಂಗಾರವು ಮಾರಿಹೋಯಿತಾದರೂ (ಅವಳೆಂದೂ ಅದರ ಬಗ್ಗೆ ಹೇಳದಿದ್ದರೂ) ನಾ ಚಿತ್ರಬಿಡಿಸಲು. ಹಾಕುತ್ತಿದ್ದ ಹಣವನ್ನು
ಅವು ವಾಪಾಸು ತಂದಿದ್ದರೆ, ನಾನು ಯಶಸ್ವಿ ಕಲಾವಿದನಾಗುತ್ತಿದ್ದೆ... ಖರ್ಚಾಗದೆ, ಮಾರಿಹೋಗದ ಚಿತ್ರಗಳಿಗೆ ಮುಂದೆ, ಪತ್ನಿಯ ಬಂಗಾರವನ್ನೂ ಮಾರುವುದು ನನ್ನ ಪುರುಷತ್ವಕ್ಕೆ ಪೆಟ್ಟು ಕೊಡುತ್ತಿತ್ತು.
ದಿನಗಳು ಉರುಳುತ್ತಿತ್ತು. ವೃತ್ಕಾಸವಿಲ್ಲದ ಏಕಾಂಗಿ ದಿನಗಳು. ಕಳಕೊಂಡ ಮನದ ಎಣಿಕ್ಕೆ ತಪ್ಪಿತ್ತು. ಸುಖದ ಕ್ಷಣವನ್ನು ಹುಡುಕಿ ಅಲ್ಲ. ದೇಹ ಮನಸ್ಸು ಅದರ ಆಸೆಯಲ್ಲಾ ಸತ್ತಿದ್ದವು. ಗಿಡ ಮರ, ರಾತ್ರಿ,ನಕ್ಬತ್ರವನ್ನು ಬಿಡಿಸಲಿ ನನ್ನ ನಾನು ಎಷ್ಟೊಂದು
ಕ್ಕಾನುವಾಸುಗಳು ಹಸಿದಿದ್ದವು.... ಮಾನವನ... ಮೃದು ಸ್ಪರ್ಶಕ್ಕೆ. ಅವರ ಆತ್ಮೀಯತೆಗೆ, ಅವರ ಪ್ರೀತಿಗೆ, ಅವರ ತನ್ನತನದ ಸ್ಪಂದನಕ್ಕೆ. ಅವರ ಅವಿಶ್ರಾಂತ ಆಲಿಂಗನಕ್ಕೆ ಅವರ ಪ್ರೀತಿಯ ಎರಡು ಮಾತಿಗೆ, ಅವರ ಆತ್ಮಾನಂದದ ಆನಂದಕ್ಕೆ ನಾನೂ ಕಾಯುತ್ತಲಿದ್ದೆ. ಆ ನನ್ನ ಕ್ಯಾನುವಾಸುಗಳು ಮುಗಿಯದ ಯುದ್ಧದ ಅಂತಿಮಕ್ಪಣದಹಾದಿಯನ್ನು ನೋಡುತ್ತಲಿತ್ತು. ಯುದ್ಧವೆಂದು ಮುಗಿಯುವುದೋ ದೇವರೇ ಬಲ್ಲ ಎಂದು ನನಗನಿಸುವುದು.
ಮಾನವನ. ಮನಸ್ಸು ಎಲ್ಲೂ ನಿಲ್ಲುವುದಿಲ್ಲ. ಅದೇನೋ ಬೇನೆ, ಸಂತಸ... ಯಾವುದರದ್ದೋ ಹುಡುಕುವಿಕೆ! ನೇರವಾದ
ಈ ಜಗತ್ತಿನಲ್ಲಿ ನಾನೊಬ್ಬ ಎಡವಟ್ಟಾದೆ ಅಂತ 'ನನಗನಿಸುವುದು. ಮನಸ್ಸು ಉದಾಸೀನ ಗೊಂಡಿದೆ. ನನ್ನ ಕೆಲಸವನ್ನು ನಾನು ಬಹಳ ಗಂಭೀರವಾಗಿ ಪರಿಗಣಿಸಿದೆ. ನನ್ನ ಬದುಕಿನುದ್ದಕ್ಕೂ ನಾನು ಪ್ರತಿಯೊಂದನ್ನು ತೀವ್ರವಾಗಿ ನಿರ್ಮಿಸತೊಡಗಿದ್ದೆ. ಪ್ರೀತಿಯಲ್ಲಿ, ಬಣ್ಣದಲ್ಲಿ, ಉಪದೇಶದಲ್ಲಿ, ಹಸುವಿನಲ್ಲಿ, ನೋವಿನಲ್ಲಿ, ಆಗಲೂ ನನಗನಿಸಿತು. ಪ್ರೀತಿಯಲ್ಲಿ, ನಿಜವಾದ ಪ್ರೀತಿಯಲ್ಲಿ ಉತ್ಕಟ ಪ್ರಿತಿಯಲ್ಲಿ ಭಗವಂತನ ಅನುಭವವಿರುವುದು. ಪ್ರೀತಿಸಬೇಕು. ಇಲ್ಲಿರುವ ಎಲ್ಲರನ್ನು, ಎಲ್ಲವನ್ನು ಗಾಢವಾಗಿ, ಪ್ರೀತಿಸಬೇಕು. ತೀವ್ರವಾಗಿ ಪ್ರೀತಿಸಬೇಕು. ನನಗೆ ಲೆಕ್ಕಬಾರದ ಬದುಕು ಬೇಕಿರಲಿಲ್ಲ... ತರ್ಕಕ್ಕಾಗಿ ನಾನು ಬದುಕಬಯಸುವುದಿಲ್ಲ. ನನ್ನ ಬದುಕು ತರ್ಕದ ತೆಕ್ಕೆಗೆ ಬೀಳಬೇಕಿಲ್ಲ. ಕೊರೆಯುತ್ತಿರುವ ನನ್ನ ಹೃದಯಕ್ಕೆ ಬಿಸುಪು ಬೇಕಿತ್ತು. ಯಾರದೋ ಮಡಿಲಲ್ಲಿ ತಲೆಯಿಟ್ಟು. ಮಲಗ ಬೇಕು. ಯಾರದೋವಎದೆಯಲ್ಲಿ ಬಿಕ್ಕಿ ಬಿಕ್ಕಿ ಅಳಬೇಕೆಂದು ಅನಿಸುತ್ತಿತ್ತು. ನನ್ನ ಪ್ರೀತಿಯ ಉತ್ಕಟ ಅಭಿವೃಕ್ತಿ ನನ್ನ ಹಿಡಿತದಲ್ಲಿ ಇರಲಿಲ್ಲ. ಒಂದಿಷ್ಟು ಮಾನಸಿಕ ತುಮುಲವನ್ನು ಕಳಕೊಂಡು ಅತ್ತೆ. ನನಗಾಗಿ
ಅದ್ಯಾರೋ ಅಂದಿದ್ದರು. "'ನೀ ನಡವ ಹಾದಿಯಲ್ಲಿ ನಗೆ ಹೂ ಬಾಡದಿರಲಿ, ಸಿಟಯು ನಿನಗಿರಲಿ, ಕಹಿಯು ನನಗಿರಲಿ''! ಕೆಲವು
ಪ್ರೀತಿಗಳಿಗೆ ಕಥೆಯಂತಹ ಕೊನೆಯಿರುವುದಿಲ್ಲ. ಮಾತಿಲ್ಲದೆ, ಕ್ರಿಯೆಯಿಲ್ಲದೆ. ಈ ಪ್ರೀತಿಯು ಒಳಗೊಳಗೆ ತಳಮಳಿಸುವುದು. ಅವ್ಕಕ್ತವಾಗಿ ಗಂಟಲಲ್ಲೆಉಳಿಯುವುದು. ಅತೃಪ್ತಿಯ ಗಳಿಗೆಗಳು ನರಳುವುದು. ಹೃದಯಕ್ಕೆ ಇಂತಹ ಪ್ರೀತಿ ಹೊಸತಲ್ಲ. ಮಾಡಲ್ ಓರ್ವಳು ಬಟ್ಟೆ ಬಿಚ್ಚಿಕೊಂಡು ನಗ್ನಳಾಗಿ, ಮೂಕಳಾಗಿ ನಿಂತಾಗ ಅವಳ ಚಿತ್ರವನ್ನು ನಾವು ಬಿಡಿಸುವಾಗಉಂಟಾದ
ಪ್ರೀತಿಗಿಂತಲೂ ಕಡಮೆ! ಅತ್ತ ಸಾಯದ, ಇತ್ತ ಬದುಕದ ಪ್ರೀತಿಗಳು!
ಈ ಬದುಕಿಗೆ. ನಾ ನನ್ನೆಲ್ಲವನ್ನೂ ಕೊಟ್ಟಿದ್ದೆ, ಪಡೆದದ್ದೂ ಏನೂ ಇರಲಿಲ್ಲ. ಈ ಏರು 'ಹೇರಿನ: ಸಂಭವಗಳು. ನನಗೆ ನೋವು ಕೊಡಲಿಲ್ಲವೆಂದಲ್ಲ. ಒಂದು: ನೋವಿನಿಂದ ಮತ್ತೊಂದುನನೋವಿಗೆ ಹೆಜ್ಜೆಯಿಡುತ್ತಾ ನಡೆದೆ. ನೋವು ಮುಚ್ಚಲಿಲ್ಲ. ಮುಗ್ಗಿಯಲಿಲ್ಲಬರಿಯ ಬದಲಾಯಿತು.
ಬದುಕಿನ ವಿಷಯವಾಗಿ ನನಗೆ ಕೋಪ ವಿರಲಿಲ್ಲ. ಅಲ್ಲಿ ನನಗೆ ಅಚ್ಚರಿ ಕಾದಿತ್ತು. ನಾನು ಬದುಕನ್ನು ಹುಚ್ಚು ಎಂದು
ಪರಿಗಣಿಸಲಿಲ್ಲ. ನಾನು ಬದುಕನ್ನು ಉದ್ರೇಕಗಳ ಮಾದ್ಯಮಗಳ ಮಿಲನವೆಂದು ತಿಳಿದಿದ್ದೆ. ಹೊರಗಿನ ಸ್ವಚ್ಛ ಸಮಾಜದಲ್ಲಿ ನಾನೋರ್ವನೇ ನಿಂತಿದ್ದೆ. ಇಲ್ಲಿರುವ ಪಾಪಿಗಳ ಜೀವನದಲ್ಲಿ ನಾನೋರ್ವನೇಸ್ಟಚ್ಛವಾಗಿ ಕಂಡೆ! ಕ್ಲಿತಿಜವಿಲ್ಲದ
ಹಾದಿಯನ್ನು ನೋಡಿ ಹಲವರು ಅಂದರು. ಆತನೋರ್ವ ಹುಚ್ಚು ಕಲಾವಿದನೆಂದು. ಉಣಲು, ಉಡಲು ಇಲ್ಲದೆ ನಿರ್ಗತಿಕ ನಾಗಿರುವ. ಆದರಿಂದ ನನಗೆ ಬೇಸರವಾಗಲಿಲ್ಲ.. ಅವರ ಮುಗ್ಧ ಅರಿವಿನ ಬಗ್ಗ, ಅವರಿಗಾಗಿ ಕನಿಕರವಾಯಿತು. ಮಾನವರೇ ಮಾನವರನ್ನು ತಿಳಿಯದಾಗ ಪಶುಪ್ರಾಣಿಗಳೆಂದು ತಿಳಿವರು....ಇಲ್ಲಿ ನಾನು ನನ್ನವರ ಬಗ್ಗೆ ಏನಾದರೂ ಬರೆಯಬೇಕು ಅಂತ ಮನದಲ್ಲಾಯಿತು. ಆದರೆ ಅವರ ಬಗ್ಗೆ ಏನು ಬರೆಯಲಿ | ನನ್ನ ಬೇನೆಯಲ್ಲಿ ಅವರೆಲ್ಲಾ ಅವಿತುಕೊಂಡು ಅವರೂ
ಬೇನೆಗಳನ್ನು ತಿಂದಂತೆ ನನಗೆ ಭಾಸವಾಯಿತು. ಆದರೆ ಅವರನ್ನು ನನ್ನಿಂದ ದೂರ ಸರಿಯಲು ಎಂತು ಹೇಳುವುದು.ನಾನು ಅವರಿಂದ ದೂರ ಸರಿಯಬಹುದು....ಆದರೆ ಅವರು ನನ್ನಿಂದ ದೂರ ಸರಿಯಲಿಲ್ಲ. ನನ್ನ ಜೀವನ ನಾಟಕದಲ್ಲಿ ಎರಡನೇಯ ಅಂಕ ಶುರುವಾಯಿತು. ನಾನು ಸಂಸಾರಿಕ ಜಗತ್ತಿನಲ್ಲಿ ಹೊಣೆಗಾರ ಪತಿಯೆಂದು ಪ್ರವೇಶಿಸಿದೆ. ಈ ಅಂಕವು ಸಂತಸ, ಪ್ರೀತಿ,
ಬೇಗೆಯಿಂದ ಕೂಡಿತ್ತೆಂದು ಹೇಳಬಹುದು. ಈ ಅಂಕದಲ್ಲಿ ತುಂಬಾ ರಮಿಸುವುದು ಅಲ್ಲಿ ಇಲ್ಲಿ ಹೋಗಿ ಪುನಃ ಸುತ್ತಿ, ಸುತ್ತಿ ಅಲ್ಲಿಯೇ ಬರುವುದು ಸ್ವಾಭಾವಿಕ. ವೈವಾಹಿಕ ಜೀವನದ ಶುರುವಿನಲ್ಲಿ ಎಲ್ಲಿ ನೋಡಿದಲ್ಲಿ ಗುಲಾಬಿ ಬಣ್ಣದ ಛಾಯೆಗಳು. ಮನತುಂಬಾ ಗುಲಾಬಿ! ಜೀವನ ಸಂಗೀತದ ವಸಂತ ಯತು ಶುರುವಾದರೆ, ದಮನಿಯಲ್ಲಿ ಹುಮ್ಮಸದ ವಿವಾದಗಳು.
ಹೃದಯದಲ್ಲಿ ತಾನು ಗೆದ್ದೆನೆಂಬ ದೃಢತೆ. ವಸಂತ ಖುತು ಮುಗಿದರೂ, ಜಾಜಿ, ಮಲ್ಲಿಗೆ, ಸಂಪಿಗೆಯ ಸುಗಂಧ ಭರಿತ ಸುವಾಸನೆಯು ಇನ್ನೂ ಮನದ ಮೂಲೆಯಲ್ಲಿ ಹರಡಿ ನಿಲ್ಲುವುದು. ಅಹುದು ಅವಳು ನನ್ನ ಬಾಳ ಸಂಗಾತಿಯಾಗಿ ಬಂದಳು. ನಿರಾಭರಣ ರಸಿಕ ಚಲುವೆ! ನಾನವಳಿಗೇನು ಕೊಟ್ಟೆ? ಒರೆಯಲ್ಲಿರುವ ಹರಿತವಾದ ಖಡ್ಗಕ್ಕೆ ಎಂದಾದರೂ ತುಕ್ಕಹಿಡಿಯುವುದಾ! ಇಲ್ಲ ಹಿಡಿಯುವುದಿಲ್ಲ. ಅದನ್ನು ಸಾಣಿಸಿದರೆ ಪುನಃ ಪುನಃ ಹರಿತವೇ ಆಗುತ್ತದೆ. ಸ್ತ್ರೀ ಸೌಂದರ್ಯದಲ್ಲಿ, ನಿಜವಾಗಿಯೂ ಎಷ್ಟೊಂದು ವಿಲಕ್ಷಣ ಸಾಮರ್ಥ್ಯ ಇರುವುದು. ಒಂದು ವೇಳೆ ವಿಶ್ವಕರ್ಮನು ಜಗತ್ತನ್ನು ನಿರ್ಮಿಸಿರುವ ಚಿತ್ರಕಾರನಾಗಿದ್ದಲ್ಲಿ "ಸ್ತಿ'ಯೂ ಆತನ ಸರ್ವಶ್ರೇಷ್ಠ ವರ್ಣ ಕೃತಿಯು ಜಗತ್ತೆಲ್ಲವನ್ನು ಚಿತ್ರಿಸಿದ ನಂತರ ಕೊನೆಗೆ ತನ್ನ ಪ್ರಭಾವಶಾಲಿ ಕುಂಚದಿಂದ ನಿರ್ವಸಿರುವ ಅತ್ಮಂತ ಸುಂದರ ಕೃತಿ. ಲಿಯಾನೋರ್ಡೋನ 'ಮೋನಾಲಿಸಾಳಂತೆ' ರಾಜಸ್ನಾನದ ರಾಣಿ 'ರೂಪಮತಿ'ಯಂತೆ ಯಾ ಬೇಲೂರಿನ ರಾಣಿ 'ಶಾಂತಳಾ'ಳಂತೆ ...ಹಲವು ಸಲ ಅವಳ ನೆನಹಿನಲ್ಲಿ ಗಾಳಿಯ ತರಂಗದೊಡನೆ ಒಂದು ಮಲ್ಲಿಗೆಯ ಪಕಳೆ ಮೆಲ್ಲನೆ ಅರಳಿ ನನ್ನ ಎಷ್ಟೋ ಮಧುರ ಸ್ಟೃತಿಯಲ್ಲಿ ಹುದುಗಿ ತನ್ನ ಸುವಾಸನೆಯಿಂದ ಸುಗಂಧ ನಿನಾದವನ್ನು ಮರುಕಳಿಸುತ್ತದೆ. ಮಾನವನು ಹಲವು ಸಲ ದೈವದ ಮೇಲೆ ವಿಶ್ವಾಸ ಇಡಬೇಕೆಂದು ಇಲ್ಲಿ ನನಗನಿಸುವುದು. ನನ್ನ ಸ್ಮೃತಿ ಪಟಲದಲ್ಲಿ ಹಲವು ಸಲ ನನಗವಳ ನಾಟ್ಯಮಯ ಘಟನೆಗಳು ಕಣ್ಣಿಗೆ ಬಂದು ನಿಲ್ಲುವುದು. ಆವತ್ತು ಶನಿವಾರವಾಗಿತ್ತು. ನಾನು
ಹುಟ್ಟಿದ್ದೂ ಶನಿವಾರವಾಗಿತ್ತು. ಸುಮಾರು 1972 ಒಂದು ಸಂಜೆ ಉಡುಪಿಯಲ್ಲಿ ಆಗಿದ್ದ ನನ್ನ ಕಲಾಪ್ರದರ್ಶನ ನೋಡಲು ಅವಳು
ತನ್ನವರೊಡನೆ ಬಂದಿದ್ದಳು. ನಾನು ಅವಳೆಡೆ ನೋಡಿದೆ."ಕುಷ್ಠರೋಗಿಯ ಅಂತಿಮ ಬೇನೆ'' ಎಂಬ ಕೃತಿಯನ್ನು ವಿವರಿಸುವಾಗ ನಾನವಳ ಮೊಗದಲ್ಲಿ ಪರಕೀಯ ಬೇನೆಯನ್ನು ಅರಿವ ವಿಲಕ್ಷಣ ಛಾಯೆಯೊಂದನ್ನು ಕಂಡ! ನನಗರಿವಿಲ್ಲದೆಯೇ ನನ್ನ ಹೃದಯದಲ್ಲಿವಳು ಹುದಡುಗಿಕೊಂಡಳು. ನಾನವಳನ್ನು ನೋಡಿದಾಗ್ಳೂ ಅವಳು ತನ್ನ ಮೊಗವನ್ನು ಮೇಲೆತ್ತಿರಲ್ಲಿ. ಆದರೆ ಅವಳ ಅಂತರಾತ್ಮದಲ್ಲಿ ಕಲೆಯ ಜಾಡ್ಯವನ್ನು ತಿಳಿಯುವ ಆತುರತೆ ಇದ್ದಿರಬೇಕು ಅಂತ ನನಗನಿಸಿತು. ದಿನರಾತ್ರಿ ನಾನು, ಕಂಪನಿಯಲ್ಲಿ ಕೆಲಸಮಾಡುವ 'ಒರಟುಮಾನವ,ಕಲಾವಿದನಾದರೂ ಸ್ತ್ರೀಯರ ಬಗ್ಗೆ ಏನಾದರೂ ಹೇಳುವುದು ನನಗೆ ಅಸಾಧ್ಯವಾಗಿತ್ತು. ಕ್ಷಣಕಾಲ ಅವರೆಲ್ಲ ನನ್ನ ಬಿಟ್ಟು ಸಾಗಿದಾಗ, ನನ್ನದೆಲ್ಲವೂ ಬರಿದಾದಂತೆ ಭಾಸವಾಯಿತು. ಮನದಲ್ಲಿ ಅವಳ ನೆಸೆಪು ಪುನಃ ಪುನಃ ಮರುಕಳಿಸಿತು. ಆದ್ದರಿಂದ ಅವಳನ್ನು ಕಂಡಾಗ ಸ್ತ್ರೀಯೆಂದರೆ ವಿಶ್ವಕರ್ಮನು ತನ್ನ ಮೊದಲನೆಯ ಸಕ್ಕರೆಯ ನಿದ್ರೆಯಲ್ಲಿ ಬಟ್ಟ ಒಂದು ಉಸಿರಿರಬೇಕು ಅಂದೆನಿಸಿತ್ತು.ಸೂರ್ಯದೇವನು ಆಕಾಶದಲ್ಲಿ ಗುಲಾಬಿ ಮಡಿಕೆಯನ್ನೇಕೆ ಒಡೆದು ಬಿಟ್ಟನು. ಅವನೇಕೆ ಸಂತಸಪಟ್ಟ. ನಾನೂ ಆ ಗುಲಾಬಿ ಬಣ್ಣದ ಕಡೆ ನೋಡುತ್ತ ತುಂಬಾ ಆನಂದ ಪಡೆದಿದ್ದೆ. ಜೀವನದ ಆನಂದ! ಅವಳು ಬಂಡು ಶೃಂಗಾರದಲ್ಲಿ ಶೃಂಗರಿಸಿ, ನನ್ನ ಕಲಾಪ್ರದರ್ಶನವನ್ನ ನೋಡಿ ಹೋದ ಹಾದಿಯನ್ನು 'ನೋಡುತ್ತ ನಿಂತೆ' ತೃಷಿತ ಪಥಿಕನಂತೆ. ಅಹುದು ಅವಳು ನನ್ನ ಬಾಳ ಸಂಗಾತಿಯಾದಳು. ಸುಮಾರು 1973ರಲ್ಲಿ! ಇಲ್ಲಿ ಪುನಃ ನಾನು ಅಧೀರನಾದೆ! ಎಂದು ಹೇಳಬಹುದು. ಆವತ್ತು ಆ ನಿಶಾ ರಾತ್ರಿಯಲ್ಲಿ ಒಂದು ಪುಟ್ಟ ಮಗು ರೋದಿಸುವುದು ಕೇಳಿತು
ನಮಗಿರ್ವರಿಗೆ. ಅಹುದು ನಾನು ತಂದೆಯಾದ, ಆಕೆ ತಾಯಿಯಾದಳು. ಆ ರೋದನವು ನನ್ನ ಪುರುಷತ್ವದ ಪ್ರತಶೀಕವಾಗಿತ್ತು. ನಾನು ಎಲ್ಲಿಯೂ, ಏನನ್ನೂ ನಿರ್ಮಿಸಬಹುದೆಂಬ ಅಹಂಕಾರ ಭಾವನೆಯೊಂದು ಮನದಾಳದಲ್ಲಿ ಮೂಡಿ ಮಾಯವಾತು. ಅವಳು ತಾಯ್ತನದ ಆಗುಹೋಗುವಿನಲ್ಲಿ ಪ್ರಪಂಚವನ್ನು ಮರೆತಳು. ಇಲ್ಲಿ ನನ್ನನ್ನೂ ಹಲವಾರು ಸಲಮರೆತೆಳೆಂದಲ್ಲಿ
ನನಗೆ ನಗು ಬರುವುದು. ಮಾತೃತ್ವ ಸ್ತ್ರಿಯರಿಗೆ ಕೊಟ್ಟಿರುವ ಭಗವಂತನ ಶ್ರೇಷ್ಠವಾದ ಉಡುಗೊರೆಯ ಅಲಂಕಾರ. ಪ್ರಸೂತಿಯ ಕುಲುಮೆಯಲ್ಲಿ ಸುಟ್ಟು ಹೊರಬಂದಿರುವ ಚಿನ್ನದ ತುಂಡು. ನಿಸರ್ಗದಲ್ಲಿ ಎಲ್ಲವನ್ನು ನಿರ್ಮಲ ಮಂಗಳಮಯವಾಗಿ ಸೂಸುವ ವರದಾನ! ನಾನು ಕಣ್ಣಲ್ಲಿ ಕಣ್ಣಿಟ್ಟು ಆ ಮುಗ್ಗ ಜೀವವನ್ನು ನೋಡಿದೆ. "ಅನಂತಾನಂತ ಸುಂದರ ಗರಿಗಳು
ನನ್ನ ಮನದಾಳದಿಂದ ಹೊರಬಂದು...ನನ್ನ ಬೆರಳುಗಳು ಆಮಗುವಿನ ಬೆರಳನ್ನು ನವಿರಿಸಿತು. ಆತ್ಮದಲ್ಲಿ ಸಂತನವಿದ್ದರೂ, ಮನದ ಮೂಲೆಯಲ್ಲಿ ಇದನ್ನು ನನ್ನ. ಬಡತನದ ಬೇಗೆಯಲ್ಲಿ ಬೆಂದು. ಉಡುಗೊರೆಯಾಗಿ ಕೊಟ್ಟಿಯಾ ಅಂಡೆನಿಸಿತು. ಭಗವಂತನಲ್ಲಿ ಪ್ರಶ್ನಿಸಲು ನಾವ್ಯಾರು! ಪುನಃ ನನಗೆರಡು ಮಕ್ಕಳಾದರೂ, ಎಲ್ಲರೂ ಸೂರ್ಯ ರೂಪವನ್ನು ಪಡೆದರೆಂದಲ್ಲಿ ಹೆಚ್ಚಾಗಲಿಕ್ಕಿಲ್ಲ. ಆನಂದವೇ ಆನಂದ, ಸಂತಸವೇ ಸಂತಸ್ಫ ನನಗಾಯಿತಿಲ್ಲಿ ಎಂದರೆ. ಅತಿಶಯೋಕ್ತಿಯಾಗಲಿಕ್ಕಿಲ್ಲ.
ಇಲ್ಲಿ ಬರೆಯಬೇಕು. 'ಸ್ತ್ರೀ' ಎಂದರೆ ಗೂಟದಲ್ಲಿ ಕಟ್ಟಿರುವ ಹಸುವಿನಂತೆ. ಅವಳಿಗೆ ಇಷ್ಟವಾದ ವಿಷಯವನ್ನು ಅವಳು ಬಿಚ್ಚು
ಮನದಿಂದ ಹೇಳಲು ಅಸಾಧ್ಯ. ಅವಳ ಮನಸ್ಸು ಆಕಾಶದಂತೆ. ಲಕ್ಸಾವದಿ ದುಃಖವನ್ನು ಶಾಂತಳಾಗಿ, ಮೂಕಳಾಗಿ, ಸಹಿಸುವುದಕ್ಕೆ, ಜೀವನವೆಂದಲ್ಲಿ ಕೊನೆಗೆ ಎಲ್ಲಿಯಾದರೂ ಮಾಡಿಕೊಂಡಿರುವ ಒಡಂಬಡಿಕೆಯಲ್ಲಿವೆ.... ಒಂದು ಒಪ್ಪಂದ....ಪ್ರೀತಿಯ ...ಪ್ರಣಯದ ಒಪ್ಪಂದ! ಜಗತ್ತಿನಲ್ಲಿ ಎಲ್ಲಕ್ಕಿಂತ ಆಳವಾದ ಎಂದೂ ತಿಳಿಯದಂತಹದು ಏನಾದರೂಇದ್ದಲ್ಲಿ
ಅದು ಸ್ತ್ರೀಮನ ಮಾತ್ರ!
ಹಲವು ಸಲ ನನಗನಿಸುವುದು. ಸ್ತ್ರಿಯೆಂದಲ್ಲಿ ವಿಧಾತನ ವೈಭವದ ಪ್ರತಿಕ್ನ ಮಾನವತೆಯ ಮಾರ್ಯಾದಯ ಸೌಂದರ್ಯದ ಸಂಘಟನೆ. ಕೋಮಲತಶೆಯ ಕಳಸ ಪ್ರೇಮದ ಶಿಖರ, ಆದರೆ ನನಗದು ಸುಳ್ಳೆನಿಸುವುದು. ಪುರುಷನು ಕೋಪಿಸಿದರೆ ಓರ್ವನಲ್ಲಿ! ಆದರೆ ಸ್ತ್ರೀಮನ ಗಟ್ಟಿಮಾಡಿ ಕೊಂಡಲ್ಲಿ ಅವಳು ಜಗತ್ತನ್ನೇ ತನ್ನ ಮೇಲೆ ಎತ್ತಿಕೊಳ್ಳಬಹುದು.
ಸ್ತ್ರೀಯರ ಜೀವನವು ಎಷ್ಟೊಂದು ತಿರುವು ಮುರುವುಗಳಿಂದ ಕೂಡಿದೆ. ಒಮ್ಮೆ ಅವಳು ಯಾಠದೋ ಕನ್ಯೆ, ಯಾರದೋ ಹತ್ನಿ,
ಯಾರದೋ ಮಾತೆ, ಇದ್ದಂತೆ ಯಾರದೋ ಸೊಸೆ, ಯಾರದೋ ಅತ್ತಿಗೆ, ಯಾರದೋ ತಾಯಿ ಆಗುವಳು. ಅವಳಲ್ಲಿ ಸ್ವಂತದ ಸ್ಪತಂತ್ರ ಅಸ್ತಿತ್ವ ಎಂದೂ ಇರುವುದಿಲ್ಲ. ಇದ್ದರೂ ತೋರಿಸಲಿಕ್ಕೆ ಬರುವುದಿಲ್ಲವಲ್ಲ.
ವೈವಾಹಿಕ ಜೀವನದ ಪರಿಪೂರ್ಣತೆಯು ಪುತ್ರ ಸೌಖ್ಯದಲ್ಲಿರುತ್ತದೆ.ಅಂತ ನನಗೆ ಹೇಳಿದ್ದರು. ತಂದೆಗೆ ಮಗನ ಮುಖವನ್ನು
ನೋಡುತ್ತಲೇ, ತನ್ನ ಜೀವನವು ಧನ್ಮವಾಯಿತೆಂದು ಒಂದು ಅಭೂತಪೂರ್ವ ಆನಂದವ ಪಡೆಯುತ್ತಾನೆ. ಹೌದು ನನಗೂ
ಓರ್ವ ಮುಗನಾದನು ಇಲ್ಲೊಂದು ಜೀವನ ಪರ್ಕಾಯ ಮುಗಿಯಿತೆಂದು ಹೇಳಬಹುದಾದರೂ, ಜೀವನದ ಹಾದಿಯುದ್ದಕ್ಕೂ ಕೆಲಸಮಾಡುವ ಚಟವೂ ನನ್ನಲ್ಲಿ ಹುಟ್ಟಿಕೊಂಡಿತ್ತು. ಮಾನವನು ತಿಳಿವಳಿಕೆಯಿಂದ. ಎಂದೂ ಏನನ್ನೂ ನಿರ್ಮಿಸಲಿಲ್ಲ. ಶ್ರೀಮಂತನು ತೋರಿಸುವಿಕೆಗೆ ತನ್ನ ಹೆಗ್ಗಳಿಕೆಯನ್ನು ದಾನ ಮಾಡಿ ತೋರಿಸುವ ಪಾತ್ರಿಯನ್ನೂ ಸರಿಯಾಗಿ ಅರಿಯದೆ ಮಾಡಿದ ದಾನದಲ್ಲಿ ಅರ್ಥವೇನುಂಟು. ಶ್ರೀಮಂತನೆಂದು ಬಲ್ಲ!
ರಾತ್ರಿಯ ನೀರವತೆಯಲ್ಲಿ, ರಾತ್ರಿ ಪಾಳಿಯಲ್ಲಿ ನನಗೆ ಚಂದ್ರನನ್ನು ನೋಡುವ ಅವಕಾಶ ಸಿಕ್ಕಿತು. ಹೊರಗೆ ನೋಡಿದೆ.
ಜಗತ್ತಿಗೆಲ್ಲಾ ಸುಂದರ ತಿಳಿ ಚಂದಿರ ರಾತ್ರಿ. ಶಾಂತವಾಗಿ ನಗುತ್ತಿರುವ ಆ ಅಶೋಕವೃಕ್ಸಗಳು. ನನಗೆ ಕಂಡದ್ದೇ ಬೇರೆ ! ನನ್ನ ಅಂತರಾತ್ಮದ ತಳಮಳದಲ್ಲಿ ಎಲೆ ಎಲೆಯೂ ಬೆಂಕಿಯ ಜ್ವಾಲೆಯಂತೆ ಪಸರಿಸಿತ್ತು. ಮುಗಿಲೆತ್ತರಕ್ಕೆ ಹಾರುವ ಅತಿಯಾಶೆ ನನ್ನದಾಗಿತ್ತು. ತಿಳಿ ನೀಲ ಆಕಾಶದಲ್ಲಿ ತಳಮಳದ ಪ್ರತಿಬಿಂಬ. ಕದಡಿ, ನೋಯ್ಡ್ದು, ಬಗ್ಗಡವಾದ ನನ್ನ ಪ್ರತಿಬಿಂಬ. ಅದೇ ತಾನೇ ಶಾಂತವಾದ ಮಳೆಯ ನೀರಲ್ಲಿ ಕಂಡಿತು. ನೆಲ, ಮುಗಿಲು, ಎಲೆ, ಹೊಲಎಲ್ಲವೂ ಭುಗ್ಗನೆ ಬುಗಿಲೆದ್ದು ಹಾರಿತು. ದೂರ,
ಅತಿದೂರ, ಅದು ನನ್ನೆದೆಗೆ ಹಿಡಿದ ಕನ್ನಡಿ! ನನ್ನ ಕುಂಚಕ್ಕೀಗ ಬಣ್ಣದ ದಾಹವಿಲ್ಲ. ಪ್ರತಿಯೊಂದು ಬಣ್ಣದ ಹಿತವನ್ನು ಅರಿತ ನನಗೆ, ಎಲ್ಲವನ್ನೂ ನನ್ನ ಕ್ಕಾನುವಾಸಿನಲ್ಲಿ ಅಳವಡಿಸುವ ಆಶೆಯಿತ್ತು. ನನ್ನ ಬದುಕಿಗೆಷ್ಟು ಬಣ್ಣ. ತಂದೆ ತಾಯಿಯೆ ಬಣ್ಣ! ಅಣ್ಣ, ಅಕ್ಕ, ತಮ್ಮ ತಂಗಿಯಂದಿರ ಬಣ್ಣ! ಹೆಂಡತಿ ಮಕ್ಕಳು, ಮರಿಮಕ್ಕಳದ್ದು ಇನ್ನೂ ಆಗಿಲ್ಲ! ವಿಲಕ್ಷಣವಾದರೂ ಎಲ್ಲವೂ ಅರಿತಿರುವ
ಬಣ್ಣಗಳೇ! ಭಾವನೆಗಳಿಗೆಲ್ಲಾ ಒಂದೇ ಬಣ್ಣವೇ? ರಭಸದ ನನ್ನ ಕುಂಚದ ಬಡಿತ ಮೃದುವಾದದ್ದು ನೆಲ ಮತ್ತ ಮುಗಿಲ ಮಿಲನದಲ್ಲಿ, ಎಂಥದ್ದೊ ಹುಸಿ ನಿರೀಕ್ಷೆಯಲ್ಲಿ, ಆಶೆಯ ಅರೆ ಭರವಸೆಯಲ್ಲಿ, ಕೊಂಚ ತಂಪಾಯಿತೆಂದು ಅನಿಸುವುದು. ಮೃದುವಾದ ನೀರು ಮೋಡವಾದಾಗ, ನನ್ನ ಭಾವನೆಯ ನಾಗಾಲೋಟವನ್ನೆಲ್ಲಾ ಪ್ರಕೃತಿಯ ಚಲನೆಯಲ್ಲಿ ಗಾಳಿಗೆ ತೂರಿಟ್ಟ ಎಲೆಯಲ್ಲಿ ಹಿಡಿಯ ಹೂರಟೆ ನಾನು. ಮಾನಸಿಕ ಬೇಗುದಿಯಿಂದ ಬಿಡುಗಡೆಗೆ, ದೈಹಿಕ ಮಾರ್ಗಗಳ ತಡಕಾಡುತ್ತಿದ್ದ. ಬಗೆ
ಬಗೆಯ ಕುಂಚಗಳ ಬಿರುಸಿನಲ್ಲಿ ನನ್ನ ಒಳಗನ್ನು ಹೊರಹಾಕಲು ಚಡಪಡಿಸುತ್ತಿದೆ. ನನ್ನ ಅಶೋಕ ವೃಕ್ಷಗಳು. ನೋವಿನಿಂದ ಕಿವುಚಿ ತೂಗಿದಂತೆ, ಬಾನಿಗೆ ಬಾಯ್ತೆರೆದು ನಿಂತವು. ' ಪ್ರಕೃತಿಯ ಅಕಳಂಕಿತ ಸೌಂದರ್ಯ, ನಿಶಬ್ಧ, ನೀರವತೆ,
ನನ್ನ ಕಣ್ಣಿನ ಬಣ್ಣದಲ್ಲಿ ಕದಡಿ ಬಗ್ಗಡವಾಯಿತು. ಹೊರಗೆ ಕಂಡ ಪ್ರಕೃತಿ ಮಾಯವಾಗಿ, ನನ್ನ ಕುಂಚದ ಅಭಿವ್ಯಕ್ತಿಯೆ ನನಗೆ ಸತ್ಯವ್ಯಾಯಿತು. ಕಪ್ಪು. ಕತ್ತಲೆಯಲ್ಲಿ ಚಿಮ್ಮಿ ಹರಡಿರುವ ಚಂದ್ರಕಾಂತಿ ಯಲ್ಲಿ, ಬೆಳಕಿನ ತುಂಡನ್ನು ನಾನು ಚಿತ್ರಿಸಿದೆ. ಕ್ಯಾನುವಾಸು ತುಂಬಾ ಕುಂಚಸುತ್ತಿ, ಸುತ್ತಿ. ವ್ಯಕ್ತವಾದ ಮಾನವ ಗಿಡಮರಗಳು, ನನ್ನಿಂದ ರೂಪಪಡದು ಪುನಃ ಪುನಃ
ಬರತೊಡಗಿತು. ಭೂಮಿಯು ಕಾಮದ ಪರಾಕಾಷ್ಠಯಲ್ಲಿ ಹೊರಳಾಡಿದಂತಿತ್ತು. ಆದರದು ನನಗೆ ಇಷ್ಟವಾದ ವಿಷಯ. ನಾನು
ಚಿತ್ರಿಸಿದೆ, ಪುನಃ ಪುನಃ ಚಿತ್ರಿಸಿದೆ. ಮನದಾಳದಿಂದ ಹೊರಗೆ ಬಂದಿಹ ಬೇನೆಯನ್ನು ಪ್ರೀತಿಯನ್ನು ಪುನಃ ಪುನಃ ಚಿತ್ರಿಸಿದೆ: ಮಾನವತ್ವದ ಅರಿವನ್ನ ಪುನಃ ಪುನಃ ಚಿತ್ರಿಸಿದೆ.
ಖಾಲಿ ಕ್ಯಾನುವಾಸಿನಲ್ಲಿ ನನ್ನ ಕುಂಚ ಬಿಡಿಸದ ಬಣ್ಣಗಳಿಲ್ಲ. ನೋವಿನ ಚಿತ್ರವಿರುವುದು. ಬದುಕನ್ನು ಪ್ರತಿಬಿಂಬಿಸುವ ಪ್ರಯಾಸದೊಡನೆ, ಬದುಕನ್ನೇ ಅವಚಿಕೊಂಡ ಕ್ಯಾನುವಾಸುಗಳು ಖಾಲಿಯಿಲ್ಲ. ಬದುಕನ್ನು ಮಡಿಲಲ್ಲಿ ತುಂಬಿಕೊಂಡ ಕ್ಯಾನುವಾಸುಗಳು ಜೀವಂತವಾಗಿತ್ತು. ನನ್ನ ಚಿತ್ರಗಳೆಂದು ನನಗನಿಸುತಿತ್ತು.
ನನ್ನ ಕಲೆ ವೈಯಕ್ತಿಕವಾಗಿತ್ತು. ನಿಸರ್ಗ,ಸ್ಥಿರಚಿತ್ರ, ಭಾವಚಿತ್ರ, ಎಲ್ಲವನ್ನು ನಾನು ಕಂಡಂತೆ ಚಿತ್ರಿಸಲಿಲ್ಲ. ಅವುಗಳಿಗೆ ಸ್ಥಾಯಿತ್ವ ಕೊಟ್ಟೆ. ಚಲಿಸುವ ಅವುಗಳಿಗೆ ತನ್ನಷ್ಟಕ್ಕೇ ತಾನೇ, ಮಾತಾಡುವ ಶಕ್ತಿಯ ಕೊಟ್ಟೆ ನನ್ನೆಲ್ಲಾ ಚಿತ್ರದಲ್ಲಿ ನನ್ನ ಮನದ ಉನ್ಮಾದವಿತ್ತು. ಹಲವು ಸಲ ಏತಕ್ಕಾಗಿ ಈ ಚಿತ್ರಗಳು ಅಂತಲೂ ಅನಿಸಿದ್ದು ಉಂಟು. ಹುಚ್ಚು ಉನ್ಮಾದಕ್ಕೆ ಸಂಗಾತಿಯಾದ
ಈ ಚಿತ್ರಗಳ ಉಪಯೋಗ ವೇನು? ಈ ಬಣ್ಣಗಳ ಬಿರುಸು. ನನ್ನ ಎದೆಯ ಶಿಶಿರವನ್ನು ಕರಗಿಸುವಂತಿಲ್ಲು. ನನ್ನ ಬಾವನಯ
ತಾಕಲಾಟವನ್ನು ಶಾಂತಿಗೊಳಿಸುವಂತಿಲ್ಲ !ನನ್ನ ಹೃದಯದ ಸಿರಿವಂತಿಕೆಯನ್ನು ಸ್ಥಿರಗೊಳಿಸುವಂತಿಲ್ಲ! ನನ್ನ ಬೇನೆಯನ್ನು
ಅರಿಯಲಿಕ್ಕಿಲ್ಲ. ಇಲ್ಲಿ ವಿಚಿತ್ರವಂದಲ್ಲಿ ಎಲ್ಲಾ ಕಲಾವಿದರೂ, ಯಾ, ಸಾಹಿತಿ ಮಿತ್ರರೂ ಬದುಕಿನ ಭೌತಿಕ ಸುಖಗಳಿಗೆ ಹೊರತಾದವರೇ ಆಗಿರುವರು. ನಾವು ನಿಜವಾಗಿಯೂ ಬದುಕನ್ನು ಪೂರ್ತಿ ಕಂಡದ್ದು ಉಂಟೇ? ಯಾ ಸಾವಿನ ಆಚೆ ಬದಿಯ ನೋವನ್ನು ಒಂದಿಷ್ಟು ಉಂಡವರೇ? ಹೌದು ನಾವು ಕಲಾವಿದರು, ಸಾಹಿತಿಗಳು, ಸತ್ತಾಗ ಮುಂದಿನ ಪೀಳಿಗೆಗೆ ಕಥೆಯಾಗುವವರು. ನೋಡಿ ಅಲ್ಲಿ ನೋಡಿ, ಅದ್ಕಾರೋ ಕಲಾವಿದನಂತೆ - ದೇವದಾಸನಂತೆ ಹುಚ್ಚು ಕಲೆಯ ಅಳಿವಿಗಾಗಿ. ಸತ್ತನಂತೆ. ಆವತ್ತು ನಗುವವರು. ತುಂಬಾ ಇರುವರು. ಅಂತೆ, ಕಂತೆಯ ಈ ನಟಸಾಮ್ರಾಜ್ಯದಲ್ಲಿ ನಾವು ಬದುಕಿದ್ದೆಂದು? ಕಲಾವಿದನ ಬದುಕಿನಲ್ಲಿ ಸಾವಿಗಿಂತ ನಿಷ್ಠುರ ಸತ್ಯಗಳು ಅದೆಷ್ಟು ಬಾರಿ, ಹಾದು. ಹೋಗುವುದಿಲ್ಲ?
ನನ್ನೆಲ್ಲಾ ಮಾನಸಿಕ ಸ್ಪಂದನೆಯಲ್ಲಿ ನನ್ನ ಚಿತ್ರಗಳು ವಾಸ್ತವವನ್ನು ನನ್ನದೇ ಶೈಲಿಯಲ್ಲಿ ನಾನು ಚಿತ್ರಿಸಿದ್ದೆ. ನನ್ನ ಸಂಗೀತ ನಾಟ್ಕ ಸರಣಿ, ಕುಷ್ಠ ರೋಗಿಯಸರಣಿ, ನನ್ನಬೆಳದಿಂಗಳ ರಾತ್ರಿ, ನೋಡಲು ಭಾವ ಚಿತ್ರದಂತೆ ಕಂಡರೂ ಅದರಲ್ಲಿ ನನ್ನ ತನ್ನತನವಿತ್ತು. ನನ್ನ ಮನೆಯ ಬಾಲ್ಕನಿಯಲ್ಲಿ ನಿಂತು ನೋಡಿರುವ ಆ ಅಶ್ವತ್ಥ ಮರ, ಆದರ ಎಲೆಗಳು, ಅದರಲ್ಲಾಡುವ
ಹಕ್ಕಿಗಳು, ನನ್ನನ್ನು ಜಗದ ಬೇನೆಯಿಂದ ದೂರ ಸಾಗಿಸಿ ಪುನಃ ಚಿತ್ರಿಸಲು: ಪ್ರಚೋದಿಸಿದವು. ನೋವಿನ ಹಿಂಡುವಿಕೆಯಲ್ಲಿ ಬಡತನದ ಅರಿವಿಕೆಯ, ಸುಡುವ ಕಾವಿನಲ್ಲಿ ನನ್ನ ಕ್ಯಾನುವಾಸು ಅರಳ ಹತಿತ್ತು. ನನ್ನೆಲ್ಲಾ ಬೇನೆಯಲ್ಲಿ ನಾನು ಸದಾ ನನ್ನ ಕುಂಚಕ್ಕೆ ಶರಣಾಗುತ್ತಿದ್ದೆ. ಕಾರ್ಮಿಕರ, ಸಂಗೀತಕಾರರ, ರೈತಾಪಿ ಜನರ, ಭಿಕ್ಷುಕರ, ಕುಷ್ಠರೋಗಿಗಳ, ಅನುಕಂಪದಲ್ಲಿ ಒಳಹೊಕ್ಕ ಸಮಾಜ ಸುಧಾರಕ ಕೃಣದಲ್ಲಿ ಕಲಾವಿದನಾಗುತ್ತಿದ್ದ. ಈ ಕತ್ತಲಿನ ಬದುಕಿಗೆ ಬೆಳಕು ಹಿಡಿಯುವುದು ಹೇಗೆ? ಮುಂಬೈಯಲ್ಲಿರುವ ಕಲಾಶಾಲೆಗಳಿಗೆ ಪದೇ ಪದೇ ತಿರುಗಾಡುವುದು ನನ್ನ ಕೆಲಸವಾಗಿತ್ತು. ಕಲಾಶಾಲೆಯಲ್ಲಿ ನಾ ಏನನ್ನೂ ಕಲಿತಿಲ್ಲ. ಆದರೆ ಬಣ್ಣದ ಬಗ್ಗೆ ತೀವ್ರ ಸ್ಪಂದನ, ಜ್ಞಾನ ಮೂಡಿತ್ತು ನನ್ನಲ್ಲಿ ಬಣ್ಣಗಳು ಕೇವಲ ಬಣ್ಣಗಳಲ್ಲ, ಅದರಂತೆ ಅವುಗಳಿಗೆ ಆಳವಾದ ಅರ್ಥಗಳಿವೆ. ಬಣ್ಣಕ್ಕೂ ಬದುಕಿನುದ್ದಕ್ಕೂ ಬರುವ ಭಾವನೆಗೆ ನೇರ ಸಂಬಂಧ ಇರುವುದು. ಬಣ್ಣವನ್ನು ಕುರಿತು ತುಂಬಾ ಅಭ್ಕಾಸಮಾಡಿದೆ. ಬದುಕಿನ ದೂಡ್ಡ ದುರಂತವಂದಲ್ಲಿ, ಅನುಭವವನ್ನು ಕೂಡಿ ಹಾಕಿದಾಗ ಯೌವನವು ಕಳೆದುಹೋಗಿರುತ್ತದೆ. ಅನುಜಬ'ವದ ಆನಂದವನ್ನು ಹೀರುವ ನಾವು ಹಲವು ಸಲ ಬದುಕಿ ಉಳಿಯುವುದೂ ಇಲ್ಲ !
ಈಗಿಷ್ಟು. ನನಗೆ ಕೆಲಸ ಹೆಚ್ಚಿತು. ಅಂತರಾತ್ಮದಲ್ಲಿ ತಳಮಳ. ನರಗಳ ತೀವ್ರ. ತುಡಿತ. ರಕ್ತಹರಿವ ಖಾಲಿ ಧಮನಿಯಲ್ಲಿ ಪುನಃ
ಪುನಃ ಹುಚ್ಚು ಹೊಳೆಯಾಗಿ ರಕ್ತ ಹರಿದಂತೆ ಭಾಸ. ದೈಹಿಕವಾಗಿ ಸವೆದು ಹೋದಿದ್ದರೂ, ಮಾನಸಿಕವಾಗಿ ಸ್ಪೂರ್ತಿವಂತ ನಾಗಿದ್ದೆ. ನಾನು ಚಿತ್ರಿಸುವುದು ನಾಟ್ಯಮಯ ಗೆರೆಹಾಕುವುದು ನನಗೆ ಅನಿವಾರ್ಯ ವಾಯಿತು. ಕಲೆ ಹೆಚ್ಚು ಆನಂದವನ್ನು ಕೊಡುತ್ತಿದ್ದರೂ, ಅಂತರಾತ್ಮದ ಮೂಲೆಯಲ್ಲಿ ಏನಾದರೂ ಹೊಸತನ್ನು ಮಾಡುವ ತನಕ! ಮೊದಮೊದಲು ಜಲವರ್ಣದಿಂದ ಚಿತ್ರಿಸುತ್ತಿದ್ದ.. ನನಗೆ, ತೈಲವರ್ಣಕ್ಕೆ ತಿರುಗಿದ್ದು. ನಾನು ವಿನ್ಸೆಂಟ್ ವ್ಯಾನ್ ಗೋಗ್‌ನ ಚಿತ್ರವನ್ನು ಅಭ್ಯಸಿಸದ ನಂತರ, ಅವನೊಬ್ಬ ಅಪ್ಪಟ ಕಲಾವಿದ. ಜೀವನದ ಹಾದಿಯುದ್ದಕ್ಕೂ ಬೇನೆಯನ್ನು ಉಂಡು, ತಾಳಲಾರದೆ ತನ್ನನ್ನು ತಾನು ಕೊಂದುಕೊಂಡ ಕಲಾವಿದ! ಇಲ್ಲೇ ಕಡು ಹಳದಿ, ನೀಲಿ, ಕೆಂಪು, ಹಸಿರು ನನ್ನ ಕ್ಯಾನುವಾಸಿನಲ್ಲಿ ಮೆತ್ತಿನಿಂತ ಬಣ್ಣಗಳು. ನಾ
ಎಂದೂ ದಪ್ಪವಾಗಿ ಯಾ ಅರ್ಥವಿಲ್ಲದ ಬಣ್ಣವನ್ನು ಉಪಯೋಗಿಸಲಿಲ್ಲ. ಅರ್ಥವಿಲ್ಲದ ಗೆರೆಯನ್ನೂ ಹಾಕಲಿಲ್ಲ. ನನ್ನ ಭಾವನೆಯ
ಅರಿವನ್ನೂ ತಿಳಿಯಲು ನಾನು ಟ್ಯೂಬಿನಿಂದಲೇ ಬಣ್ಣವನ್ನು ಹಿಚುಕಿದ್ದರೂ, ನನ್ನ ಬ್ರಶ್‌ನ ಮುಖಾಂತರ ಚಿತ್ರಗಳಿಗೆ ಸರಿಯರ್ಥ ಬರುವ ತನಕ ಅದನ್ನ ಪಸರಿಸುತ್ತಿದ್ದೆ. ನಾ ಕಂಡ ಪ್ರಕೃತಿಯನ್ನು ಜನಜೀವನವನ್ನು ನಾಬಿಡಿಸಿದ್ದ. ಕೋಣೆಯ ತುಂಬಾ ಮಾರಾಟವಾಗದ ಚಿತ್ರಗಳು ನನ್ನ ನೋಡಿ ಕೆಕ್ಕರಿಸಿ ನಗುತ್ತಿದ್ದವು. ಗಕ್ಕನೆ ನಿಂತು ನಾನು ಅವನ್ನು ನೋಡಿದಾಗ, ಕಲಾವಿದನೆಂಬ ತೃಪ್ತಿ ಮನದಲ್ಲಿ ಆಗುತ್ತಿತ್ತು. ಹರಿದ ಚಪ್ಪಲಿ, ತೇಪೆ ಹಚ್ಚಿದ ಅಂಗಿ, ತೂತು ಬಿದ್ದ ಪ್ಕಾಂಟು,ಹಸಿವಿನಿಂದ ಆಳಕ್ಕಿಳಿದು ಗೂಳಿಬಿದ್ದ ನನ್ನ ಕೆನ್ನೆಯಲ್ಲಿ ನನ್ನ ಕನಸುಗಳು ಸೋರಿ ಹೋಗಿದ್ದವು. ಮೂವತ್ತಕ್ಕೆ ಅರ್ಧ ಉದುರಿದ ಹಲ್ಲುಗಳು. ಪ್ರಸಿದ್ದ ಬಂಟ ಸಮಾಜದ ಓರ್ವ ಕಲಾವಿದ. ಆದರೆ ನನ್ನ ಒಂದು ಚಿತ್ರವನ್ನು ಕೊಂಡುಕೊಳ್ಳದವರು, ಚಿತ್ರಬಿಡಿಸಲು ಹೇಳಿ
ಕಡೆಗೆ ಈಗ ಬೇಡ ಅಂತ ಹೇಳಿದರು. ವಾರದ ಏಳು ದಿನಗಳೂ ಗಂಜಿಯಲ್ಲೇ ಕಳೆಯಿತು. ನನ್ನ ಬದುಕೊಂದು. ದೊಡ್ಡ
ಹಣಗಳಿಸಲಿಲ್ಲ. ಹಣವಿಲ್ಲವೆಂದು ನಮ್ಮವರ, ಮಾನ. ಪ್ರೀತಿ ಗಳಿಸಲಿಲ್ಲ. ಉಳಿದ ಸೋಲು.
ಕಲಾಪ್ರಪಂಚಕ್ಕೆ ನನ್ನ ಅಗತ್ಯವಿರಲಿಲ್ಲ. ನನ್ನ ಬಣ್ಣಗಳ ಭಾಷ ಬದುಕನ್ನು ಬಿಂಬಿಸುವ ಒರಟು ಗೆರೆಗಳು, ಇವರಲ್ಲಿ ನನ್ನ ಕಲೆಯನ್ನು ಅರ್ಧ ವಾಗಿಸಲಿಲ್ಲ. ನುಣುಪುಗಲ್ಲದಲ್ಲಿ, ನಯವಾದ ಬಣ್ಣದಲ್ಲಿ, ನಾ ಕಂಡು ಆಶೆಪಟ್ಟ ಬದುಕು ಎಲ್ಲಿರುವುದು. ದಿನ ನಿತ್ಯದ ಬದುಕನ್ನು ಗಾಢವರ್ಣಗಳಿಗೆ ಹೇಗೆ ಅಭಿವೃಕ್ತಿಸಲಿ, ಕನಸನ್ನೇ ಕೊಳ್ಳುವ ಈ ಜಗತ್ತಿಗೆ ನನ್ನ ಸಿದ್ದ ಬಣ್ಣದ ವಾಸ್ತವಗಳು ಹೇಗೆ ಹಿಡಿಸಿಯಾವು? ನಾನು ಕನಸಿನ ಪ್ರಪಂಚದಿಂದ ಹೊರ ಬಂದು ಚಿತ್ರಿಸುವವ. ನನಗೆ ಕನಸು ಕ್ಷಣಿಕ ವಸ್ತುವಿನ ನಾದ ಮಾತ್ರ. ವಾಸ್ತವತೆಯನ್ನು ಅರಿತು ಚಿತ್ರಿಸುವ ಹಲವಾರು ಕಲಾವಿದರ ಪಂಕ್ತಿಯಲ್ಲಿ. ನಾನು ನನ್ನನ್ನು ನಿಲ್ಲಿಸ ಹೊರಟೆ! ಕಾಲ ಮತ್ತು ಸಮಯದೊಡನೆ. ಮಾನವನ ಬೇಡಿಕೆಯೂ ಬದಲಾದವು. ಮನಸ್ಸು ಈಗ್ಕ ಪೂರ್ಣ ತನ್ನತನವನ್ನು ಕಳಕೊಂಡಿತ್ತು. ಬರಿಯ ಕಲೆಗಾಗಿ ಜೀವಿಸಬೇಕೆಂದು ಆಶೆ ಪಟ್ಟಿತ್ತು. ಬೊಗಸೆಯಲ್ಲಿ ಹಿಡಿವ ಮೊದಲೇ ನನ್ನ ಬದುಕು ಸೋರಿಹೋಗಿತ್ತು. ನನಗಾಗಿ ಕಾಯದೆ ನನ್ನ ಬಿಟ್ಟುಹೋಗಿತ್ತು, ಆಯಾಸವಾಗಿತ್ತು ದೇಹಕ್ಕೆ, ನಾನು ಬಣ್ಣಕ್ಕೆ ಬೆರಳದ್ದಿದ್ದೆ, ನನ್ನ ಚಿತ್ರ ಕುಷ್ಠರೋಗಿಯ ಅಂತಿಮ ಬೇನೆ, ಬಸುರಿಯ ಬವಣೆ, ಎಲ್ಲೋ ಈಗಿರಬಹುದು. ನನಗದರ ಅರಿವಿಲ್ಲ. ನನಗದರ ಬಣ್ಣದ ನನಪುಂಟು. ದೂರ
ದಿಗಂತವು ಎದ್ದು ಮುನ್ನುಗ್ಗಿ ನನ್ನ ಕ್ಯಾನವಾಸಿನಲ್ಲಿ ಪುನಃ ಪುನಃ ಮೂರು ಹಾದಿಯನ್ನು ಬಿಡಿಸಿದ್ದವು. ನನಗೆ ನನ್ನ ಬದುಕಿನ
ಅಂತ್ಯವು ಚನ್ನಾಗಿ ಗೊತ್ತುಂಟು. ನನ್ನ ಬದುಕಿಗೆ ಇನ್ನಾವ ಬಣ್ಣಗಳು ಉಳಿದಿಲ್ಲ. ಬದುಕಿಗೆ ಬಿಸಿಲು, ಬಂಗಾರದ ಛಾಯೆ ಇಲ್ಲ. ಮೂರು ಹಾದಿಯನ್ನು ಯಾವಾಗಲೂ ಬಿಡಿಸುವ ಏಕೆ ಎಂದು ನನಗೆ ಗೊತ್ತಿಲ್ಲ. ಎತ್ತಲೋ ಹರಿದ ಎರಡು ಹಾದಿಗಳ ಗುರಿಯೂ ತಿಳಿಯದು. ನೇರ ಹೋಗುವ ಹಾದಿಯು ಭವಿಷ್ಯವಿಲ್ಲದೆ ಗಕ್ಕನೆ ನಿಲ್ಲುವುದು. ನಾನು ಹೂರಳಿ ನಿಂತು ನೋಡಿದಾಗ ನನ್ನ ನೋಡಿ ನಗುವವು ಆ ನನ್ನ ಮೊಂಡು ಹಾದಿಗಳು. 1982 ಶನಿವಾರ ಸಾಯಂಕಾಲವೂಂದು, ರೂಢಿಯಂತೆ ಜಹಂಗೀರಠ ಆರ್ಟ್ ಗ್ಯಾಲರಿಗೆ ಹೋಗಿದ್ದೆ. ನನಗೆ ಸಮುದ್ರ ಕಿನಾರೆಯನ್ನು ನೋಡುವ, ಕುಳಿತುಕೊಳ್ಳುವ ಅಂತ ಮನವಾಯಿತು. ಮರೀನ್ ಲಾಯಿನಿನ ಸಮುದ್ರ ಕಿನಾರೆ ಅಂದು ನನ್ನ ನೋಡಿ ಆತ್ಮೀಯತೆಯಿಂದ ಸ್ವಾಗತಿಸಿತು. ಬರಸೆಳೆದ ಆ ಅನಂತ ಪ್ರೀತಿಯನ್ನು
ಕಂಡಾಗ, ಈವತ್ತು ನಿನ್ನ ಜಲಚರಗಳಿಗೆ ನನ್ನ ಈ ಬಡಕಲು ಶರೀರದ ಮೃಷ್ಟಾನ್ನ ಭೋಜನವು ಸಿಗುವುದು ಅಂತ ಎಣಿಸಿತು. ನೀನು ಧನ್ಯೆ. ನಿನ್ನಲ್ಲಿ ಬೇರೆಯವರ ಬೇನೆಯನ್ನು ತಿಳಿವ ಸಾಮರ್ಥ್ಯವಿದೆ ಎಂದವಳಿಗೆ ಪುನಃ:ಮನದಲ್ಲೇ ನಮಿಸಿದೆ. ಸುಮಾರು ನಡುರಾತ್ರಿಯಲ್ಲಿ ಶಾಂತವಾದ ಸಾಗರ ಕಿನಾರೆಯಲ್ಲಿ ಕುಳಿತ ನನಗೆ ದೂರದಲ್ಲಿ ಸಾಗುವ ಹಡಗನ್ನು ನೋಡಿದಾಗ,
ಆ ಹಡಗ ಎಲ್ಲಿ ಮುಳುಗುವುದೋ ಅಂತ ನನ್ನ ಮನವು ಹೆದರಿತು. ಮನೆಯಲ್ಲಿ ಕಾಯುವ ನನ್ನ ಪತ್ನಿ ಮಕ್ಕಳನ್ನು ನೆನದಾಗ ಕಣ್ಣಂಚಿನಿಂದ ಕಂಬನಿಯು ಹಗುರವಾಗಿ ಉದುರಿತು! ಆದರೆ ಈ ಜೀವನವಿದ್ದು ಪ್ರಯೋಜನವೇನು? ಅಂತ ನಾನು ನನ್ನ ನಿರ್ಧಾರವನ್ನು ಪುನಃ ಪುನಃ ದೃಢೀಕರಿಸಿದೆ. ಈ ಕತ್ತಲೆಯ ರಾತ್ರಿಯಲ್ಲಿ ಚಂದ್ರನು ನನ್ನ ನೋಡಿ ನಕ್ಕನು. ಬಹುಶಃ ಕರ್ಣನಂತೆ ನಾನು. ಸೂರ್ಯನನ್ನು ನಂಬುವವನಾಗಿದ್ದನೆಂದು. ಅವನಿಗೆ ಮತ್ಸರವಾಗಿರಬಹುದು. ಕ್ಷಣ ಕ್ಷಣಕ್ಕೂ ಚಂದ್ರನು ದೂರವಾಗಿ ಅಸ್ತಂಗತನಾದನು. ನಾನಂದೆ ಈಗ್ಗೆ ಸರಿಯಾದ ಸಮಯ. ಈ ಸಂಸಾರವನ್ನು ಬಿಡಲು ಮುೆಗಾಗಿ ಚೀಟಿಯೊಂದನ್ನು ನಾನು ಮುಂಚೆಯೇ ಬರೆದಿದ್ದೆ. ಹರಿದ ಕೊಲ್ಲಾಪುರಿ ಚಪ್ಪಲಿ, ಹರಕು ಚೀಲ, ಹಲವಾರು ಡ್ರಾಯಿಂಗ್ಸ್, ಹಸಿವಿನಿಂದ ಕಂಗೆಟ್ಟು ಹೋಗಿರುವ ಈ ಕೃಶ ಶರೀರ, ನನಗರಿವಿಲ್ಲದೆಯೇ ನನ್ನ ನೋಡಿ ನನಗೆ ನಗುಬಂತು. ವಿಲಕ್ಷಣ ವೇದನಾಪೂರ್ಣ ನಗು. ಸಾಯ ಹೋರಟವನ ನಗು. ಇನ್ನೇನು ಅಂತ ಹೇಳಿ ಎದುರಿರುವ ಸಮುದ್ರಕ್ಕೆ ಹಾರಬೇಕು. ಕಡೆಯದಾಗಿ ದೇವರಿಗೆ ನಮಿಸಿದೆ. ಎದ್ದು
ನಿಂತೆ, ಕಡೆಯ, ಮುಗಿಯದ ಯಾತ್ರೆಗೆ. ಆಗಲೇ ಬಂತು, ಪೋಲಿಸ್‌ಗಾಡಿಯೊಂದು. ಅದು ನಿಲ್ಲುವ ಶಬ್ದವು ನನ್ನ ಜ್ಞಾನವನ್ನು
ಭಂಗಮಾಡಿತು. ಪೋಲಿಸ್ ಪೇದೆಯೊಬ್ಬ ನನ್ನ ಬಳಿಬಂದು "ಕ್ಕಾ ಕರತಾ ಹೈ ತುಂ'' ಅಂತ ಕೇಳಿದಾಗ, ಆತನಲ್ಲಿ ನನಗೇನೋ ಆತ್ಮೀಯತೆ ಕಂಡಿತು. ಆತ ಪುನಃ "ತುಂ ಚೋರ್ ತೋ ನಹೀ'' ನನಗವನ ಮಾತಿನಿಂದ ಬೇಸರವಾಗಲಿಲ್ಲ. ಸಾಯ ಹೊರಟವನನ್ನು ಕಳ್ಳ, ಕಿರುಬನಂದರೇನು. ಹೇಡಿ ಪರೀಕನಂದರೇನು. ನನ್ನ ಹೆಗಲಲ್ಲಿದ್ದ ಚೀಲವನ್ನು ನೋಡಿ ಅದರಲ್ಲಿ ಏನುಂಟು ಅಂತ ಕೇಳಿದ. ನಾನು ಅವನಿಗೆ ಹಲವಾರು ರೇಖಾ ಚಿತ್ರವನ್ನು ತೋರಿಸಿದೆ. ಹೋಗು ಮನೆಗೆ ಹೋಗು ನೀನೋರ್ವ ಶ್ರೇಷ್ಠ ಕಲಾವಿದನಾಗಬಹುದು. ನಿನಗೆ ಜೀವನದಲ್ಲಿ ಒಳಿತಾಗುವುದು. ನಾನವನ ಆತ್ಮೀಯ ಮಾತಿನಿಂದ ಭಾವ ವಿಹ್ವಲನಾದೆ. ಇಲ್ಲೇ ಇದ್ದರೆ ಗಸ್ತಿನ ಪೋಲಿಸರು ನಿನ್ನನ್ನು ಸಂಶಯದಲ್ಲಿ ಜೈಲಿನಲ್ಲಿ ಹಾಕಬಹುದು. ಅಂತ ಅವನು ತನ್ನ ಗಾಡಿಯಲ್ಲೇ ತನಕ ತಲುಪಿಸಿದ. ನನ್ನನ್ನು ಬದುಕಿಸಿ ನನಗೆ ಜೀವನದಾನ ಮಾಡಿರುವ-ಆ-ಪೋಲ್ವಿಸಿನವ ನನಗೆ ಈಗಲೂ ನೆನಪಿಗೆ ಬರುವ! ಇಂತಹ ಪೋಲಿಸರು ಈಗಲೂ ಇರುವರಾ ! ಜೀವನದ ಈ ವಿಡಂಬನೆಯು ನನಗೆ ಅರ್ಥವಾಗಲೇ ಇಲ್ಲ. ಬಹುಶಃ ಇದು ನನ್ನ ಬದುಕಿನ ಎರಡನೆಯ ತಿರುವು ಆಗಿರಬಹುದು! ಈಗ ನನ್ನಲ್ಲಿ ಒಂದು ವಿಲಕ್ಷಣ ಶಾಂತಿ ಉಂಟು. ಓಡಿ, ಓಡಿ ಸೋತು, ನಿಂತುಕೊಂಡ ಕುದುರೆಗೆ ಸಿಕ್ಕ ಶಾಂತಿಯಂತೆ! ಯಾವಾಗಲೋ ಗಾಜು ಒಡೆದರೆ ಉಂಟಾಗುವ ಘಲ್ ಎಂಬ ಶಬ್ದದ ಅರ್ಥವಾಗದ ಶಾಂತಿ! ನಿಶಾರಾತ್ರಿಯ ಚಂದಿರನ ಉದಯದಿಂದ ಪಸರಿಸುವ ವಿಲಕ್ಷಣ ಮೀನ ಶಾಂತಿ, ನನ್ನ ಚಿತ್ರಗಳು ವಿವಿಧ ಕಲಾವಿದರ ಚಿತ್ರವನ್ನು ಅನುಸರಿಸಲು ಹೋದವು. ತನ್ನತನವನ್ನು ಉಳಿಸಿಕೊಳ್ಳಲಾರದ ಚಿತ್ರಗಳು ಸೆಳೆದು ನಿಂತವು. ಕಲೆ ಆಧುನಿಕತೆಯನ್ನು ನಾನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ನಾನು ಆಧುನಿಕ 'ಚಿತ್ರಕಾರನಾಗಲು ಬಯಸಲಿಲ್ಲ. ಈ ಕಾರಣದಿಂದಾಗಿ ನನ್ನ ಚಿತ್ರಗಳು ಜನಮನವನ್ನು ಗೆಲ್ಲಲಿಲ್ಲವಂದು ಹೇಳಬಹುದು. ಅದರಿಂದ ನನಗೆ ಬೇಸರವಾಗಲಿಲ್ಲ. ಕಾರಣ ಜನರನ್ನೂ, ಜನರಲ್ಲಿ ಹೊಕ್ಕು ತಿಳಿಯುವ ಜಾಡ್ಕವೊಂದು ನನ್ನಲ್ಲಿ ಹುಟ್ಟಿತು. ನಾನು ಮುಖಭಾವದಿಂದಲೇ ಜನರ ಗುರುತಿಸುವ ಕಲೆಯನ್ನು ಕಲಿತೆ! ಚಿತ್ರ ಬಿಡಿಸಬೇಕು - ಹಗಲು - ರಾತ್ರಿಯ ಅಂತರ ತಿಳಿಯದೆ. ಚಿತ್ರಿಸಬೇಕು. ಎಂಬ ಭಾವನೆಯ ತಿಳುವಳಿಕೆಯಿಂದ, ರಾತ್ರಿಪಾಳಿ ಮುಗಿದು ಮನೆಗೆ ಬಂದ ತಕ್ಷಣವೇ ನಾನು ನನ್ನ ಕ್ಯಾನುವಾಸಿನ ಮುಂದಿರುತ್ತಿದ್ದೆ. ರಾತ್ರಿಯಿಡೀ ನಿದ್ರೆ ಇಲ್ಲದೆ ಬಂದ ನನ್ನ ಅವಿಶ್ರಾಂತ ಕಣ್ಣುಗಳಿಗೆ, ನನ್ನ ಬಿಳಿ ಬರಿದಾದ ಕ್ಕಾನುವಾಸು ತಂಪನ್ನು ಕೊಟ್ಟಿತ್ತು. ನನಗೆ ನನ್ನ ಚಿತ್ರಗಳಲ್ಲಿ ನನ್ನ ಕುಂಚಗಳಲ್ಲಿ ಹೊಸತೊಂದು ಶಕ್ತಿಯ ಭಾಸವಾಗುತ್ತಿತ್ತು. ಎಂತಹದೋ ಕೌತುಕ, ಕಳವಳ, ಆಯಾಸ, ಅಭದ್ರತಾ ಭಾವ, ಸೋಲುತ್ತಿರುವ ನರಗಳ ಅನುಭವವಿದ್ದರೆ, ಒಂದು ಆತ್ಮೀಯತೆ, ಒಂದು ತೃಪ್ತಿ ನನಗೆ ನನ್ನ ಚಿತ್ರಗಳನ್ನು ಪೂರ್ತಿಮಾಡಿ ಅದಕ್ಕೆ ಹೆಸರು ಇಡುವಾಗ ಮುಗ್ದ ಮಗುವಿನ ಜನನವಾಗಿ ನಾಮಕರಣ ಮಾಡಿರುವ ಆನಂದವಾಗುತ್ತಿತ್ತು.
ಸಣ್ಣ ಮನೆಯಿಂದ ದೂಡ್ಡ ಮನೆಗೆ ಬಂದಾಗ, ಹಿಮ ಮುಚ್ಚಿದ ಪರ್ವತದಲ್ಲಿ ಒಂದು ಕಲ್ಲುತುಂಡು ಸಿಕ್ಕರೂ ಆಗುವ ಆನಂದ
ಉನ್ಮಾದವು, ನನ್ನನ್ನು ಉತ್ಸಾಹದಿಂದ ಪುನಃ ಪುನಃ ಚಿತ್ರಿಸಲು ಆನಂದವ ಕೊಟ್ಟಿತು. ಕಪು ಹಿನ್ನಲೆಯಲ್ಲಿ ಪುನಃ ಬಿಳಿ ಕ್ಕಾನುವಾಸಿಗೆ ಬೆಳಕಿನ ಸ್ಪರ್ಶವಾಗುವಾಗ ಉಂಟಾಗುವ ತನ್ಮಯತೆಯು ನನ್ನ ಭಾರತದ ಕೆಂಪು ಮಣ್ಣು, ಕಪು ಮಣ್ಣು,
ಹಳದಿ ಮಣ್ಣುಗಳು, ಮುಗಿಲಿಗೆ ಭುಗಿಲೆದ್ದ ತಾಳೆಮರ, ಅಶೋಕ, ಅಶ್ವತ್ಥ ಮರಗಳು, ಕಮಲದ ಹೂವನ್ನು ಹಾಸಿರುವ ಸಣ್ಣ ಸಣ್ಣ
ತೊಳವೆಗಳು ನೀಲ ಆಕಾಶ, ಪ್ರಕೃತಿಯ ಮಡಿಲಲ್ಲಿ ಸುಂದರವಾಗಿ ಮಲಗಿರುವ ಆ ನನ್ನ ಊರು...ಬಿಡಿಸಿದೆ.... ಸಂತಸದ ಬಣ್ಣದಿಂದ ಜೀವನದ ಬೇನೆಯಿಂದ ದೂರ ಇರುವ ಜನರನ್ನು ಹತ್ತಿರದಿಂದ ಬಿಡಿಸಿದೆ; ಜೀವನದ ಬೇನೆಯಿಂದ ಹತ್ತಿರ ಇರುವ ಜನರನ್ನು ದೂರದಿಂದ ಬಿಡಿಸಿದೆ!
ಈಗ ನನ್ನ ಚಿತ್ರಗಳಿಗೆ ತುಂಬ ಬಣ್ಣಗಳು. ಕಪ್ಪು ಹಿನ್ನಲೆಯಲ್ಲಿ ಮಂಕು ಬಡಿಸುವ ಕ್ಯಾನುವಾಸಿಗೆ ಪ್ರಕೃತಿಯ ತುಂಬಾ ಸಂಭ್ರಮದ ಬಣ್ಣಗಳು. ಕೆಂಪು , ಕೇಸರಿ, ನೀಲಿ, ಅರಸಿನ, ಹಸಿರು, ಮಂಕು ಇತ್ಯಾದಿ, ಇತ್ಯಾದಿ. ಪ್ರಕೃತಿಯ ಅನುಪಮ ಸೌಂದರ್ಯ, ನಿಶಬ್ದ, ನೀರವತೆ, ನನ್ನ ಅಂತರಾತ್ಮದ ಬಣ್ಣದಲ್ಲಿ ಕದಡಿ ನನ್ನ ಕ್ಯಾನುವಾಸಿನಲ್ಲಿ ಹೊರ ಸೂಸಿತು. ನಾ ಹೊರಗೆ ಕಂಡ ಪ್ರಕೃತಿಯು ಸುಳ್ಳಾಗಿ, ನನ್ನ ಕುಂಚದ ಸತ್ಯವಾದ ಅಭಿವ್ಯಕ್ತಿಯೇ ನನ್ನ ಸತ್ಯವಾಯಿತು. ನನ್ನ ಬದುಕಿನ ಭವಿಷ್ಯ ನನಗಿಂತ ಹಚ್ಚಾಗಿ ನನ್ನ ಕುಂಚಕ್ಕೆ ತಿಳಿದಿತ್ತು ಅಂತ ಇಲ್ಲಿ ಹೇಳುವೆನು. ಕಾರಣ ನಾನು ಆತ್ಮದ ಹೊಸಲಿನಿಂದ ಬಂದ ರೂಪವನ್ನು ಮಾತ್ರ ಚಿತ್ರಿಸುತ್ತಿದ್ದೆ.
ಸುರಳಿ ಸುರಳಿಯಾಗಿ ನಿಂತ ಗಿಡಮರಗಳು, ಬಿಕೋ ಎನ್ನುವ ಖಾಲೀತನ, ಭುಗ್ಗನ್ನೆದ್ದ ಕರಿಕತ್ತಲೆಯ ಮೋಡಗಳು (ನನ್ನ
ಬಾಲ್ಕನಿಯಿಂದ ಕಾಣುವುದು) ಬಗೆ ಬಗೆಯ ಹಲವು ತಿಂಡಿಗಳನ್ನು ಕಾ, ಕಾ, ಎಂದು ತನ್ನ ಸಂಗತಿಯನ್ನು ಕರೆದು ತಿನ್ನುವ ಕಾಗೆಗಳು ಎಲ್ಲವೂ ಸರಿಯಾಗದೆ, ಸರಿಯಾಗಿ ಭುಸ್ ಅಂತ ನಿಂತಿರುವ ಆ ನನ್ನ ಕ್ಕಾನುವಾಸುಗಳು ನನಗೇನೋ ಉನ್ಮಾದ. ತಾಯ್ತನದ ಅರಿವನ್ನ ಕೊಟ್ಟಿತು... ಮುಂದೆ ಪ್ರತಿಯೊಂದು ಕಲಾಪ್ರದರ್ಶನಗಳು ನನಗೆ ಹೆಸರನ್ನೂ ದೃಢತೆಯನ್ನೂ ಕೊಟ್ಟಿತಾದರೂ, ನನಗೆ ನನ್ನ ಕಲೆಯಲ್ಲಿ ವ್ಯಾಪಾರಿ ಮನೋಭಾವವೆಂದೂ ಬರಲಿಲ್ಲ... ಕಾರಣ ನಾನು ಕಲಾ ವ್ಯಾಪಾರಿಯಲ್ಲ. ನಾನು ಹೊಸ ಹೊಸ ದೊಡ್ಡ ಚಿತ್ರಗಳಿಗೆ ನಾಂದಿಯನ್ನು ಹಾಕಿದೆ. ಮದ್ರಾಸು, ಬೆಂಗಳೂರು, ದಿಲ್ಲಿ, ಕಲಕತ್ತ, ಮುಂಬಯಿ ಹೀಗೆ ಭಾರತ ಮತ್ತೆ ಭಾರತದ ಹೂರಗೂ ನನ್ನ ಚಿತ್ರಗಳು ಕಲಾ ರಸಿಕರಲ್ಲಿ ರಾರಾಜಿಸತೊಡಗಿದವು. ಬೇನೆಯೆಂದರೆ ನನ್ನನ್ನು
ನನ್ನವರು ತಿಳಿಯಲಿಲ್ಲವೆಂದೇ ನಿಜವಾಗಿಯೂ ಬಂಟರು ನನ್ನ ಕಲೆಯನ್ನ ಅರಿಯಲಿಲ್ಲ. ಅದಕ್ಕಾಗಿಯೇ ನಾನು ನನ್ನನ್ನು ಬಂಟನೆಂದು ಹೇಳಿಕೊಳ್ಳಲು ಹಿಂಜರಿಯುವನು: ನನ್ನನ್ನು ನೀವು ನೋಡಿರುವಿರಿ ಮದುವೆಯ ಹಂದರಲ್ಲಿ, ಕಲಾ ಪ್ರಪಂಚದ ಅಂಕು ಡೊಂಕು ಹಾದಿಯಲ್ಲಿ ಹಸಿರು, . ನೀಲಿ, ಕೆಂಪು, ಹಳದಿ, ಬಣ್ಣದಲ್ಲಿ ಆ ನನ್ನ ಊರ ಬಯಲಲ್ಲಿ, ನಿಶಾಂತ ರಾತ್ರಿಯ
ಆಕಾಶದ 'ಶಾಂತಮಯ ಗಾಳಿಯಲ್ಲಿ, ಆ ಬೇನೆಯಲ್ಲಿ ಹುಟ್ಟುವ. ನನ್ನ ಚಿತ್ರ ಕೃತಿಗಳಲ್ಲಿ. ನಿಮ್ಮಲ್ಲಿ ಕೊಡಲು ನನ್ನಲ್ಲಿ ಏನುಂಟು.
ಬರೆಯ ಪ್ರೀತಿ ಮಾತ್ರ. ಕೊಟ್ಟು ಕೊಟ್ಟು ಮುಗಿಯದ ' ಪ್ರೀತಿ. ನನಗೆ ನಿಮ್ಮ ಪ್ರೀತಿಯ ಅಗತ್ಯವೂ ಉಂಟು. ನೀವು ನನ್ನನ್ನು
ಪ್ರೀತಿಸುವಿರಾ! ನನಗೆ, ಮಾನವ, ಮಾನವತ್ವದ ಪ್ರೀತಿಯ ದಾಹ ಅಧಿಕವಾಗಿತ್ತು. ಶತ ಶತಮಾನದ ಬಾಯಾರಿಕೆ, ನನ್ನ
ಆತ್ಮೀಯತೆಯನ್ನು ' ಕೊಳ್ಳುವವರಿಲ್ಲದೆ ಬರಿದಾಗಿತ್ತು.
ನನ್ನ ಚಿಗುರು ಮೂಸೆಯ ಬಣ್ಣಗಳು ನನ್ನ ಭಾವನೆಯಂತೆ, ಆತ್ಮೀಯತೆಯಂತೆ ಉದ್ರಿಕ್ತವಾಗಿತ್ತು. ಹಳದಿ, ನೀಲಿ, ಕೇಸರಿ, ನನ್ನ
ಕ್ಕಾನುವಾಸಿನಲ್ಲಿ ಭಯಂಕರ ಉರಿವ ಜ್ಜಾಲೆಯನ್ನು ಬಿಡಿಸಿತ್ತು. ನಿಮಗದು ಹಿಡಿಸಿತಾ ಇಲ್ಲ ನಿಮಗದು ಹಿಡಿಸಲಿಲ್ಲ. ನಯವಾಗಿ,
ನವಿರಾಗಿ, ಹಸಿರಾಗಿ, ಬರೆವ ಹವ್ಕಾಸ ನನ್ನ ಕುಂಚಕ್ಕೆ ಇಲ್ಲ. ಕುಂಚ ತುಂಬಾ ಬಣ್ಣಗಳು, ಬಗಡಿ ನಿಂತ ನನ್ನ ಕ್ಯಾನುವಾಸುಗಳು,
ಭೋರ್ಗರೆವ ನೀರಿನ ಅಪ್ಪಟ ಲಹರಿಯಂತೆ ರಭಸದಿಂದ ಬೀಳುವುದು ನನ್ನ ಚಿತ್ರಗಳಲ್ಲಿ. ಹೃದಯದಲ್ಲಿ ಮಿಂದ ಬಣ್ಣಗಳು ಹೊರಗೆ ಬಂದು ಕಾದು, ಕಾಡು ರಮ್ಕವಾಗಿ ಆತ್ಮೀಯತೆಯ ನಿನಾದವನ್ನು. ಸೂಸುವ ಭಾವದಂತೆ ಮುಗಿಲ ಮೇಲೆಲ್ಲ ತುಂಬಿತ್ತು ನನ್ನ ಪ್ರೀತಿಯಂತೆ!
ನನ್ನ ಕಲೆಯಲ್ಲಿ ನಾನು ತನ್ನತನ, ಆತ್ಮೀಯ ಉನ್ಮಾದವನ್ನು ಹಿಡಿದಿದ್ದೆ. ರಮ ರಮಿಸುವ ಬಣ್ಣದಲ್ಲಿ ಜಿಗಿದು ನಿಂತಿಹ ನನ್ನ ಅಂತರಾತ್ಮದ ಪ್ರತಿಬಿಂಬವಿತ್ತು ಕನ್ನಡಿಯಂತೆ. ಕಲಾವಿದನನ್ನು "ಹುಚ್ಚನಂತೆ'' ಅನ್ನುವುದು. ಈ ಸಮಾಜ, ಅಹುದು ಕಲಾವಿದನು ನನ್ನಂತೆ ಹುಚ್ಚ! ಜಗತ್ತನ್ನು ತನ್ನ ಭಾವನೆಯ. ತಾಕಲಾಟದಲ್ಲಿ ಬೆರಸಿ, ಯಥಾರ್ಥವನ್ನು ಸಿಂಗರಿಸಲು ಹೊರಟ
ಹುಚ್ಚನವ ! ಜೀವನಕ್ಕೆ ನಿಸರ್ಗಕ್ಕೆ ಪ್ರೀತಿಗೆ, "ಹುಚ್ಚು'' ಎಂಬ ಪಡದ ಅರ್ಥವನ್ನು, ಬಣ್ಣದೊಡನೆ ಮಿಶ್ರಿಸದೆ ಚಿತ್ರಿಸಲು ಸಾಧ್ಯವೇ? ಯಾಂತ್ರಿಕತೆಯ ಈ ಬದುಕಿನಲ್ಲಿ, ಜೀವನದ ಹೊಂದಾಣಿಕೆಯ ಈ ತರ್ಕ ವಿತರ್ಕದಲ್ಲಿ, ಖರ್ಚಿನ ಈ ಖರ್ಚಾಟದಲ್ಲಿ , ಬದುಕಿನ ಈ ರೈಲುಗಾಡಿಯಲ್ಲಿ ಸಾಗುವ ಜನಕ್ಕೆ ಮಾನವತ್ವದ ಹರಿವ ಪ್ರೀತಿಯ, ಆತ್ಮೀಯತೆಯ ಅರ್ಥವಾಗಬಹುದೇ - ನನ್ನ ಭಾವನೆಗಾಗಲಿ, ನನ್ನ ಚಿತ್ರಗಳಿಗಾಗಲಿ ಅವರಲ್ಲಿ ಆದರವಿಲ್ಲದಿರುವಾಗ್ಕೆ ನನ್ನ ಬಗ್ಗೆ ಅವರಲ್ಲಿ ಎಷ್ಟು ವಿಶ್ವಾಸ ಇರಬಹುದು.
ನಾನು: ಕಲಾವಿದನೆಂಬ ಆಪ್ತರಿಲ್ಲದ, ಬಂಧುಗಳಿಲ್ಲದ, ಏಕಾಕಿ ಜೀವಿ. ಆದರೆ ನನಗೆ ಚಿಂತೆ ಇಲ್ಲ. ಬೇಸರವಿಲ್ಲ. ನನ್ನನ್ನು ನನ್ನವರೇ ಆರಿಯಲಿಲ್ಲವೆಂದು. ಆದರೆ ನನಗೆ ಸಂತಸವಿತ್ತು ನನ್ನ ಸಂಸಾರ ನನ್ನ ತಿಳಿಯಿತೆಂದು.
ನನ್ನ ಕಲೆಯು ಬದುಕಬಲ್ಲದು. ಕಾಲಧರ್ಮದ, ಸಮಯದ, ಆಭಾಸದೊಡನೆ, ಗೋಡೆಯಲ್ಲಿ ತೂಗು ಹಾಕಿರುವ ಆನನ್ನ ಚಿತ್ರ,
ನನ್ನ ಅಂತರಾತ್ಮದ ಗಾಢ ವರ್ಣದಲ್ಲಿ ಎಂದಾದರೂ ನನ್ನ ಜಾವನೆಯನ್ನು ಯಾರಾದರೂಬ್ಬ ಬಂದು ತನ್ನಿಂದ ತಾನೆ
ಮಾತಾಡಿಸಬಲ್ಲನು. ನಾಳೆ ನನ್ನ ಚಿತ್ರಗಳು ಲಕ್ಷಾಂತರ ರೂಪಾಯಿಗೆ ಮಾರಿಹೋಗಬಹುದು. ಯಾರೋ, ಎಲ್ಲೋ ಕಲಾಶಾಲೆಯಲ್ಲಿ ನನ್ನ ಬಗ್ಗೆ ಎರಡಕ್ಸರ ಬರೆಯಬಹುದು. ಯಾರಾದರೊಬ್ಬ ನನಗಾಗಿ ಆತ್ಮೀಯ ಮಾತನ್ನೂ ಹೇಳಬಹುದು, ನನ್ನ ಬಣ್ಣದೊಡನೆ. ಅದೆಷ್ಟೋ ಬಾರಿ ನನಗೆ ಸಾವು ಕಾಡಿತ್ತು. ಬದುಕಿನ ಈ ತಿರುವಿನಲ್ಲಿ, ಆ ತಿರುವಿನಲ್ಲಿ, ನನ್ನ ಹಣಕಿ, ಹವಣಿಸುವಂತಿತ್ತು. ನನ್ನವಳ ಪ್ರೀತಿಯು ನನ್ನ ಉಳಿಸಿತ್ತು. ಆದರೆ ಈಗ ಅದರಲ್ಲೂ ಪಾಲುದಾರರು(ಮಕ್ಕಳು) ಇರುವರಾ ಅಂತಹೆದರಿಕೆಯಾಗುವುದು. ಮನಸ್ಸು ಪೂರ್ತಿಯಾಗಿ. ಕಲೆಯೊಡನೆ ಮಿಶ್ರಪಾಗಿತ್ತು. ನೀರನ್ನು ಬೊಗಸೆಯಲ್ಲಿ ಹಿಡಿವ ಮುಂಚೆಯೇ ತೂತು ಬಿದ್ದಿಹ ಮಡಕೆಯಂತೆ ಸೋರಿ ಹೋಗಿತ್ತು. ಆಯಾಸವಾಗಿತ್ತು ದೇಹಕ್ಕೆ. ಆದರೆ ಆತ್ಮಕ್ಕೆ ಸಂತಸವನ್ನು ಕೊಡುವ ಈ ಕಲೆಯನ್ನು ನಾನಿರುವ ತನಕ ಜೀವಂತ ಇಡುವ ಧೃಡತೆಯನ್ನು ನಾನು ಅದೆಂದೋ ಮಾಡಿದ್ದೆ. ಕಲೆಯ ಚೌಕಟ್ಟಿನಲ್ಲಿ ನಾನು ನನ್ನ ತನ್ನವನ್ನು ಕಂಡಿದ್ದೆ. ಭಾಗ್ಯದ ಬಾಗಿಲು ತೆರೆಯಿತೆಂದು ಕಾಣುವುದು. ನನಗೆ ತಂತ್ರ, ತಂತ್ರಜ್ಞಾನವು ಇಷ್ಟ. ಕೇಳಲು ತಂತ್ರಜ್ಞಾನವು-ಮಧುರವಾಗಿರುತ್ತದೆ. ಆದರೆ ತಂತ್ರವನ್ನು ಅರಿತವರೆಷ್ಟು ಮಂದಿ? ಜಗತ್ತಿನಲ್ಲಿರುವ ಪ್ರತಿಯೋರ್ವ ವ್ಯಕ್ತಿಗೆ ಸಹಯೋಗದ ಅಗತ್ಯವಿದ್ದಂತೆ !ಆದರೆ ಜಗತ್ತು ಸಹಯೋಗವನ್ನು ಯಾರಿಗೂ ಕೊಡುವುದಿಲ್ಲ. ನಾನು ಇದೆಲ್ಲವನ್ನು ನನ್ನ ಬಾಳಿನಲ್ಲಿ ಅನುಭವಿಸಿದ್ದೆನು. ನಾನು ಮನಸ್ಸಿನಲ್ಲಿ ಹಳದಿ, ಬಿಳಿ, ನೀಲಿ ಬಣ್ಣಗಳ ಮಿಶ್ರಣವನನ್ನು ಕಂಡಿದ್ದೆನು. ಅದನ್ನು ಪುನಃ ಪುನಃ ನಿರ್ಮಿಸಿ ನನ್ನ ಕ್ಯಾನವಾಸಿನ ಮಟ್ಟಿಲಲ್ಲಿ ಹಾಕಿದ್ದೆ. ಪ್ರತಿಯೋರ್ವ ವ್ಯಕ್ತಿಯ ಜೀವನದಲ್ಲಿ ಇಂತಹ ಮೆಟ್ಟಿಲುಗಳಿರುತ್ತವೆ. ಕೆಲವೊಮ್ಮೆ ಮೇಲೆ, ಕೆಲವೊಮ್ಮೆ ಕೆಳಗೆ ಬೀಳುವ ಮಾನವನ ರಭಸವನ್ನು ತಡೆವ ಮೆಟ್ಟಿಲುಗಳು! ಅದ್ಭುತ ವಿಲಕ್ಷಣ ಮೆಟ್ಟಿಲುಗಳು.
ನನಗೆ ನೋವು ನನ್ನ ಆದರ್ಶವಾಗಿರಲಿಲ್ಲ. ಬೇರೆಯವರ ಬೇನೆ, ಅವರ ದಿನನಿತ್ಯದ ಆಗುಹೋಗುವಿನ ಪರಿವಿಡಿ ನನ್ನ ಆದರ್ಶವಾಗಿತ್ತು.. ಆದರೆ ನನಗನಿಸುತ್ತಿತ್ತು ನನ್ನಂತಹ ಕಲಾವಿದ ಅವರಿಗಾಗಿ, ಏನು ಮಾಡಬಹುದು? ನನಗೆ ಬದುಕಬೇಕೆಂಬ
ಆಶೆಯಿತ್ತು. ಆದರೆ ಬದುಕು ನನ್ನ ಆಶೆಯನ್ನು ಪುಡಿ ಪುಡಿ ಮಾಡಿತ್ತು. ನಾನು ಬದುಕಿಗಾಗಿ ಹೋರಾಡಿದ್ದೆ ಬಹಳಷ್ಟು. ಶ್ರೀಮಂತರ ಕ್ರೂರ ನೋಟಗಳಿಗೆ ರಾಣಿಯಾ ಗುಂಡುಹಿಡಿಯದೆಯೇ ಹೋರಾಡಿದ್ದೆ. ಬರೀ ಕುಂಚ ಬಣ್ಣವನ್ನು ಹಿಡಿದು ಏಕಾಂಗಿಯಾಗಿ ಹೋರಾಡಿದ್ದೆ. ಅಹುದು ಬರಿಯ 10 ರೂಪಾಯಿಗಾಗಿ ನನ್ನ ಅಮ್ಮ 25 ಜಮಖಾನೆ, 15 ಚಾಪೆ, ಎರಡು .ಎತ್ತು, 15 ಲಂಗ 15 ರವಕೆಯ ಒಗೆದು ಒಣಗಿಸಿ ಮಡಚಿ ಇಟ್ಟ ನಂತರ ಕಾದು ನಿಂತಿಹ ನನ್ನವರ ಮನೆಯಲ್ಲೇ ಆ ನೋಟವನ್ನು ನನ್ನ ಕ್ಕಾನವಾಸಿನಲ್ಲಿ ಹಾಕಿ ನಾನು ಶ್ರೀಮಂತರಲ್ಲಿ ಈ ಬಡತನದ ಸಿರಿವಂತಿಕೆಯ ಆಡಂಬರಕ್ಕಾಗಿ ಹೋರಾಟ ನಡೆಸಿದ್ದೆ. ತಂದೆಯವರು ಸಂಸಾರದಿಂದ ಬೇಸತ್ತ ನಂತರ ಯಾರು ನಮ್ಮನ್ನು ಕರೆದು ಕೇಳಲಿಲ್ಲ. ಇರಲು, ನಮಗೆ ಎಲ್ಲಾ ಬಂಧುಗಳೂ
ಇದ್ದರೂ ನಾವು ನಿರ್ಗಶಿಕರಾದವು. ಮಾನವನು ಇನ್ನೆಷ್ಟು ಹೋರಾಡಬಹುದು, ನಮ್ಮನ್ನು ಯಾರು ಕರೆಯಲಿಲ್ಲ. ಯಾರು
ನನ್ನ ತಾಯ ಕಂಬನಿಯನ್ನು ಒರಸಲಿಲ್ಲ. ನಾವು ಒಂದು ಹೊತ್ತಿನ ಊಟಕ್ಕಾಗಿ ಬೇರೆಯವರ ಬಾಗಿಲನ್ನು ಕಾಯಬೇಕಾಯಿತು.
ಅಹದು ಹುಟ್ಟಿದ್ದು ಶ್ರೀಮಂತ ಬಂಟ ಸಮಾಜದಲ್ಲಿ. ಆದರೆ ನಿರ್ಗತಿಕರಾಗಿ, ನನ್ನ ತಾಯಿ ಬೇರೆಯವರಲ್ಲಿ ಕೆಲಸ ಮಾಡಿ, ಬಂದು
ಬಡಿಸಿದ ಗಂಜಿಯು ನಮಗೆ ಮೃಷ್ಠಾನ್ನವಾಯಿತು. ಯಾರಲ್ಲಿ ಹೊರಡಲು ಸಾಧ್ಯವಿತ್ತು? ಈ ಜಗತ್ತೆಷ್ಟು ಕ್ರೂರವಿದೆ. ದೇವರೆಲ್ಲೋ ಕೆಟ್ಟ ಮೂಡಿನಲ್ಲಿ ನಮ್ಮನ್ನು ಅವಸರವಾಗಿ ಸೃಷ್ಟಿ ಮಾಡಿ ಬಿಸಾಡಿದಂತಿದೆ ! ಆದರೆ ನನಗೆ ದೇವರಲ್ಲಿ ಬೇಸರವಿಲ್ಲ.ಆಗೈೆ ದಿನದಿನಕ್ಕೆ ಬದುಕಿನಲ್ಲಿ ಉಳಿಯಬೇಕೆಂಬ ಉತ್ಸಾಹ ಕಡಿಮೆಯಾಯಿತು. ಮನ, ನಡುಗಹತ್ತಿತು. ರಾತ್ರಿಯೆಲ್ಲಾ ನಿದ್ರೆಯಿಲ್ಲದೆ ನರಗಳು ಸಟೆದು ನಿಂತವು. ಬೆಳಕು ಹರಿಯುವುದು ನನಗೆ ಬೇಡವಾಗಿತ್ತು. ಬನಿಯನಿಗೆ, ಹಾಲಿನವನಿಗೆ, ಬ್ರೆಡ್ಡಿನವನಿಗೆ.....
ಯಾರ್ಯಾರಿಗೆ ಸಾಲ ಕೊಡಲಿತ್ತೋ ಅವರೆಲ್ಲಾ ಒಮ್ಮೆಗೆ ಬಂದು ನನ್ನನ್ನು ಹಿಚುಕಿದ್ದ ಅನುಭವ! ಬದುಕಿನಲ್ಲಿ. ಬಹಳ ತಡವಾಗಿ ಕುಂಚ ಹಿಡಿದಿದ್ದೆ. ಕುಂಚದ ಒಂದು ತುದಿಯಲ್ಲಿ ಬಣ್ಣವಿದ್ದರೇ ಇನ್ನೊಂದು ತುದಿಯಲ್ಲಿ ನನ್ನ ಬದುಕಿತ್ತು..... ''ಬಣ್ಣಗಳಿಲ್ಲದ ಬದುಕು''.
ಹಲವಾರು ಸಲ ನನಗನಿಸುವುದು ನಾನು ಯಾರನ್ನು ಪ್ರೀತಿಸುತ್ತೇನೆ. ನನ್ನ ಮಡದಿ ಮಕ್ಕಳನ್ನೊ, ನನ್ನ ಕಲೆಯನ್ನೋ? ಹೊಟ್ಟೆಯ ಮೂಲಭೂತ ಬೇಡಿಕೆಯ ಎದುರು ಮತ್ತೆಲ್ಲವೂ ಗೌಣವೆಂಬುದನ್ನು ನಾನು ಅರಿತಿದ್ದೆ. ಬದುಕಿನ ಅನಿವಾರ್ಯಗಳಿಗೆ ಆಯ್ಕೆ ಇಲ್ಲದ ಆಕಸ್ಮಿಕಗಳಿಗೆ ಪ್ರೀತಿಯ ಬಣ್ಣಬಳಿದೆ. ಆದರೆ ಎಲ್ಲವೂ ಏನೋ ಆಕಸ್ಮಿಕವಾಗಿತ್ತು....ನನಗೆ. ಮುಂಬಯಿಯ ನಗರ ಬಂಟರು ದೊಡ್ಡ ಕಾರೋಬಾರು ನಡೆಸುತಿದ್ದ ಜಾಗೆಯಾಗಿತ್ತು ಕಾಲಕಾಲಕ್ಕೆ ಕಾರೋಬಾರು ದೊಡ್ಡದಾಯಿತು ವಿನಃ ಕಡಿಮೆಯಾಗಿಲ್ಲ. ಅದರಿಂದಾಗಿ ಇಲ್ಲಿ ಹಲವಾರು ಶ್ರೀಮಂತರ ಮರಣವು ಎಣಿಕೆ ಇಲ್ಲದೆ ಬೇಗನೇ ಸಣ್ಣ ಪ್ರಾಯದಲ್ಲೇ ಆಯಿತೆಂದು. ಹೇಳಬಹುದು. ಈಗ ಹಲವಾರು ಜನರಲ್ಲಿ ನನ್ನ ಬಗ್ಗೆ ಕುತೂಹಲವಿರಬಹುದು. ಹಲವರಿಗೆ ಅದೂ ಹೊಟೇಲುಗಳಲ್ಲಿ ಕೆಲಸಮಾಡಿ ದಿನನಿತ್ಕ ಪೇಪರ್ ಓದುವ ಕನ್ನಡ ಮಕ್ಕಳಿಗೆ ನನ್ನ ಹೆಸರು ಗೊತ್ತುಂಟು. ಅವರ ದೃಷ್ಟಿಯಲ್ಲಿ ನಾನೋರ್ವ ಏನೋ ಗೆರೆ ಬಿಡಿಸುವ ಕಲಾವಿದ. ಪ್ರತಿಷ್ಠಿತ ಬಂಟ ಸಮಾಜದ ಕಲಾವಿದನಾಗಿರಬಹುದು. ಈ ಪೊಳ್ಳು ಹೆಸರು ಏತಕ್ಕೆ ಬೇಕು. ನನಗೆಂದೂ ಈ ಮನೆತನ, ಈ ಅಂತಸ್ತು ನನ್ನದೆನಿಸಲಿಲ್ಲ. ನಾನೆಂದೂ ಬಂಟ ಅಂತ ನನ್ನನ್ನು ನಾನೇ
ಹೊಗಳಿಕೊಳ್ಳಲಿಲ್ಲ. ನಾನು ''ದೇವದಾಸ''. ಒಬ್ಬ ಸಾಮಾನ್ಕ ಮನುಷ್ಯ. ನನ್ನ ಚಿತ್ರಗಳಿಗೆ ಬರೀ ದೇವದಾಸ ಅಂತಲೇ ಬರೆಯುತಿದ್ದೆ. ನನ್ನಲ್ಲಿ ಗಾಡಿಯಿಲ್ಲ. ಇರಲು 4-8 ಕೋಣೆಯ ಪ್ಲಾಟೂ ಇಲ್ಲವಲ್ಲ. ಆದರೂ ಮಗ್ದವಾದ ಪ್ರೀತಿಯ ಮನವೊಂದಿತ್ತು.
ನಾನು ಈ ನೆಲ ಈ ಜನರನ್ನು ಪ್ರೀತಿಸುತ್ತಿದ್ದೆ. ಈ ಜನ ಸಾಮಾನ್ಯರ ಪವಿತ್ರವಾದ ಪ್ರೀತಿಯು ನಾ ನಂಬಿದಷ್ಟು ಸರಳವಾಗಿರಲಿಲ್ಲ. ಇತರರನ್ನು ನಂಬಿಸಲು ಸಾಧ್ಯವಿಲ್ಲದ ಪ್ರೀತಿಯ ಯಾವುದಕ್ಕೂ ಪ್ರಯೋಜನವಿಲ್ಲವಲ್ಲಾ!ಕಲೆಯ ಈ ಪ್ರೀತಿಗಾಗಿ ಎಲ್ಲವನ್ನು ಥಾರೆಯೆರೆದೆ. ನುಣುಪು ಬಣ್ಣದಲ್ಲಿ. ಕುಂಚದ ಗುರುತನ್ನು ಮರೆಯಿಸುವ ಚತುರತೆಯಲ್ಲಿ ಚಲನೆ ಇಲ್ಲದ
ಸ್ತಬ್ದ ಚಿತ್ರಗಳಲ್ಲಿ. ಹಲವು ಸಲಸಾಂಪ್ರದಾಯಿಕ ಚಿತ್ರವನ್ನು ಬಿಡಿಸಿಯು ತಟ್ಟನೆ ಹೊಸಹುರುಪಿನ, 16, 17 ವಯಸ್ಸಿನ ಹುಡುಗನಂತೆ ನಡೆದೆ. ಚಿತ್ರ ಬಿಡಿಸಿದೆ. ನನಗೆ ನನ್ನವರಬಗ್ಗೆ, ಬಂಟ ಸಮಾಜದ ಬಗ್ಗೆ, ಗರ್ವ ಇದ್ದರೂ, ಕಲೆಯ ಹಾದಿಯಲ್ಲಿ,
ಅವರಿನ್ನೂ 300ವರುಷ ಹಿಂದೆ ಇದ್ದಂತೆ ಕಂಡರು. ಅವರ ಬಗ್ಗೆ ಕನಿಕರವೂ ಜೇಸರವೂ ಆಗುವುದು.
ವಸಂತ ಖತುವನ್ನು ಚಿತ್ರಿಸಲು ಹೊರಟು ನಿಂತ ನನ್ನ ನೋಡಿ, ನನ್ನ ಮಕ್ಕಳೂ ಗಕ್ಕನೆ ನಕ್ಕರು. ಅವರಿಗೊಂದು ಅಪ್ಪ ! ಚಿತ್ರಕಾರ ಅಂತ ಅರಿವು ಅದೆಂತು ಭಾಸವಾಗಿರಬೇಕು. ಇಲ್ಲಿ ಉಂಟಾಗಿರುವ ಕಲರವ ನನಗೊಂದು ಆಶೆಯನ್ನು
ತೋರಿಸಿತು. ಹೊಸತಾಗಿ ಚಿಗುರಿರುವ ಗಿಡದಲ್ಲಿ ಪಕ್ಕನೆ ಬೀಳುವ ಹಸಿರು ಎಲೆಯನ್ನು ನೋಡಿ ನಾನು ಕನಿಕರಗೊಂಡಿರಬಹುದು. ನನ್ನ ಚಿತ್ರದಲ್ಲಿ ನಾನುಸ್ತಿ, ಗಿಡಮರವನ್ನು ಪುನಃ ಪುನ ಚಿತ್ರಿಸಿದೆ. ಬದುಕಿನ ಈ ಎಲ್ಲಾ ಬಣ್ಣಗಳನ್ನು ತನ್ನ ನಡಿಲಲ್ಲಿ ತಕ್ಕಂಡು ಪ್ರಕೃತಿಯು ಮತ್ತೆ ನಿರ್ಮಿಸಲಿರುವ ಈ ನೂರಾರು ಬಣ್ಣವನ್ನೂ ಹೇಗೆ ಹಿಡಿಯುವುದು? ಮರ, ಗೆಲ್ಲು ಕೊಂಬೆ, ಪಕ್ಕಿ ನೀರು ಎಲ್ಲವನ್ನು ಕುಂಚದ ಬಡಿತದಿಂದ ಬಿಡಿಸ ಹೊರಟೆನಾನು. ತೃಪ್ತಿಯಾಗಲಿಲ್ಲ ನನಗೆ. ನನ್ನ ಮನದಲ್ಲಿದ್ದ ಪ್ರಕೃತಿಗೆ ರೂಪ ಇರಲಿಲ್ಲ. ತಟ್ಟನೆ ಇಡೀ ಟ್ಯೂಬನ್ನೂ ಕ್ಕಾನವಾಸಿನಲ್ಲಿ ಜಜ್ಜಿದೆ. ನಿಂತವು. ಆ ನನ್ನ ತಾಳೆಮರ ಭೂಮಿಗೆ
ಬಿಗಿದುಕೊಂಡು ಗಟ್ಟಿಯಾಗಿ, ಬಾನಿಗೆ ಮುಖವೊಡ್ಡಿ ನಿಂತವು. ಜೀವನದ ಈ ಆಶಾವಾದದಲ್ಲಿ ನನ್ನ ಕಲೆಯು ಅರಳಿತ್ತು ಅಂತ
ನಾನು ಭಾವಿಸುತ್ತಿದ್ದೆ. ಹಲವರಿಗೆ ಅರ್ಥವಾಗುವ ನನ್ನ ಚಿತ್ರಗಳು, ಕಲಿತ ಕುಂಚದ ಕಲೆಯಲ್ಲ. "ಬದುಕು ಬಿಡಿಸಿದ ನಿಜವಾದ ಚಿತ್ರ''ಗಳೆಂದು ಹೇಳಬಹುದು.
ಈ ನನ್ನ ಸಣ್ಣ ಕೋಣೆಯ ಮಂಕುಬಡಿದ ಗೋಡೆಯಲ್ಲಿ ಇನ್ನೂ ಬಣ್ಣಗಳು ಹೊರಬಿದ್ದವು. ನಾನು ನೋವಿನಾಚೆಯ ಸತ್ಮವನ್ನು
ಕಂಡವನಾಗಿದ್ದೆ. ನನಗನಿಸುತಿತ್ತು ನನ್ನ ಬದುಕಿಗೆ ಎಷ್ಟು ಬಣ್ಣವಿದ್ದಿರಬಹುದು. ಮಾನವನ ಭಾವನೆಗಳಿಗೆಲ್ಲಾ ಒಂದೇ ಒಂದು ಬಣ್ಣವ? ರಭಸದಿಂದ ಇದ್ದರೂ ನಯವಾದ ನನ್ನ ಕುಂಚಗಳು ಎಂದಾದರೂ ಹೊಸ, ಹುಸಿ, ಆಶೆಯಲ್ಲಿ, ಕೊಂಚ ತಣ್ಣಗಾಗಿತ್ತು. ತಿಳಿನೀರು, ಆಗಸದ ಮೋಡಗಳು, ನನ್ನ ಭಾವನೆಯ ಓಟದಲ್ಲಿ, ಗಾಳಿಯಲ್ಲಿ ಬಿಟ್ಟ ಪತಂಗದಂತೆ, ಹಾರುತ್ತಿದ್ದವು. ನನ್ನ ಗಿಡಗಳು ಬಾನಿಗೆ ಬಾಯ್ತೆರೆದು ನಿಂತವು. ಪ್ರಕೃತಿಯ ಸುಂದರ ಸೌಂದರ್ಯ, ಶಾಂತವಾದ ನೀರವತೆ, ನನ್ನ ಕುಂಚದ ಬಣ್ಣದಲ್ಲಿ ಮಿಶ್ರವಾಗಿ ಕದಡಿ ಬಗ್ಗಡವಾಯಿತು. ಹೊರಗೆ ನೋಡಿದ ಪ್ರಕೃತಿಯು ಏನೋ ಒಂದು ತರಹವಾಗಿ, ನನ್ನ ಕುಂಚದ
ಮಾತೇ ಇಲ್ಲಿ ಸತ್ಯವಾದಂತೆ ನನಗನಿಸ ಹತ್ತಿತ್ತು. ನಾನು ದೃಢವಾಗಿ ' ಕುಂಚವನ್ನು ನಂಬಿದವನಾಗಿದ್ದೆ.. ಕಾಲ ಮತ್ತು
ಸಮಯದೊಡನೆ ಬೇಡಿಕೆಯೂ ಬದಲಾಯಿತು. ಚಿತ್ರ ಜೀವನ, ಜೀವಿಸುವ ' ತವಕವೂ ಬದಲಾಯಿತು. ಹೊಟ್ಟೆ ತುಂಬುತ್ತಿತ್ತು. ಆದರೆ ಪುನಃ ಬರಿದಾದ ಹೊಟ್ಟೆ. ಈ ಜೀವನ...ಮಡದಿ ಮಕ್ಕಳು... ಕೇವಲ ಅನಿವಾರ್ಯದ ಪಾತ್ರಗಳಾಗಿದ್ದವು. ಅಂತ ನನಗನಿಸುವುದು. ಇವೆಲ್ಲಾ ಅರೆ ಕಣದ ಹಗಲುಗನಸಾಗಿರಬಹುದು. ಹಸಿವಿನ ಮೂದಲಭೂತದ ಬೇಡಿಕೆಯೆದುರು ಎಲ್ಲವೂ
ಅನಿವಾರ್ಯ ಶುಷ್ಕವಾಗಿ ನನಗೆ ಕಂಡವು. ಮೂರು ಕಾಸಿಗೂ ಮಾರಾಟವಾಗದ ನನ್ನ ಚಿತ್ರಗಳಿಗೆ ಹಣ ಸುರಿಯುವುದು ನನಗರ್ಥವಾಗಲೇ ಇಲ್ಲ. ಹಲವಾರು ವರುಷ! ನನಗೇಯೇ ನನ್ನ ಈ ವರ್ತನೆ ಸಹನೀಯವಾಗಲಿಲ್ಲ. ಈ ನೋವಿನಲ್ಲೂ ನನಗೊಂದು ಪ್ರೀತಿಯಿತ್ತು. ನನ್ನ ಪತ್ನಿ, ನನ್ನ ಮಕ್ಕಳ ಪ್ರೀತಿ ಬಾಯಿ ತೆರೆದು ಕೇಕೆ ಹಾಕಿನೆಗೆದುಕುಪ್ಸಳಿಸಿ ನನ್ನೆತ್ತ ಓಡಿಬರುವ
ಅ ವಿಲಕ್ಷಣ ಅಂತರಾತ್ಮದ ಪ್ರೀತಿ. ನನ್ನ ಮಕ್ಕಳ ಮುಗ್ದ ನಿಷ್ಕಲ್ಮಶ ಪ್ರೀತಿ!
ನನ್ನಂತಹ ವ್ಯಕ್ತಿ, ನನ್ನಂತೆ ಪ್ರೀತಿಗೆ ಹಂಬಲಿಸಿದ ಮತ್ತೊಂದು ಜೀವಕ್ಕೆ ಪ್ರೀತಿಯನ್ನು ಉಣಿಸುವುದೊಂದು ಪಾಪ. ನನಗೆಯೇ ಅರ್ಥವಾಗಲಿಲ್ಲ ಈ ಜಗತ್ತಿನ ಉತ್ಕಟದ ರೀತಿ.
ನನ್ನ ಚಿತ್ರಗಳಲ್ಲಿ ಜೀವನದ ಸಮಾನ ಅಂಶಗಳೇ ಇರಲಿಲ್ಲ ಎಂದು ಕಾಣುವುದು. ರೂಪದರ್ಶಿಯ ತೊಗಲಿನ ಬಣ್ಣವನ್ನು ನಾನು ಚಿತ್ರಿಸಲಿಲ್ಲ. ರೂಪದರ್ಶಿರ್ಯ ಅಂತರಾತ್ಮದ ಬೇನೆಯನ್ನು ನಾನು ಚಿತ್ರಿಸಿದೆ. ನನ್ನ ಚಿತ್ರದಲ್ಲಿ ನವಿರಾಟದ ಕೋಮಲತೆ ಇರಲಿಲ್ಲ. ಹಸಿರು, ಕೆಂಪು, ನೀಲಿ, ಇಂತಹ ರೋಮಾಂಚಕಾರಿ ಬಣ್ಣಗಳು ನನ್ನ ಕ್ಕಾನವಾಸಿನಲ್ಲಿ ಪಸರಿಸಿದ್ದವು. ಅದೇನೂ ಪಕ್ಕನೆ ಬೆಳಕು - ಬೆಳಕಿನತ್ತ ಚಿಮ್ಮುವ ಭಾಸ! ನನಗೆ ರೇಖೆಗಳಿಂದರೆ, ಅತಿಶಯವಾದ ಆನಂದ. ನಾನು ರೇಖಾ ಚಿತ್ರಗಳನ್ನು ಪುನಃ ಪುನಃ ಚಿತ್ರಿಸಿದೆ. ಅಹುದು, ನಾನು ಶ್ರೀಮಂತರ ಪಟ್ಟಣದ ಚಿತ್ರಕಾರನಲ್ಲ. ನಾನು ಹಳ್ಳಿಯ ಚಿತ್ರಕಾರ ಪ್ರಕೃತಿಗೆ, ದುಡಿದ ರೈತಾಪಿ ಜನರಿಗೆ, ಅವರ ದಿನನಿತ್ಯದ ಆಗು ಹೋಗುಗಳಿಗೆ ರೂಪ ಕೊಡುವ ಚಿತ್ರಕಾರ. ಎಲ್ಲೇ ಶಾಂತವಾಗಿ ಹಳ್ಳಿಯೊಂದರ ಮೂಲೆಯಲ್ಲಿ ಸದ್ದುಗದ್ದಲ ವಿಲ್ಲದೆ, ಜನಸಂದಣಿ, ಏರಿಳಿವ ಸಂತೆ, ಬೆಲೆಗಳಿಂದ ದೂರವಾಗಿ, ಕುಂಚದೂಡನ ಏಕಾಂತದಲ್ಲಿ, ಜಗದಲ್ಲಿ ನಾನೋರ್ವನೇ ಕಲಾವಿದನಂತೆ, ನನ್ನದೇ ಗತಿಯಲ್ಲಿ ನನ್ನದೇ ಮಂಪರದಲ್ಲಿ ಚಿತ್ರಿಸಬೇಕು. ಆದರೆ ವಿಧಿಯು
ಬಿಡಬೇಕಲ್ಲಾ !
ಕಪ್ಪು ಹಿನ್ನಲೆಯ ಕತ್ತಲೆಯ ಕೋಣೆಯಲ್ಲಿ ಬಿಳಿ ಕ್ಮಾನುವಾಸುಗಳಿಗೆ ಬೆಳಕಿನ ಸ್ಪರ್ಶ ಮೂಡಿತ್ತು. ದೂರದಲ್ಲೆ ಎಲ್ಲೋ ಹಿಮಕರಗಿ,
ನೀರು ಪುಳಕಿತವಾಗಿ ಹರಡಿತ್ತು. ಬಣ್ಣ ಬಣ್ಣದ ಹೂಗಳಿಂದ ನೆಲತುಂಬಿ ಬರಿಯೆತು. ಹೂವ ಸುಗಂಧವುನಭೋಮಂಡಲವನ್ನು ಪಸರಿಸಿತ್ತು. ಬೆಳಕು, ಬಣ್ಣಗಳು ನಿಧಾನವಾಗಿ ಎದೆತುಂಬಿತ್ತು. ತುಂಬಿ ಬಿರಿವ ಹಣ್ಣಿನ ಮರಗಳು, ಕೆಂಪು ಮಣ್ಣಿನ ಈ ಭೂಮಿ, ಮುಗಿಲಿಗೆ ಬಿರಿದೆದ್ದು ನಿಂತಿಹ ಆ ನನ್ನ ತಾಳೆಮರ, ಹಳದಿ ಹೂವಿನ ಆ ಮುಗ್ಧ ಹಾಸು, ನೀಲಿ ಹೂಗಳ ಸ್ಪಂದನದಿಂದ ತುಂಬಿದ
ಈ ಸಣ್ಣ ನೀರಿನ ತೊಳವೆ! ನೀಲ ಆಗಸ.... ಪ್ರಕೃತಿಯ ಮಡಿಲಲ್ಲಿ ಸುಂದರವಾಗಿ ಮಲಗಿದ್ದ ಆಸುಂದರ ಊರು, ನನ್ನ ಊರು ಇದೆಲ್ಲವನ್ನೂ. ನಾನು ಸೌಮ್ಯವಾಗಿ, ತುಂಬು ಹೃದಯದಿಂದ ಖುಷಿಯ ಬಣ್ಣದಲ್ಲಿ ಚಿಡಿಸಿದ್ದೆ. ನನ್ನ ಚಿತ್ರಗಳಿಗೆ ಎಷ್ಟೊಂದು ಬಣ್ಣಗಳು ಕಪು ಹಿನ್ನೆಲೆಯ ಮಂಕು ಬಡಿದ ಕ್ಕಾನುವಾಸುಗಳಿಗೆ ಪ್ರಕೃತಿಯ ಅಷ್ಟು ಸಂಭ್ರಮದ ಬಣ್ಣಗಳು. ಸುಮಾರು 1982ರಿಂದ ನನ್ನೊಳಗಿದ್ದ ಕಲಾವಿದ ಬದಲಾದ, ಆತನ ಅಂತಃಸತ್ವ ಬದಲಾಯಿತು. ನಾನು ಬಹಳ ಚಿತ್ರಗಳ ತಂತ್ರವನ್ನು ಬದಲಾಯಿಸಿದೆ. ಆದರೆ ಮೂಲತನವನ್ನು ಬಿಡಲಿಲ್ಲ. ಬರೆಯ ಮೂಲಗೆರೆ ಹಾಕಿ ಚಿತ್ರಗಳನ್ನು ಶುರುಮಾಡು ಹತ್ತಿದೆ. ನನ್ನ ಚಿತ್ರಗಳಿಗೆ ಲೆಕ್ಕಚಾರದ ಸರಹದ್ದುಗಳೂ, ಸೀಮೆಗಳೂ ಬೇಕಾಗಿರಲಿಲ್ಲ. ಬೇರೆ ಬೇರೆ ಬಣ್ಣವನ್ನು ಮಿಶ್ರಣ ಮಾಡಿ ಚಿತ್ರಿಸಿದೆ. ನನ್ನ ಕ್ಯಾನುವಾಸುಗಳು ನನ್ನ ಬಿರುಸಿನ ನಡಿಗೆಯಲ್ಲಿ ತುಡಿಯಿತು. ನನ್ನ ಕ್ಯಾನುವಾಸುಗಳು ಬಣ್ಣದಿಂದ ತುಂಬಿ ಹೋಯಿತು. ಉರಿವ ಕೆಂಪು ಉಂಡೆಯ, ಸೂರ್ಯನನ್ನು ಪುನಃವಾಗಿ ಕ್ಯಾನುವಾಸಿನಲ್ಲ ಹಾಕಿದ್ದು ಇಲ್ಲಿಯೇ. ಮುಗಿಲಿಗೆ ನಾಲಗೆಯನ್ನು ಬಾಚಿದ ನನ್ನ ತಾಳೆ ಮರಗಳನ್ನು ಇಲ್ಲೇ ಬಿಡಿಸಿದ್ದು. ನನ್ನ ಕುಂಚಗಳಿಗೆ ಅವಸರವಿತ್ತು. ಉನ್ಮಾದವಿತ್ತು. ನನಗೆ ನನ್ನ ಬಣ್ಣವನ್ನು ಕ್ಯಾನುವಾಸಿನಲ್ಲಿ ಅವಚಿಸುವ ಆತುರವಿತ್ತು. ನನ್ನ ಭಾವನೆಗಳು ಮುಗಿದು ಹೋಗುವ ಮುಂಚೆ ಹಿಡಿದಿರುವ ಅವಸರ! ಸೂರ್ಯನ ಪ್ರಖರ ಬಿಸಿಲಲ್ಲಿ. ಬೆರೆವನೆತ್ತಿಯಲ್ಲಿ ತೆರೆದು ನಿಂತು ಎಷ್ಟು ಚಿತ್ರವನ್ನು ಚಿಡಿಸಿರಲಿಲ್ಲ. ಸಾಯಂಕಾಲ ಸೂರ್ಯ ಅಸ್ತಮಿಸುವ ವರೆಗೂ ನಾನು ಚಿತ್ರ ಬಿಡಿಸಿ ಸುಸ್ತಾಗುತ್ತಿದ್ದೆ. ಆದರೆ ನನ್ನ ಅವಿಶ್ರಾಂತ ಜೀವಕ್ಕೆ ಆವಾಗ್ಯೆ ದಣಿವು ಇರಲಿಲ್ಲ. ಹಲವು ಸಲಮನಸ್ಸಿನ ಶಾಂತಿ ಪೂರ್ಣ ಕಳೆದು, ಹತಾಶೆಗೊಂಡು ಬಗ್ಗಡವಾದರೂ, ಹಲವು ಸಲ ತಟ್ಟನೆ ಭರವಸೆ ಆತ್ಮ ವಿಶ್ವಾಸ ನನ್ನಲ್ಲಿ. ಪುನಃ ಪುನಃ ಮೂಡಿಬರುತ್ತಿತ್ತು. ನನಗೆ ಗೆಲವು ಇದ್ದೇ ಇದೆ! ನನ್ನ ಚಿತ್ರಗಳ ದನಿ ಈ ಜನಕ್ಕೆ ಎಂದಾದರೂ ಎಲ್ಲೋ ಕೇಳಿಸಬಹುದು. ಆದರೆ ನಮ್ಮ ಗೆಲುವನ್ನ ಕಾಣಲು ನಾವು ಬದುಕುಳಿಯುತ್ತವೆಯಾ? ಇಲ್ಲವೊ? ಎಂಬ ಭೀತಿ ಹಲವಾರು ಸಲ ನನಗೆ ಆಗುತಿತ್ತು.
ಬದುಕಿನ ಬಗ್ಗೆ ಈಗ ನನಗೆ ಯಾವತ್ತೂ ಕೋಪವಿಲ್ಲ. ಇಲ್ಲಿ ನನಗೆ ಕಾದಿರುವುದು ಅಚ್ಚರಿ ಮಾತ್ರ! ಹುಚ್ಚರ ಬಗ್ಗೆ ನನಗಿದ್ದ ಭೀತಿಯೂ ತೊಲಗಿತು. ಕಾರಣ ಅವರೂ ಮಾನವರಲ್ಲಾ! ಮಾತಿಲ್ಲದೆ ಮಲಗುವ ನನ್ನ ಪ್ರವೃತ್ತಿಯು ಕ್ಯಾನುವಾಸಿನ ಮುಂದೆ ನಿಂತು ನಾನು ನನ್ನಲ್ಲೇ ಗಂಟೆ ಗಟ್ಟಲೆ ಮಾತಾಡುತಿದ್ದೆ, ಆದರದು ಬೇರೆಯವರಿಗೆ ಕೇಳಲಿಲ್ಲ. ಬೇರೆಯವರು ನನ್ನ ನೋಡಿ ನಗಬಹುದು -. ಅವರಲ್ಲಿ ನಾನು ಹೇಳಲಿಲ್ಲ. ನನಗೆ ಬೆಂಕಿಯಂತೆ ಉರಿವ ಸೂರ್ಯನನ್ನು ಕಂಡರೆ ತುಂಬಾ ಆನಂದ,
ಅಹುದು ಸೂರ್ಯ, ಕುದಿವ ಜ್ವಾಲೆಯಲ್ಲಿ ರಣಬಿಸಿಲ ಎರಕ ಹೊಡೆವ ಸೂರ್ಯ - ತನ್ನ ಬಣ್ಣಗಳ ಹೊಂಬೆಳಕನ್ನು ಪ್ರತಿಕಲಾವಿದನ ಮನದಲ್ಲಿ ಅರಳಿಸುವ ಸೂರ್ಯ, ಸೂರ್ಯನನ್ನು ಹುಡುಕಿನಾನುಎಲ್ಲಾ ಊರುಗಳನ್ನು ತಿರುಗಿದೆ! ಸೂರ್ಯನ ಪ್ರಖರವಾದ ಬೆಂಕಿಯ ಜ್ವಾಲೆಯಲ್ಲಿ ನನ್ನ ಜೀವನ ಇಡೀ ಸಾಗಿತ್ತು ಅಂತ ನನ್ನ ಅಭಾಸ! ಸೂರ್ಯನ ಅನಂತ ಪ್ರೀತಿಯನ್ನು
ನಾನು ಪಡೆದೆನೊ? ಇಲ್ಲವೋ ಗೊತ್ತಿಲ್ಲ - ಆದರೆ. ನನ್ನ ಕ್ಯಾನುವಾಸಿನ ಮೂಲೆಯಲ್ಲಿ ಎಲ್ಲೋ ಸದಾಕಾಲ ಸೂರ್ಯನಿರುವ ಅಂತ ನನಗನ್ನಿಸುತ್ತಿತ್ತು.
ನಾನು ನನ್ನ ಸೂರ್ಯನಲ್ಲಿ ಎಷ್ಟೊಂದು ಬಣ್ಣವನ್ನ ಹಾಕಿದ್ದೆ. ನೀಲ ಹಿನ್ನೆಲೆಯ ಮಂಕು ಬಡಿದ ಕ್ಕಾನುವಾಸಿನಲ್ಲಿ, ಪ್ರಕೃತಿಯ
ರಮ್ಮವಾದ, ಸಂಭ್ರಮದ ಒಬಣ್ಣಗಳು.... ಕೇಸರಿ...ತಿಳಿನೀಲಿ... ಅರಶಿನ.. ಹಳದಿ... ಹಸಿರು-ಕೆಂಪು,.ನೇರಳೆ, ಹೊರಗೆ ನೋಡಿದೆ ನಾನು. ಜಗತ್ತಿಗೆಲ್ಲಾ ಸುಂದರ, ಅತೀ ಸುಂದರ ಚಂದಿರ ತಿಳಿ ರಾತ್ರಿ. ಶಾಂತವಾಗಿ ತೂಗಾಡುವ ಗಾಳಿ ಮರಗಳು. ನನಗೆ ಕಂಡದ್ದೇ ಬೇರೆ - ಎನ್ನಾತ್ಮದಲ್ಲಿ”ಲೆ ಎಲೆಯೂ ಜ್ವಾಲೆಯಂತೆ ಉರುಳಾಡುತಿತ್ತು ಮುಗಿಲೆತ್ತರಕ್ಕೆ ಹಾರಿ, ಹಾರಿ
ಸುರುಳಿಯಾಗಿ ನಿಂತಿತು. ತಿಳಿ ನೀಲಿ ಆಗಸದಲ್ಲಿ ನನ್ನ ತಳಮಳದ ಪ್ರತಿಬಿಂಬ. ಕದಡಿ ಬಗ್ಗಡವಾದ ಪ್ರಕೃತಿಯ ಹೊನಲು, ನೆಲ ಮುಗಿಲು, ಎಲೆ, ಹೊಲ, ಹಸಿರು, ಎಲ್ಲವೂ ಭುಗಿಲೆದ್ದ ಪುನಃ ಅನುಭವ. ನನ್ನೆದೆಗೆ ಹಿಡಿದ ಕನ್ನಡಿ, ನನ್ನ ಕುಂಚಕ್ಕೀಗ ಬಣ್ಣಗಳ ದಾಹವಿಲ್ಲ. ಪ್ರತಿಯೊಂದು ಬಣ್ಣವನ್ನು ಹಿತದಲ್ಲಿ ಕಲಸಿ ಕ್ಯಾನುವಾಸಿನ ಮೇಲೆ ಪುನಃ ಹೊಸತಾಗಿ ಬಿಡಿಸಿದ ಚಿತ್ರಗಳಿಗೆ
ಹಾಕುತ್ತಿದ್ದೆ. ನನ್ನ ಆಶೆಯ ಎಲ್ಲಾ ಬಣ್ಣವನ್ನು ನಾನು ನಿರ್ಮಿಸಿದ್ದೆ. ನನ್ನ ಕುಂಚದ ಬಡಿತವು ಮೃದುವಾದವು. ನನ್ನ ಕ್ಯಾನುವಾಸಿನಲ್ಲಿ ನೆಲಮುಗಿಲು, ಮನೆ, ಮರ, ಇದರ ಮಿಲನದಲ್ಲಿ, ನನ್ನ ಭಾವನೆಯ ಆಟದಲ್ಲಿ, ಪ್ರಕೃತಿಯ ಚಲನೆಯಲ್ಲಿ, ಮೃದುವಾದ ನೀರುಮೋಡವಾಗಿ, ಗಿಡಮರಗಳು ವಸಂತ ಖುತುವಿನ ಗಾನವಾಗಿ, ಪಕ್ಷಿಗಳು ನಾಟ್ಕಮಯ ನರ್ತನ ಮಾಡುವಾಗ ನಾನು ಕಲಾವಿದನಾದಂತೆ ನನಗೆ ಭಾಸವಾಯಿತು. ನಾನು ನನ್ನ ಮಾನಸಿಕ ಬೇನೆಯಿಂದ ದೂರ ಬಂದು, ದೈಹಿಕ ಮಾರ್ಗಗಳ ಹುಡುಕಾಟ ಮಾಡಹತ್ತಿದೆ. ಹಲವಾರು ಚಿತ್ರಗಳು ನನ್ನ ಕುಂಚದ ಬಿರಸಿನಲ್ಲಿ ನನ್ನ ಒಳಗಣ್ಣ ಹೊರಹಾಕಿ
ನನ್ನ ಮನವನ್ನು ಹಗುರ ಮಾಡಲು ಹೊರಟವು. ನನ್ನ ತಾಳೆ ಮರಗಳು ನೋವಿನಿಂದ ಕಿವುಚಿ, ಕೂಗಿದಂತೆ,ಬಾಗಿದಂತೆ, ಬಾನಿಗೆ ತನ್ನಿಂದ ತಾನೇ ಬಾಯ್ತೆರೆದು. * ನಿಂತವು. ಇವು ಭ್ರಮೆಯಾಗಿರಬಹುದು. ಆದರೆ ನನಗನಿಸುವುದು ಇದು ಭ್ರಮೆಯಲ್ಲ ಅಂತ. ಇದು ನಿತ್ಯ ಆನಂದ, ಕಲಾವಿದನ ಅಂತರಾತ್ಮದಲ್ಲಿ ಹುದುಗಿದ್ದು, ಹೊರ ಬಂದ ಆನಂದ ! ನಿಷ್ಕಳಂಕ ನಿರ್ಮಲ ಆನಂದ! ನಿಮಗೆ ಕೊಡಲು ನನ್ನಲ್ಲಿ ಏನಿಲ್ಲವಲ್ಲಾ, ಬರೆಯ ಮಾನವತ್ವದ ಪ್ರೀತಿಯಿರುವುದು. ಮಳೆಯ ಆರ್ಭಟದಲ್ಲಿ ಭೋರ್ಗರೆಯುವ ತುಂಬು ಪ್ರೀತಿ, ಕೊಟ್ಟು, ಕೊಟ್ಟು ಮುಗಿಯದ ಪ್ರೀತಿ! ಯಾರಿಗಾಗಿ ಕೊಡಬೇಕು. ನನಗೂ ಪ್ರೀತಿಯ ಅಗತ್ಯವಿತ್ತು. ಮಾನವತ್ವದ ಪ್ರೀತಿ, ಅವರ ಎರಡು ಮೃದು ಮಾತುಗಳು, ನನ್ನ ಕಲೆಯ ಬಗ್ಗೆ ಅವರಿದ್ದ ಅರಿವು. ಈ ಪ್ರೀತಿಯು ಶತಮಾನದ ಗಾಳಿಯೊಡನೆ ಮಿಶ್ರಣಗೂೊಂಡು ಅದೃಶ್ಯವಾಯಿತು. ಪುನಃ ಒಂದು ದಿನ ಪ್ರೀತಿಯ ಕೊಡೆಯೊಂದು ನನ್ನಲ್ಲಿ ಉಳಿಯಿತು. ಕೊಂಡುಕೊಳ್ಳುವವರಿಲ್ಲದೆ!
ನನ್ನ ಬಣ್ಣಗಳು ನನ್ನ ಭಾವನೆಯಂತೆ ಬಹು ತೀವ್ರವಾಗಿತ್ತು. ಗಾಢವಾಗಿತ್ತು. ಹಳದಿ, ಕೆಂಪು, ನೀಲಿ, ಕೇಸರಿ, ಹಸಿರು.... ನನಗೆ ತಿಳಿಯದೆಯೇ ನನ್ನ ಆಗಸಕ್ಕೆ ಎಂದ ತಾಳೆಮರಗಳು - ನಿಮಗೆ ಹಿತವಾಯಿತೇ? ನಯವಾಗಿ ನವಿರಾಗಿ: ನಾನು ಏನನ್ನು ಬಿಡಿಸಲಿಲ್ಲ. ಅದನ್ನು ಬರೆಯುವ ಅಭ್ಯಾಸ ನನ್ನ ಕುಂಚಕ್ಕೆ ಇರಲಿಲ್ಲ. ಭೋರ್ಗರೆವ ನೀರಿನಂತೆ ನನ್ನ ಬಣ್ಣಗಳು ಆರ್ಭಟಿಸಹತ್ತಿತು. ಹೃದಯದ ಭಾವವನ್ನು ನಾನು ಬಿಡುಸಾಗಿ ಬಿಡಿಸಹತ್ತಿದ್ದೆ ನಾನು ನನ್ನ ಚಿತ್ರದಲ್ಲಿ, ನನ್ನ ಅಂತರಾತ್ಮದ ಉನ್ಮಾದವನ್ನು ಹಿಡಿದಿದ್ದೆ. ಸೂರ್ಯಪ್ರಕಾಶದ ಭಯಂಕರ ಜ್ವಾಲೆಯಂತೆ ಬಿಸಿ ಜಿಸಿ ಬಣ್ಣದಲ್ಲಿ ನನ್ನ ಅಂತರಂಗದ ಪ್ರತಿಬಿಂಬವಿತ್ತು, ಕನ್ನಡಿಯಲ್ಲಿ ನಿಂತುನಮ್ಮನ್ನು ನಾವೇ ನೋಡಿದಂತೆ. ಜಗತ್ತನ್ನು ನನ್ನ ಕಲ್ಪನೆಯ ಬಣ್ಣದಲ್ಲಿ ಚಿತ್ರಿಸಲು ಪ್ರಯತ್ನಿಸುವ ಹುಚ್ಚ ನಾನು. ದಿನ ದಿನದ ಯಾಂತ್ರಿಕ ಜೀವನದಲ್ಲಿ, ಕಲೆಯ ಹೊಂದಾಣಿಕೆಯ ಲೆಕ್ಕಾಚಾರ ನನಗೆ ಗೊತ್ತಿಲ್ಲ. ಆದರೆ ನಾನು ಚಿತ್ರಿಸುವುದು ಯಾರಿಗಾಗಿ? ಈ ಬದುಕಿನ ತಿರುಗುದಾರಿಯಲ್ಲಿ, ನಿಯಮಿತರಾಗಿ ತಿರುಗುವ ಜನಕ್ಕೆ ನನ್ನ ಚಿತ್ರಗಳು ಅರಿವಾಗಬಹುದೆ? ಚಿಗುರಿಲ್ಲದೆ ನನ್ನ ಹರಿವ ಚಿತ್ರವನ್ನು ಯಾರು ಪ್ರೀತಿಸುವರು? ನನ್ನ ಪ್ರೀತಿಗಾಗಲಿ, ಚಿತ್ರಗಳಿಗಾಗಲಿ ಅವರಲ್ಲಿ ಜಾಗವಿಲ್ಲ, ಆದರವಿಲ್ಲ. ನನಗೆ ಯಾರು ಆಪ್ತರಿಲ್ಲ, ಬಂಧುಗಳಿಲ್ಲ, ನಾನು ಇದಕ್ಕಾಗಿ ಚಿಂತಿಸುವುದಿಲ್ಲವಲ್ಹಾ !
ನನ್ನ ಕಲೆಯು ಬದುಕಬಲ್ಲುದು ಕಾಲಧರ್ಮಗಳ ರಕ್ಬಣೆಯೊಡೆನೆ, ಗೋಡೆಯಲ್ಲಿ ತೂಗುತ್ತಿರುವ ನನ್ನ ಚಿತ್ರಗಳು ಎಂದಾದರೂ
ನಿಮ್ಮಲ್ಲಿ ಮಾತಾಡಬಲ್ಲದು, ನೀವು ಮಾತಾಡಿದರೆ, ನಿಮ್ಮ ಶ್ರೀಮಂತಿಕೆಯ ಹೃದಯದೊಂದಿಗೆ-ಯಾ-ನಿಮ್ಮ ಆತ್ಮೀಯ
ಅಂತರಾತ್ಮದೊಡನೆ ! ಅಹುದು ನನ್ನ ಕಲೆಯು ನಿಮ್ಮಲ್ಲಿ ಪುನಃಪ್ರನಃ ಮಾತಾಡಬಲ್ಲದು. ಈಗ್ಕೆ ನನ್ನ ಕೋಣೆಯೆಲ್ಲಾ ಚಿತ್ರಗಳು. ಅದೆಷ್ಟೋ ವರ್ಷಗಳ ನಂತರ ಮುಂದಿನ ಊಟದ ಚಿಂತೆಯಿಲ್ಲದೆ ಚಿತ್ರಿಸುತಿದ್ದೆ. ನನ್ನ ಬಿಳಿಯ ಕ್ಯಾನುವಾಸುಗಳು ಬಣ್ಣ ಪಡೆದವು. ಪ್ರಖರವಾದ ಬೆಂಕಿಯನ್ನು : ಜಗಕ್ಕೆ ಚೆಲ್ಲುವ ಸೂರ್ಯನ ಬಣ್ಣ!, ಸಮಯದೂೊಡನೆ.. ಸೆಣಸಾಡಿ, ಕಾಲದೊಡನೆ ಹೊರಾಡಿ, ಹೊಸಉಡುಗಯನ್ನು ತೊಟ್ಟು ಬಿಂಕದಿಂದ ನಿಲ್ಲುವ ಪ್ರಕೃತಿಯ ಬಣ್ಣ. ಈ ಬಣ್ಣಗಳ ನಡುವೆ ಇಣಕಿದವಳು ನನ್ನವಳು
ಅವಳು! ಈಗ ಮನೆಯಲ್ಲಿ ,ಒಂದು ಬಗೆಯ ಎಲಕ್ಷಣ ಶಾಂತಿ! ನಾನು ನಿಧಾನವಾಗಿ, ಹಗುರವಾಗಿ ನನ್ನಲೆಲ್ಲ ನನ್ನ ಬಗ್ಗೆ
ಮಾತಾಡುವುದನ್ನು ಕಲಿತಿದ್ದೆ. ನನ್ನ ಹೃದಯ ನಾಳೆಯ ಜೀವನದ ಬಗ್ಗೆ ಲೆಕ್ಕ ಹಾಕಹತ್ತಿತು. ಜೀವನ! ಕೆಲವು ಸಲ ಅತ್ಮಂತ
ಪ್ರತಿಭಾವಂತವಾಗಿ, ನಯವಾಗಿ ನಮ್ರವಾಗಿ ವರ್ತಿಸಿದರೆ, ಹಲವು. ಸಲ ಒರಟಾಗಿ, ಗರ್ವಿಯಾಗಿ, ದುರಭಿಮಾನಿಯಾಗಿ
ವರ್ಶಿಸುತ್ತದ್ದೆ, ನನ್ನೊಳಗಿನ ಈ ಎರಡು ವ್ಯಕ್ತಿತ್ವ ನನಗರ್ಥವಾಗಲೇ ಇಲ್ಲ!
ನನಗೆ ನನ್ನ ಬೇನೆ ಆದರ್ಶವಾಗಿರಲಿಲ್ಲ. ಆ ಬೇನೆ ನನ್ನ ಆಯ್ಕೆಯೂ ಆಗಿರಲಿಲ್ಲ. ನಾನು ಬದುಕ ಬೇಕು. ಕಾಲಧ'ರ್ಮುದ ಈ
ಪರಿವಿಡಿಯೊಡನೆ ಆದರೆ ಬದುಕು - ನನ್ನನ್ನು ಆಲಂಗಿಸಲಿಲ್ಲ. ನಾನು ಬದುಕನ್ನು ಆಲಂಗಿಸುವ ಪ್ರಯತ್ನ ಮಾತ್ರ ಮಾಡಿದ್ದೆ !ನನ್ನ ಬಗ್ಗೆ ಹಲವಾರು ಜನ ಹಲವು ಬಗೆ ಬರೆದರು. ಆದರೆ ನನ್ನ ಅಂತರಾತ್ಮದ ಬೇನೆಯನನ್ನಿ ಯಾರೂ ಬರೆಯಲಿಲ್ಲ. ಕಲಾವಿದ ಏತಕ್ಕಾಗಿ ಜೀವಿಸುವ, ಚಿತ್ರಿಸುವ ಆಂತ ನನ್ನನ್ನು ಯಾರೂ ಕೇಠಲಿಲ್ಲ. ಜೀವನವು ಹೀಗೆಯೇ ಸಾಗುತ್ತದೆ ನಾನು ನನ್ನಲ್ಲಿ ಏನುಂಟೋ ಎಲ್ಲವನ್ನು ಕಲೆಗಾಗಿ ಕೊಟ್ಟಿದ್ದೆ. ಅದರಿಂದ ಪಡೆದದ್ದು ಏನೂ ಇರಲಿಲ್ಲ. ಬರೆಯ ವಿಶ್ವಾಸ ಪ್ರೀತಿಗಾಗಿ, ಇಂದಿನ
ತನಕ ಹಂಬಲಿಸಿದೆ. ಆದರೆ ಸಿಕ್ಕಿತ್ತೋ ಇಲ್ಲವೋ ಗೊತ್ತಿಲ್ಲ. ಈ ಏರು ಪೇರಿನ ಸಂಬಂಧಗಳು ನನಗರ್ಥವಾಗಲೇ ಇಲ್ಲ. ನೋವು ನನ್ನನ್ನು ಬಿಡಲೇ ಇಲ್ಲ. ಯಾರೂ ಸಂತೈಸಲಿಲ್ಲ. ಕಣ್ಣೀರ ಓರಸಲಿಲ್ಲ. ಎಲ್ಲರೂ ಶುಷ್ಕವಾಗಿ ನಕ್ಕರು. ನಾನು ನೋವಿನಲ್ಲೂ ಆನಂದ ಪಡುವ ಹವ್ಯಾಸವನ್ನು ಮಾಡಿದ್ದೆ. ಒಂದು ನೋವಿನಿಂದ ಮತ್ತೊಂದು ನೋವಿನತ್ತ, ಅಂಬೆಗಾಲಿಡುವ ಮಗುವಿನಂತೆ ಹೆಜ್ಜೆ ಇಡುತ್ತಾ ನಡೆದೆ. ನೋವು ಮುಗಿಯಲಿಲ್ಲ, ಮುಚ್ಚಲಿಲ್ಲ, ಬರೀ ಬದಲಾಯಿತು.
ನೀವು ನನ್ನನ್ನು ನೋಡಿರುವಿರಾ - ಎಲ್ಲಿ? ಕೆಂಪು, ಹಸಿರು, ನೀಲಿ ಬಣ್ಣದಲ್ಲಿ. ಆಗಸಕ್ಕೆ ಆತುನಿಂತ ನನ್ನ ಚಿತ್ರಗಳಲ್ಲಿ, ಬಿರಿದ
ರಾಜಸ್ಥಾನದ ಹೊಯಿಗೆ ರಾಶಿಯಲ್ಲಿ ಕನ್ನಡದ ಹೊಲ, ಬಯಲಲ್ಲಿ. ಊರ ಅಪ್ಪಟವಾದ ಸುಂದರ, ಓಣಿಗಳಲ್ಲಿ, ರಾತ್ರಿ ಆಗಸದ
ಮುಬ್ಬುಕವಿವ ಚಂದ್ರನಲ್ಲಿ-ಯಾ-ಬಣ್ಣಕ್ಕೆ ಅದ್ದಿರುವ ನನ್ನ ನಯವಾದ ಕುಂಚದಲ್ಲಿ. ಈಗ ಬರೆಯ ಕ್ಕಾನವಾಸಿನಲ್ಲಿ ನನ್ನ ಕುಂಚ ಬಿಡಿಸಿದ ಚಿತ್ರವಿಲ್ಲ. ಬರಿಯ ಅಂತರಾತ್ಮದ ನೋವಿನ ಚಿತ್ರವಿದೆ. ಬದುಕನ್ನು ಪ್ರತಿಬಿಂಬಿಸಬೇಕು. ಚಿತ್ರವನ್ನು ಬಿಡಿಸಬೇಕೆನ್ನುವ ಪ್ರಯಾಸವಿಲ್ಲ. ಬದುಕನ್ನೆ ಅವಚಿಕೊಂಡ ಬಿಕೋ ಎನ್ನುವ ಕ್ಯಾನುವಾಸು ಖಾಲಿಯಲ್ಲವದು. ಬದುಕನ್ನ ಮಡಿಲಲ್ಲಿ ಅವಚಿಕೊಂಡ ಕ್ಕಾನುವಾಸು. ಇನ್ನೂ ಜೀವಂತವಾಗಿಯಿದೆ.
ನಾ ಬದುಕಿ ಉಳಿಯಲು ಚಿತ್ರಬಿಡಿಸುವುದು ನನಗೆ ಹಿತವಾಗಿತ್ತು. ಅದಾ ಊಟ-ತಿಂಡಿ ನಿದ್ರೆಗಿಂತಲೂ ಅಗತ್ಯವಾಗಿತ್ತು. ನನಗೆ ಅರಾಮ ಇಲ್ಲದಿದ್ದರೂ ನಾನು ಚಿತ್ರಿಸುತ್ತಿದ್ದೆ. ನನ್ನ ಆರೋಗ್ಯ ಕೆಟ್ಟಿದ್ದರೂ ನಾ ಚಿತ್ರಿಸಬಲ್ಲೆನೆಂಬ ಆಗಾಧ ಭರವಸೆ ನನಗುಂಟು. ಈ ಭರವಸೆಯೇ ನನ್ನಲ್ಲಿ ಇರುವ ಸ್ಪೂರ್ತಿ. ನರಗಳ ದೌರ್ಬಲ್ಯ ಜನರನ್ನು ಸೂಕ್ಸ್ಮವಾಗಿರಿಸಬಹುದು. ಕಲೆ ಇರುವುದೇ ಈ ಸೂಕ್ಷ್ಮವಾದ ಸ್ಪಂದನದಲ್ಲಿ. ನನ್ನಲ್ಲಿ ನಿಮಗೆ ಕೊಡಲು ಪ್ರೀತಿ ಇತ್ತು. ಮಳೆಗಾಲದ ನೀರು ಭೊರ್ಗರೆವ ಆತುರದ ಪ್ರೀತಿ. ಕೊಟ್ಟಷ್ಟೂ ಪುನಃ ಪುನಃ ಕೊನರಿ ಅಕ್ಬಯ ಪಾತ್ರೆಯಾದ ಪ್ರೀತಿ. ನನಗೆ ನಿಮ್ಮ ಪ್ರೀತಿಯ ಅಗತ್ಯವೂ ಉಂಟು. ಅದು ಯುಗದ
ಬಾಯಾರಿಕೆಯಂತೆ ಹಾತೂರೆದಿತ್ತು. ನನ್ನ ಪ್ರೀತಿಯ ಕೊಡಗಳೆಲ್ಲಾ ನನ್ನಲ್ಲೆ ಉಳಿದವು ಕೊಂಡು ಕೊಳ್ಳುವವರಿಲ್ಲದೆ.
ನನ್ನ ಚಿತ್ರಗಳಲ್ಲಿ ನನ್ನ ಅಂತರಂಗದ ಉನ್ಮಾದವ ಹಿಡಿದಿದ್ದೆ... ಬಿಸಿ ಬಿಸಿ ಬಣ್ಣದಲ್ಲಿ. ನನ್ನ ಅಂತರಂಗದ ಪ್ರತಿಯಾಟದ
ಪ್ರತಿಬಿಂಬವಿತ್ತು. ನಾನು ಜಗತ್ತನ್ನು ನನ್ನ ಕಲ್ಪನೆಯ ಬಣ್ಣದಲ್ಲಿ ಚಿತ್ರಿಸಲು ಪ್ರಯತ್ನ ಮಾಡುತ್ತಲಿದ್ದೆ. ನಿಸರ್ಗಕ್ಕೆ ಎಂದಾದರೂ ಯಾವ ಕಲಾವಿದನೂ ಬಣ್ಣ ಹಚ್ಚಬಹುದೇ? ಸಂಯೋಜಿತ ಬದುಕಿನ ಹಾದಿಯಲ್ಲಿ ನಡೆವ, ಸತ್ಯ ಜನಕ್ಕೆ ನನ್ನ ಚಿತ್ರ ಅರ್ಥವಾಗಬಹುದೇ? ಎಗ್ಗಿಲ್ಲದೆ, ಮಗ್ಗಿಲ್ಲದೆ ಹರಿವ ನನ್ನ ಚಿತ್ರಗಳು ನನ್ನ ಪ್ರೀತಿಗಾಗಲಿ, ಚಿತ್ರಗಳಿಗಾಗಲಿ ಅವರಲ್ಲಿ ಸ್ಥಳವಿಲ್ಲ. ಆದರವಿಲ್ಲ, ಜಾಗವಿಲ್ಲ ! ಎಂತಹ ಉತ್ಕಟವಾದ ಕಲೆಯಪ್ಪಾ ಇದು? ಇದು ಕಲಾವಿದನಾದವನ ಕಲೆ!
ನೀವು ನನಗಾಗಿ ಕಂಬನಿ ಹಾಕುವಿರಾ! ನಾ ಸತ್ತಮೇಲೆ !ಏತಕ್ಕಾಗಿ? ನಾನು ಸಾಯುವುದಿಲ್ಲ. ಕಾಲಧರ್ಮದ ಈ ಹೋರಾಟದಲ್ಲಿ ನಾನು ಹೇಗೆ ಸಾಯುವುದು. ಎಲ್ಲೋ ಯಾರದೋ ಮನೆಯಲ್ಲಿಯೋ ಯಾರದೋ ಆಫೀಸಿನಲ್ಲೋ
ಯಾರದೋ ಹೃದಯದಲ್ಲೋ ಆನನ್ನ ಚಿತ್ರಗಳು ತೂಗಿಕೊಂಡಿರಬಹುದು. ಯಾರೋ ಹೇಳಿದರು. ಇದು ಕಲಾವಿದ 'ದೇವದಾಸ' ಚಿತ್ರವಂತೆ! ಕನ್ನಡದ ಕಲಾವಿದರಂತೆ, ಅಂತೆ, ಕಂತೆಗಳ ಆ ಸಾವ್ರ್ರಾಜ್ಯದಲ್ಲಿ ನಾನು ನಿರಂತರ ನಿಮ್ಮಲ್ಲಿಇರುವೆ. ಆದರೆ ಹಲವಾರು ಸಂಯಮಿಗಳು ನನಗಾಗಿ ಕಂಬನಿ ಹಾಕಬಹುದು. ನಾನು ಅವರಲ್ಲಿ ಚಿರಮಣಿ ! ಅವರ ಅಗಣಿತ ಪ್ರೀತಿಯು ನನ್ನನ್ನು. ಸದಾಕಾಲ ಅವರ ಬಳಿಯಿರುಸುವುದು.... ನನಗಾಗಿ ಕಂಬನಿ ಹಾಕುವಿರಾ?
ಒಂದು ದಿನ ನನ್ನ ಕುಂಚದ ಬಡಿತ ನಿಲ್ಲಬಹುದು... ನಾನು ಚಿತ್ರಿಸಲು ಅಸಮರ್ಥನಾಗಬಹುದು. ಜೀವನದ ಆ ದಿನವನ್ನು ನಾನು ನನ್ನ ಕೊನೆಯ ದಿನವೆಂದು ಹೇಳಬಹುದು. ಅಲ್ಲ ಅದು ನನ್ನ ಕೊನೆಯಲ್ಲ. ಅಹುದು ಕಲಾವಿದನಿಗೆ ಮತ್ತು ಸಾಹಿತಿಗಳಿಗೆ
ಕೊನೆಯಿಲ್ಲ. ಆತನ ಜಿಇವನಕ್ಕೆ ಕೊನೆಯಿಲ್ಲವಲ್ಲ. ಎಲ್ಲವೂ ಭ್ರಮೆಯ ನಿರಸಕ್ಕೆ ನಾದವನ್ನು ಕೊಟ್ಟಂತೆ, ದೂರದಲ್ಲಿ ಹಕ್ಕಿಯೊಂದು ಹಾರುತ್ತಾ, ಹಾರುತ್ತಾ ಹೇಳುವುದು. ಗೆಳೆಯಾ - ಬಾ- ಎನ್ನಲ್ಲಿ ವಿಲೀನವಾಗು. ನಿನ್ನ ನಿಜವಾದ ಅಂತಸ್ತು ಎನ್ನಲ್ಲಿ ಇರುವುದು. ನಿನ್ನ ನಿಜವಾದ ಪ್ರೀತಿಯೂ ಎನ್ನಲ್ಲಿ ಇರುವುದು. ನನಗೂ ಅಣಿಸುವುದು....
ಜಾನೆವಾಲೇ ಕಬಿ ನಹಿ ಆತೇ
ಜಾನೆವಾಲೋಂಕೀ ಯಾದ ಆತೀ
ಹೈ... .. ಅಂತ...
- ದೇವದಾಸ